ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ಮಹಿಳೆಗೆ ಬೈಗುಳ, ವಿವಾದಕ್ಕೆ ಸ್ಪಷ್ಟನೆ ಕೊಟ್ಟರು ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ನವೆಂಬರ್ 19: ನಾನು ಪಲಾಯನವಾದಿಯಲ್ಲ, ನಾಳೆ ವಿಧಾನಸೌಧದಲ್ಲಿ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ರೈತರ ಪ್ರತಿಭಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ನಾನು ಆ ರೈತ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನಾನು ಮಾತನಾಡಿದ ವಿಡಿಯೋ ಮತ್ತೆ ನೋಡಿ, ನಾನು ಆಕೆಗೆ 'ತಾಯಿ' ಎಂದು ಕರೆದಿದ್ದೇನೆ ಎಂದು ಹೇಳಿದರು.

ಸುದೀರ್ಘವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಮಾಧ್ಯಮಗಳ ಮೇಲೂ ಅಸಮಾಧಾನ ಹೊರಹಾಕಿದರು. ನಾನು ಕೆಟ್ಟ ಉದ್ದೇಶದಿಂದ, ಅಗೌರವ ಮಾಡಬೇಕು ಎಂಬ ಉದ್ದೇಶದಿಂದ ಮಾತನಾಡಿಲ್ಲ, ಆ ಮಹಿಳೆಯನ್ನು 'ತಾಯಿ' ಎಂದು ಕರೆದು ಮಾತನಾಡಿದ್ದೇನೆ ಆದರೆ ನನ್ನ ಮಾತಿಗೆ ಬೇರೆ ಬಣ್ಣ ಬಳಿದು ತೋರಿಸಲಾಗಿದೆ ಎಂದು ಹೇಳಿದರು.

ರೈತರ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಯಾರು, ಏನು ಹೇಳಿದರು?ರೈತರ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಯಾರು, ಏನು ಹೇಳಿದರು?

ನಾನು ಬೇಜವಾಬ್ದಾರಿಯ ಮನುಷ್ಯ ಅಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಕೆಲಸ ಮಾಡುತ್ತಿದ್ದೇನೆ, ನಾನು ಯಾರ ಬಳಿಯಿಂದಲೂ ಹೇಳಿಸಿಕೊಂಡು ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಸಿಡಿಮಿಡಿಯಾದರು.

ಸಂಪುಟ ಸಭೆ ಕಾರಣ ಬೆಳಗಾವಿಗೆ ಹೋಗಿಲ್ಲ

ಸಂಪುಟ ಸಭೆ ಕಾರಣ ಬೆಳಗಾವಿಗೆ ಹೋಗಿಲ್ಲ

ನಾನು ಪಲಾಯನ ಮಾಡುವನಲ್ಲ, ನಾನು ಬೆಳಗಾವಿಗೆ ಹೋಗದೇ ಇರುವುದಕ್ಕೆ ಸಂಪುಟ ಸಭೆ ಕಾರಣ ಅಷ್ಟೆ ಅಲ್ಲದೆ. ನಾನು ರೈತ ಮುಖಂಡರಿಗೆ ಇಲ್ಲಿಗೆ ಬರಲು ವ್ಯವಸ್ಥೆ ಮಾಡಿದ್ದೇನೆ. ನಾನು ಪಲಾಯನ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡರು.

ಕಬ್ಬಿಗೆ ಬೆಂಬಲ ಬೆಲೆ ಸಿಗಲ್ಲ, ಬಾಕಿ ಮೊತ್ತ ದಕ್ಕಲ್ಲ, ರೈತರಿಗೆ ಕಹಿ, ಕಹಿ ಕಬ್ಬಿಗೆ ಬೆಂಬಲ ಬೆಲೆ ಸಿಗಲ್ಲ, ಬಾಕಿ ಮೊತ್ತ ದಕ್ಕಲ್ಲ, ರೈತರಿಗೆ ಕಹಿ, ಕಹಿ

ರೈತರ ಮೇಲೆ ಕ್ರಮ ಇಲ್ಲ

ರೈತರ ಮೇಲೆ ಕ್ರಮ ಇಲ್ಲ

ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ನಾವು ಸಹ ಪ್ರತಿಭಟನಾನಿರತ ರೈತರ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದು ಪೊಲೀಸರಿಗೆ ಸೂಚಿಸಿದ್ದೆವು ಎಂದ ಕುಮಾರಸ್ವಾಮಿ, ನಿನ್ನೆ ಬೆಳಗಾವಿ ಸುವರ್ಣಸೌಧದ ಗೇಟ್ ಬಾಗಿಲು ಒಡೆಯುವ ಕಾರ್ಯ ಮಾಡಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

