ಗೋಧಿ ಹಿಟ್ಟಿನ ಬೆಲೆ ಏರಿಕೆ: ಸಂಗ್ರಹಿಸಿಟ್ಟಿದ್ದ ಗೋಧಿ ಮಾರಾಟಕ್ಕೆ ಸರ್ಕಾರ ನಿರ್ಧಾರ, ಎಷ್ಟು ಮಾರಾಟವಾಗಲಿದೆ?

ದೇಶದಲ್ಲಿ ಗೋಧಿ ಹಿಟ್ಟು (ಅಟ್ಟಾ) ಬೆಲೆ ಏರಿಕೆ, ಈ ಬೆಲೆ ಏರಿಕೆ ಸಮಸ್ಯೆಗೆ ಸರ್ಕಾರಿ ಕೈಗೊಂಡ ಕ್ರಮಗಳು, ದೇಶದಲ್ಲಿ ಅಗತ್ಯದಷ್ಟು ಗೋಧಿ ದಾಸ್ತಾನು ಮಾಡಿಕೊಂಡಿರುವ ಕೇಂದ್ರ ಸರ್ಕಾರ ಮಾರುಕಟ್ಟೆಗೆ ಎಷ್ಟು ಲಕ್ಷ ಟನ್ ಗೋಧಿ ಮಾರಾಟ ಮಾಡಲಿದೆ ಎಂದು ಆಹಾರ ಇಲಾಖೆ ಸುಳಿವು ನೀಡ

ಬೆಂಗಳೂರು, ಜನವರಿ 25: ದೇಶದಲ್ಲಿ ಸದ್ಯ ಗೋಧಿ ಹಿಟ್ಟು (ಅಟ್ಟಾ) ಮಾರಾಟ ಬೆಲೆ ಕೆ.ಜಿಗೆ ಸುಮಾರು 38 ರೂ.ಗೆ ಹೆಚ್ಚಾಗಿದೆ. ಈ ಗೋಧಿ ಮತ್ತು ಗೋಧಿ ಹಿಟ್ಟಿನ (ಅಟ್ಟಾ) ದರ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಸಂಗ್ರಹಿಸಿಟ್ಟಿದ್ದ ಗೋಧಿ ಪೈಕಿ 30 ಲಕ್ಷ ಟನ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಆಹಾರ ಸಚಿವಾಲಯವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ 30ಲಕ್ಷ ಟನ್ ಗೋಧಿ ಮಾರುಕಟ್ಟೆಗೆ ಬಿಡಲಿದೆ ಎಂದು ತಿಳಿಸಿದೆ. ಗೋಧಿ ಮತ್ತು ಗೋಧಿ ಹಿಟ್ಟಿನ (ಅಟ್ಟಾ) ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಚಿಲ್ಲರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಶೀಘ್ರವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಆಹಾರ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ಕಳೆದ ವಾರ ಹೇಳಿದ್ದರು.

ಭಾರತೀಯ ಆಹಾರ ನಿಗಮಕ್ಕೆ (FCI) ಆಹಾರ ಧಾನ್ಯ ಅದರಲ್ಲೂ ಗೋಧಿ ಮತ್ತು ಅಕ್ಕಿಯನ್ನು ಕಾಲಕಾಲಕ್ಕೆ ಸಮರ್ಪಕವಾಗಿ ಅಗತ್ಯಕ್ಕೆ ತಕ್ಕಂತೆ ಮುಕ್ತ ಮಾರುಕಟ್ಟೆಯಲ್ಲಿ ಬೃಹತ್ ಗ್ರಾಹಕರು ಹಾಗೂ ಖಾಸಗಿ ವ್ಯಾಪಾರಿಗಳಿಗೆ ಈ ಮೊದಲೇ ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತದೆ. ಹಿಂಗಾರು ಋತುವಿನಲ್ಲಿ ಪೂರೈಕೆ ಹೆಚ್ಚಳ ಮಾಡುವ ಜೊತೆಗೆ ಮುಕ್ತ ಮಾರುಕಟ್ಟೆ ಬೆಲೆಗಳನ್ನು ಮಧ್ಯಮಗೊಳಿಸುವುದು ಇದರ ಸರ್ಕಾರದ ಉದ್ದೇಶವಾಗಿದೆ. ಹಿಟ್ಟಿನ ಗಿರಣಿಗಾರರು ಕೂಡ ಎಫ್‌ಸಿಐನಿಂದ ಗೋಧಿ ದಾಸ್ತಾನು ಮಾರುಕಟ್ಟೆಗೆ ಮಾರಾಟಕ್ಕೆ ಬಿಡುವಂತೆ ಆಗ್ರಹಿಸಿದ್ದರು ಎನ್ನಲಾಗಿದೆ.

