ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರ: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ, ನೋಂದಣಿ ಮಾಡಿಕೊಂಡವರ ವಿವರ ಇಲ್ಲಿದೆ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ, 13: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಕಳೆದ ವರ್ಷದಂತೆ ಈ ಬಾರಿಯೂ ಚಿಕ್ಕಬಳ್ಳಾಪುರ ರೈತರು ಉತ್ಸಾಹದಿಂದ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ರಾಗಿ ಖರೀದಿಸಲು ಜಿಲ್ಲೆಯಲ್ಲಿ ನೋಂದಣಿ ಕೇಂದ್ರಗಳನ್ನು ತೆರೆದಿದ್ದು, ಈವರೆಗೆ 8,545 ರೈತರು 1,20,767 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಪ್ರತಿ ಕ್ವಿಂಟಲ್‍ಗೆ 3,578 ರೂಪಾಯಿನಂತೆ ಪ್ರತಿ ಹೆಕ್ಟೇರ್‌ಗೆ 10 ಕ್ವಿಂಟಲ್‍ನಂತೆ ಗರಿಷ್ಠ 20 ಕ್ವಿಂಟಲ್ ರಾಗಿ ಖರೀದಿಸಲು ಸರ್ಕಾರ ಆದೇಶಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲೂಕು ಕೇಂದ್ರಗಳಲ್ಲಿ ರಾಗಿ ಮಾರಾಟಕ್ಕೆ ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿವೆ. ಸರ್ಕಾರ ರಾಜ್ಯದಲ್ಲಿ ನಿಗದಿಗೊಳಿಸಿರುವ ಗರಿಷ್ಠ ಮಿತಿಯನ್ನು ತಲುಪಿದ ನಂತರ ನೋಂದಣಿ ಪ್ರಕ್ರಿಯೆ ಬಂದ್ ಆಗಲಿದ್ದು, ರೈತರು ರಾಗಿ ಮಾರಾಟಕ್ಕೆ ನೋಂದಣಿ ಕೇಂದ್ರಗಳಿಗೆ ತೆರಳಿ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳುತ್ತಿದ್ದಾರೆ.

ಬಂಟ್ವಾಳ: ತುಂಬೆ ಡ್ಯಾಂ ಅಣೆಕಟ್ಟಿನ ಎತ್ತರ ಏರಿಕೆ: ನದಿಯಲ್ಲಿ ಮುಳುಗುತ್ತಿದೆ ಕೃಷಿಕನ ಬಾಳುಬಂಟ್ವಾಳ: ತುಂಬೆ ಡ್ಯಾಂ ಅಣೆಕಟ್ಟಿನ ಎತ್ತರ ಏರಿಕೆ: ನದಿಯಲ್ಲಿ ಮುಳುಗುತ್ತಿದೆ ಕೃಷಿಕನ ಬಾಳು

ಈ ಹಿಂದಿನ ಖರೀದಿಗೆ (2022ರ ಜನವರಿ) ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ನೋಂದಣಿ ಉತ್ತಮವಾಗಿದೆ. ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲೂಕಿನಲ್ಲಿ ರಾಗಿ ಮಾರಾಟಕ್ಕೆ ಗರಿಷ್ಠ ಪ್ರಮಾಣದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಗೌರಿಬಿದನೂರು ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಫೆಬ್ರವರಿ ಆರಂಭದಲ್ಲಿ ಖರೀದಿ ಪ್ರಕ್ರಿಯೆ

ಫೆಬ್ರವರಿ ಆರಂಭದಲ್ಲಿ ಖರೀದಿ ಪ್ರಕ್ರಿಯೆ

ಜೋಳ ಮತ್ತು ಭತ್ತಕ್ಕೆ ಜಿಲ್ಲೆಯಲ್ಲಿ ಒಬ್ಬರೂ ರೈತರು ಹೆಸರು ನೋಂದಾಯಿಸಿಕೊಂಡಿಲ್ಲ. ಕಳೆದ ವರ್ಷ 1.22 ಲಕ್ಷ ಕ್ವಿಂಟಲ್ ರಾಗಿ ಖರೀದಿ ಆಗಿತ್ತು. ಈ ಬಾರಿಯೂ ನಿರೀಕ್ಷಿತ ರಾಗಿ ನೋಂದಣಿ ಆಗಿದೆ. ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಆರಂಭದಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ತಿಳಿಸಿದರು.

