Arecanut and Copra Price: ಕೊಬ್ಬರಿಗೆ ಬಂಪರ್ ಬೆಲೆ! ಅಡಿಕೆ ಧಾರಣೆ ಹೇಗಿದೆ?

ಬೆಲೆ ಏರಿಕೆಗಾಗಿ ಕಾದು ಕಾದು ಸುಸ್ತಾಗಿದ್ದ ತೆಂಗು ಬೆಳೆಗಾರರಿಗೆ ಈಗ ಅಲ್ಪ ಸಮಾಧಾನ ಸಿಕ್ಕಂತಾಗಿದೆ. ಕಳೆದ ಕೆಲವು ದಿನಗಳಿಂದ ಕೊಬ್ಬರಿ ಬೆಲೆಯಲ್ಲಿ ಸತತವಾಗಿ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಭರವಸೆ ಮೂಡಿಸಿದೆ. ಈ ವರ್ಷ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ 10,000 ತಲುಪಿದರು ಸಾಕು ಎನ್ನುವಂತಾಗಿತ್ತು, ಇದೀಗ ಕೊಬ್ಬರಿ ಧಾರಣೆ 12,000 ರೂಪಾಯಿ ದಾಟಿದ್ದು ಮತ್ತಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಅಡಿಕೆ ಧಾರಣೆ ಪ್ರತಿ ದಿನ ಏರಿಳಿತ ಕಾಣುತ್ತಿದೆ.

55,000 ಗಡಿ ತಲುಪಿ ಅಡಿಕೆ ಬೆಳೆಗಾರರಲ್ಲಿ ಬೆಲೆ ಏರಿಕೆಯ ಭರವಸೆ ಮೂಡಿಸಿದ್ದ ರಾಶಿ ಅಡಿಕೆ ಬೆಲೆ ಮತ್ತೆ ಇಳಿಕೆಯಾಗಿದೆ. 50,000 ರೂಪಾಯಿಗಿಂತ ಕಡಿಮೆ ಬೆಲೆಗೆ ಕುಸಿದಿದ್ದು, ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

Copra and Arecanut Price in Karnataka on August 24th

ಚಿತ್ರದುರ್ಗ ಅಡಿಕೆ ಮಾರುಕಟ್ಟೆಯಲ್ಲಿ ಶನಿವಾರ ರಾಶಿ ಅಡಿಕೆ ಧಾರಣೆ ಕನಿಷ್ಠ 46,100 ರೂಪಾಯಿ ಇದ್ದರೆ ಗರಿಷ್ಠ 46,500 ರೂಪಾಯಿಗೆ ಮಾರಾಟವಾಗಿದೆ. ಕೆಂಪುಗೋಟು ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹27,600 ಇದ್ದರೆ ಗರಿಷ್ಠ ₹28,000 ಆಗಿತ್ತು.

ಸೊರಬ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹32,199 ಮತ್ತು ಗರಿಷ್ಠ ₹48,099 ಆಗಿತ್ತು. ಚಾಲಿ ಅಡಿಕೆ ಧಾರಣೆ ಕನಿಷ್ಠ ₹30,313 ಇದ್ದರೆ ಗರಿಷ್ಠ ಬೆಲೆ ₹30,813 ಆಗಿತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 30,000 ರೂಪಾಯಿ ಇದ್ದು ಗರಿಷ್ಠ ಬೆಲೆ 48,519 ರೂಪಾಯಿ ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಕುಂದಾಪುರ ಹಣ್ಣು ₹30,000 ₹39,000 ₹35,500
2 ಸೊರಬ ಚಾಲಿ ₹30,313 ₹31,813 ₹31,558
3 ಸೊರಬ ಗೊರಬಲು ₹26,313 ₹26,313 ₹26,313
4 ಸೊರಬ ರಾಶಿ ₹32,199 ₹48,099 ₹41,814
5 ಸೊರಬ ಸಿಪ್ಪೆಗೋಟು ₹14,313 ₹16,313 ₹16,214
6 ಬಂಟ್ವಾಳ ಕೋಕಾ ₹18,000 ₹28,500 ₹23,500
7 ಬಂಟ್ವಾಳ ಹೊಸ ವೆರೈಟಿ ₹28,500 ₹39,500 ₹39,000
8 ಚಿತ್ರದುರ್ಗ ಅಪಿ ₹46,600 ₹47,000 ₹46,800
9 ಚಿತ್ರದುರ್ಗ ಬೆಟ್ಟೆ ₹33,600 ₹34,000 ₹33,800
10 ಚಿತ್ರದುರ್ಗ ರಾಶಿ ₹46,100 ₹46,500 ₹46,300
11 ಹೊನ್ನಾವರ ಹಣ್ಣು ₹32,000 ₹34,500 ₹33,250
12 ಹೊಸನಗರ ಕೆಂಪು ಗೋಟು ₹27,599 ₹31,511 ₹30,599
13 ಹೊಸನಗರ ರಾಶಿ ₹45,821 ₹48,910 ₹47,399
14 ಶಿವಮೊಗ್ಗ ಗೊರಬಲು ₹15,000 ₹32,509 ₹30,799
15 ಶಿವಮೊಗ್ಗ ರಾಶಿ ₹30,000 ₹48,519 ₹48,009
16 ಶಿವಮೊಗ್ಗ ಸರಕು ₹52,400 ₹84,130 ₹61,009
17 ಸಿದ್ದಾಪುರ ಬಿಳೆ ಗೊಟು ₹24,699 ₹26,699 ₹24,699
18 ಸಿದ್ದಾಪುರ ಚಾಲಿ ₹32,209 ₹35,099 ₹34,499

ಕೊಬ್ಬರಿ ಬೆಲೆ ಹೇಗಿದೆ?

12 ಸಾವಿರದ ಗಡಿ ದಾಟಿರುವ ಕೊಬ್ಬರಿ ಬೆಳೆಗಾರರಿಗೆ ಸಂತಸ ಮೂಡಿಸಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕನಿಷ್ಠ 9,780 ರೂಪಾಯಿ ಗರಿಷ್ಠ 12,006 ರೂಪಾಯಿ ಆಗಿತ್ತು. ಕೆಆರ್ ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 9,780 ರೂಪಾಯಿ ಮತ್ತು ಗರಿಷ್ಠ 9,780 ರೂಪಾಯಿ ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಕೆ.ಆರ್.ಪೇಟೆ ಕೊಬ್ಬರಿ ₹9,780 ₹9,780 ₹9,780
2 ತಿಪಟೂರು ಕೊಬ್ಬರಿ ₹11,700 ₹12,006 ₹11,700
3 ಅರಸೀಕೆರೆ ಕೊಬ್ಬರಿ ₹9,500 ₹11,767 ₹11,370
4 ಮಧುಗಿರಿ ಕೊಬ್ಬರಿ ₹8,500 ₹9,500 ₹9,000
5 ತುರುವೇಕೆರೆ ಕೊಬ್ಬರಿ ₹12,000 ₹12,000 ₹12,000
6 ಚನ್ನರಾಯಪಟ್ಟಣ ಕೊಬ್ಬರಿ ₹10,000 ₹12,000 ₹12,000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+