Central decided to sell 30 lakh tonnes stored wheat, due to increased of retail price of wheat flour.

ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ಶೀಘ್ರ

ಗೋಧಿ ಮತ್ತು ಗೋಧಿ ಹಿಟ್ಟು (ಅಟ್ಟಾ) ಬೆಲೆ ಏರಿಕೆಯಾಗುತ್ತಿರುವುದು ಖಾತ್ರಿಯಾಗಿದೆ. ಈ ಬೆಲೆ ಏರಿಕೆ ಬಗ್ಗೆ ಸರ್ಕಾರ ಗಮನ ನೆಟ್ಟಿದೆ. ಈ ಸಮಸ್ಯೆ ಬಗ್ಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ತಿಳಿಸಿದೆ. ಎಫ್‌ಸಿಐ ಗೋಡೌನ್‌ಗಳಲ್ಲಿ ಗೋಧಿ ಮತ್ತು ಅಕ್ಕಿ ದಾಸ್ತಾನು ಸಮರ್ಪಕವಾಗಿದೆ. ದೇಶೀಯ ಉತ್ಪಾದನೆಯಲ್ಲಿ ಸ್ವಲ್ಪ ಕುಸಿತ ಮತ್ತು ಕೇಂದ್ರೀಯ ಪೂಲ್‌ಗಾಗಿ ಎಫ್‌ಸಿಐನ ಸಂಗ್ರಹಣೆಯಲ್ಲಿ ತೀವ್ರ ಕುಸಿತದ ನಂತರ ಬೆಲೆಗಳನ್ನು ನಿಯಂತ್ರಿಸಲು ಕಳೆದ ಮೇ ತಿಂಗಳಲ್ಲಿ ಸರ್ಕಾರ ಗೋಧಿ ರಫ್ತು ಮೇಲೆ ನಿಷೇಧ ಹೇರಿತ್ತು.

2021-22ರ ಬೆಳೆ ಋತುವಿನಲ್ಲಿ (ಜುಲೈ-ಜೂನ್) ಭಾರತದ ಗೋಧಿ ಉತ್ಪಾದನೆಯು 109.59 ಮಿಲಿಯನ್ ಟನ್‌ ಆಗಿದ್ದು. ಇದೇ ಅವಧಿಯಲ್ಲಿ ಅದರ ಹಿಂದಿನ ವರ್ಷ 106.84 ಮಿಲಿಯನ್ ಟನ್‌ ಇತ್ತು. ಕಳೆದ ವರ್ಷ ಸುಮಾರು 43 ಮಿಲಿಯನ್ ಟನ್‌ ನಷ್ಟು ಗೋಧಿ ಸಂಗ್ರಹಣೆ ಆಗಿತ್ತು. ಪ್ರಸಕ್ತ ರಾಬಿ ಹಂಗಾಮಿನಲ್ಲಿ ಗೋಧಿಯನ್ನು ರೈತರು ವ್ಯಾಪಕವಾಗಿ ಬಿತ್ತನೆ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+