'ರೈತ ಸಮುದಾಯಕ್ಕೆ, ಮಹಿಳೆಯರಿಗೆ ಅವಮಾನ ಮಾಡಿದ ಕುಮಾರಸ್ವಾಮಿ''ರೈತ ಸಮುದಾಯಕ್ಕೆ, ಮಹಿಳೆಯರಿಗೆ ಅವಮಾನ ಮಾಡಿದ ಕುಮಾರಸ್ವಾಮಿ'

ಸಂಪುಟ ಸಭೆಯಲ್ಲಿ 48 ಯೋಜನೆಗಳಿಗೆ ಅಸ್ತು

ಸಂಪುಟ ಸಭೆಯಲ್ಲಿ 48 ಯೋಜನೆಗಳಿಗೆ ಅಸ್ತು

ಸಂಪುಟ ಸಭೆಯಲ್ಲಿ 48 ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಅನುಮೋದನೆ ಪಡೆದಿದ್ದೇವೆ. ನಾನು ಬೆಳಗಾವಿಗೆ ಹೋಗಿ ರೈತರನ್ನು ಭೇಟಿ ಆಗದೇ ಇದ್ದುದ್ದಕ್ಕೆ ಇದೇ ಕಾರಣ. ಬೆಳಗಾವಿಗೆ ಹೋಗಲಾಗದ ಕಾರಣ ಅವರನ್ನು ಇಲ್ಲಿಗೆ ಬರಲು ಹೇಳಿದ್ದೇನೆ ಎಂದು ಅವರು ಹೇಳಿದರು.

ಒತ್ತಡದ ಭಾರಕ್ಕೆ ಕುಸಿಯುತ್ತಿರುವ ಕುಮಾರಸ್ವಾಮಿ, ವಿರೋಧಿಗಳಿಗೆ ಕೈಯಾರೆ ಕೋಲು ಕೊಟ್ಟರೆ! ಒತ್ತಡದ ಭಾರಕ್ಕೆ ಕುಸಿಯುತ್ತಿರುವ ಕುಮಾರಸ್ವಾಮಿ, ವಿರೋಧಿಗಳಿಗೆ ಕೈಯಾರೆ ಕೋಲು ಕೊಟ್ಟರೆ!

ಮನವಿ ಮಾಡಿದ್ದರೂ ಪ್ರತಿಭಟನೆ ಮಾಡಿದ್ದಾರೆ

ಮನವಿ ಮಾಡಿದ್ದರೂ ಪ್ರತಿಭಟನೆ ಮಾಡಿದ್ದಾರೆ

ನಾನು ಮೊನ್ನೆಯೇ ರೈತ ಮುಖಂಡರೊಡನೆ ದೂರವಾಣಿ ಮೂಲಕ ಮಾತನಾಡಿ ಮನವಿ ಮಾಡಿದ್ದೇನೆ, ಆದರೂ ಸಹ ಕೆಲವರು ಪ್ರತಿಭಟನೆ ಮಾಡಿದ್ದಾರೆ. ನನ್ನ ಪ್ರತಿಕೃತಿಗೆ ಕೊಡಲಿಯಿಂದ ಹೊಡೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಾಳೆ ರೈತ ಮುಖಂಡರ ಜೊತೆ ನೇರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ಮಾತಿಗೆ ಗರಂ

ಯಡಿಯೂರಪ್ಪ ಮಾತಿಗೆ ಗರಂ

ತಮ್ಮ ವಿರುದ್ಧ ಆರೋಪಗಳನ್ನು ಮಾಡಿದ ಬಿಜೆಪಿಯವರ ಮೇಲೆ ವಿಶೇಷವಾಗಿ ಯಡಿಯೂರಪ್ಪ ಅವರ ಮೇಲೆ ಹರಿಹಾಯ್ದ ಸಿಎಂ, ಗೊಬ್ಬರ ಕೇಳಿದ ರೈತನಿಗೆ ಗುಂಡು ಹೊಡೆಸಿದ ಸರ್ಕಾರ ನಿಮ್ಮದು, ನೀವು ರೈತರ ಕಾಳಜಿ ಬಗ್ಗೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣಗೆ ಪಾಠ ಮಾಡುತ್ತೀರಾ ಎಂದು ಪ್ರಶ್ನೆ ಕೇಳಿದರು.

English summary
CM Kumaraswamy said doing meeting with farmers tomorrow in Vidhan Soudha. He also said i did not scold woman my words were miss presented by media and political rival parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X