ಭಾರಿ ಮಳೆಯಿಂದ ಇಳುವರಿ ಕುಸಿತ

ಭಾರಿ ಮಳೆಯಿಂದ ಇಳುವರಿ ಕುಸಿತ

ರೈತರು ಕೊಯ್ಲು, ಕಣಗೆಲಸದಲ್ಲಿ ತೊಡಗಿದ್ದಾರೆ. ನೋಂದಣಿ ಮತ್ತು ಖರೀದಿ ಅಧಿಕಾರಿಗಳು ಒಬ್ಬರೇ ಆಗಿದ್ದು, ನೋಂದಣಿ ಮುಗಿದ ನಂತರ ಖರೀದಿ ಆರಂಭವಾಗುತ್ತದೆ. ಫೆಬ್ರವರಿಯಲ್ಲಿ ಖರೀದಿಗೆ ಹೆಚ್ಚು ದಟ್ಟಣೆ ಇರುತ್ತದೆ ಎಂದರು. ಇನ್ನು ಪ್ರಸ್ತುತ ವರ್ಷ ಸುರಿದ ಭಾರಿ ಮಳೆಗೆ ಸಮಯಕ್ಕೆ ಸರಿಯಾಗಿ ರಾಗಿ ಬಿತ್ತನೆ ಮಾಡಲು ರೈತರಿಗೆ ಆಡಚಣೆ ಉಂಟಾಗಿತ್ತು.

ಎತ್ತರದ ಪ್ರದೇಶದಲ್ಲಿ ಉತ್ತಮ ಫಸಲು

ಎತ್ತರದ ಪ್ರದೇಶದಲ್ಲಿ ಉತ್ತಮ ಫಸಲು

ತಗ್ಗು ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ ಜಮೀನಿನಲ್ಲಿ ಮಳೆ ನೀರು ನಿಂತು ಪೈರು ಬೆಳವಣಿಗೆಯಲ್ಲಿ ಏರುಪೇರು ಆಗಿತ್ತು. ಎತ್ತರದ ಪ್ರದೇಶಗಳಲ್ಲಿ ಬೆಳೆದಂತಹ ರಾಗಿ ಬೆಳೆ ಉತ್ತಮವಾಗಿ ಬಂದರೂ, ತಗ್ಗು ಪ್ರದೇಶದಲ್ಲಿ ಬಿತ್ತನೆಯಾಗಿದ್ದ ರಾಗಿ ಬೆಳೆ ಇಳುವರಿ ಕುಸಿತ ಕಂಡಿದೆ. ಇದರಿಂದ ರೈತರಿಗೆ ಈ ಬಾರಿ ಹೆಚ್ಚು ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ರಾಗಿ ಮಾರಾಟಕ್ಕೆ ನೋಂದಣಿಯ ಪ್ರಮಾಣ

ರಾಗಿ ಮಾರಾಟಕ್ಕೆ ನೋಂದಣಿಯ ಪ್ರಮಾಣ

ಬಾಗೇಪಲ್ಲಿಯಲ್ಲಿ 154 ರೈತರು 2,153.50 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 2,060 ರೈತರು ಕ್ವಿಂಟಲ್ 29,459 ರಾಗಿ ಮಾರಾಟಕ್ಕೆ ಮುಂದಾಗಿದ್ದಾರೆ. ಇನ್ನು ಚಿಂತಾಮಣಿಯಲ್ಲಿ 1,315 ರೈತರು 17,851 ಕ್ವಿಂಟಲ್‌ ರಾಗಿಯನ್ನು ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಹಾಗೆಯೇ ಗೌರಿಬಿದನೂರಿನಲ್ಲಿ 546 ರೈತರು 7752.50 ಕ್ವಿಂಟಲ್‌ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಗುಡಿಬಂಡೆಯಲ್ಲಿ 1,712 ರೈತರು 24,770.50 ಕ್ವಿಂಟಲ್‌, ಶಿಡ್ಲಘಟ್ಟದಲ್ಲಿ 2,758 ರೈತರು 38,780.50 ಕ್ವಿಂಟಲ್‌ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, ಒಟ್ಟಾರೆಯಾಗಿ 8,545 ರೈತರು 1,20,767 ಕ್ವಿಂಟಲ್‌ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.

English summary
Chikkaballapur: Registration for millet purchase at support price, Details of farmers registered for millet sale in Chikkaballapur district, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X