• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಫಿ ಮಂಡಳಿಯಿಂದ ಡಿಜಿಟಲ್ ತಂತ್ರಜ್ಞಾನ ಪರಿಚಯ, ಎಷ್ಟೆಲ್ಲ ಅನುಕೂಲ!

|

"ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿದಾಗ ಅದರಿಂದ ಸಕಾರಾತ್ಮಕ ಹಾಗೂ ವಿಚ್ಛಿದ್ರಕಾರಿ ಬದಲಾವಣೆ ತರುವ ವಿಭಿನ್ನವಾದ ಗುಣ ಹೊಂದಿದೆ. ಇದು ಬದಲಾಗುತ್ತಲೇ ಇರುತ್ತದೆ. ತಂತ್ರಜ್ಞಾನದ ಶಕ್ತಿಯನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ನಮಗೆ ಬಿಟ್ಟಿದ್ದು. ದೇಶದಾದ್ಯಂತ ಕಾಫಿ ವಲಯದಲ್ಲಿ ತೊಡಗಿಕೊಂಡ ರೈತರ ದೀರ್ಘಾವಧಿ ಸುಸ್ಥಿರ ಜೀವನೋಪಾಯಕ್ಕೆ ತಂತ್ರಜ್ಞಾನದ ಸಾಮರ್ಥ್ಯ ತರಬೇಕಿದೆ".

-ಹೀಗೆ ಹೇಳಿದವರು ಕಾಫಿ ಮಂಡಳಿ ಕಾರ್ಯದರ್ಶಿ ಹಾಗೂ ಸಿಇಒ, ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣ. "ಈ ಅಪ್ಲಿಕೇಷನ್ ಗಳು ಮತ್ತು ಪರಿಹಾರಗಳು ಆರಂಭದ ಹಂತದಲ್ಲಿವೆ. ಮುಂದಿನ ಹಾದಿ ಇನ್ನೂ ತುಂಬ ದೂರ ಇದೆ. ತುಂಬ ಕಡಿಮೆ ಸಮಯದಲ್ಲಿ ನಾವು ಬಹಳ ಕೆಲಸ ಮಾಡಬೇಕಿದೆ" ಎಂದರು.

ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಕಾಫಿಗೆ ಬಂತು ಕೊಳೆರೋಗ ಭೀತಿ

ಸೆಪ್ಟೆಂಬರ್ 4, 2018ರಲ್ಲಿ ಅಪ್ಲಿಕೇಷನ್ ಗಳನ್ನು ಪರಿಚಯಿಸಿದ್ದೇವೆ. ಇವುಗಳಲ್ಲಿ ಕೆಲವು ದೇಶದಲ್ಲಿ ಮೊದಲು. ಬ್ಲಾಕ್ ಚೈನ್ ನಂಥ ತಂತ್ರಜ್ಞಾನ ಇದೇ ಮೊದಲ ಬಾರಿಗೆ ಬಳಸಲಾಗುತ್ತಿದೆ. ಐವಿಆರ್ ಆಧಾರಿತ ಬ್ಯಾಂಕ್ ಎಂಡ್ ಕಾರ್ಯಾಚರಣೆಗಳ ಸಮಸ್ಯೆಗಳನ್ನು ಶೀಘ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಪರಿಹರಿಸಲು ಇದರಿಂದ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಸಿಂಪಡಣೆ ಮಾಡುವ ಕಾರ್ಯಾಚರಣೆಗೆ ವಾಣಿಜ್ಯ ಸಚಿವರು ರಿಮೋಟ್ ಮೂಲಕ ಚಾಲನೆ ನೀಡಿದರು. ಕ್ವಿಡಿಚ್ ಇನೊವೇಷನ್ ಲ್ಯಾಬ್ ಮತ್ತು ಸ್ಟಾರ್ಕ್ ಡ್ರೋನ್ಸ್ ಜತೆ ಸೇರಿ ಕಾಫಿ ಮಂಡಳಿಯಿಂದ ಇದನ್ನು ಮಾಡಲಾಯಿತು. ಕೃಷಿಯ ಕೆಲ ಸೂಕ್ಷ್ಮ ಕೆಲಸಗಳಿಗೆ ನೆರವಾಗಲು ಈ ಸಂಸ್ಥೆಗಳು ಕೆಲಸ ಮಾಡುತ್ತಿವೆ.

ಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರು

ಮೊದಲ ಅಪ್ಲಿಕೇಷನ್ ಅನ್ನು 'ಕಾಫಿ ಕನೆಕ್ಟ್' ಎಂದು ಹೆಸರಿಸಲಾಗಿದೆ. ಕಾಫಿ ಮಂಡಳಿ ನೀಡುವ ಡೆಲಿವರಿ ಸೇವೆಯ ವಿಸ್ತರಣೆಯನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಈ ಅಪ್ಲಿಕೇಷನ್ ನೆರವಾಗುತ್ತದೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಸ್ಮಾರ್ಟ್ ಗರ್ವರ್ನ್ ಮೆಂಟ್ ಜತೆ ಕಾಫಿ ಮಂಡಳಿಯು ಸೇರಿ WINIT ಈ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದೆ.

ಇನ್ನು ಕಾಫಿ ಕೃಷಿ ತರಂಗ ಅಪ್ಲಿಕೇಷನ್ ಕೂಡ ಆರಂಭಿಸಲಾಯಿತು. ಇದು ಐವಿಆರ್ ಎಸ್ ಆಧಾರಿತ ಮೊಬೈಲ್ ಎಕ್ಸ್ ಟೆನ್ಷನ್ ಸೇವೆ. ನಿಯಮಿತ ಅವಧಿಯಲ್ಲಿ ಕಾಫಿ ಮಂಡಳಿಯ ಸೇವೆಗಳನ್ನು ಅತಿ ಹೆಚ್ಚು ತಲುಪಿಸುವ ಗುರಿ ಹೊಂದಿದೆ.

ಮಳೆ ಪ್ರಮಾಣ, ಕೀಟಗಳು ಹಾಗೂ ರೋಗ ಬಾಧೆ ಈ ಥರದ ಕೃಷಿ ಸವಾಲು ಮತ್ತು ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಹಿಡಿದ ನಂತರ ಕಾಫಿ ಮಂಡಳಿಯು EKA ಅನಲಿಟಿಕ್ಸ್ ಜತೆ ಸೇರಿ ಪ್ರಾಯೋಗಿಕ ಪರೀಕ್ಷಾರ್ಥವಾಗಿ ಕೆಲವು ಅಪ್ಲಿಕೇಷನ್ಸ್ ಅಭಿವೃದ್ಧಿಪಡಿಸಿದೆ.

ಸ್ಥಳೀಯ ಹವಾಮಾನ ಮುನ್ಸೂಚನೆ, ಕೀಟ ಗುರುತಿಸುವ ಅಪ್ಲಿಕೇಷನ್, ಎಲೆ ಉದುರುವ ಕಾಯಿಲೆ ಮುನ್ಸೂಚನೆ, ಬ್ಲಾಕ್ ಚೈನ್ ಆಧಾರಿತ ಮಾರ್ಕೆಟ್ ಪ್ಲೇಸ್ ಅಪ್ಲಿಕೇಷನ್ ಒಳಗೊಂಡಿದೆ.

English summary
“Technology, when used for good, has a distinctive characteristic of bringing positive and disruptive change. It is always evolving and it is up to us to harness the power of technology to bring in efficiency and ensure long term sustainable livelihoods to the lacks of farmers involved in coffee industry across the country” Mr. Srivatsa Krishna IAS, CEO & Secretary, Coffee Board, said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X