ಆಲೂಗಡ್ಡೆ ಬೆಳೆದ ರೈತರನ್ನು ಕೋರ್ಟಿಗೆಳೆದ ಪೆಪ್ಸಿಕೋ ಬಹಿಷ್ಕಾರಕ್ಕೆ ಅಭಿಯಾನ
ಅಹಮದಾಬಾದ್, ಏಪ್ರಿಲ್ 26: ತಮಗೆ ಅರಿಯದೆ ಮಾಡಿದ ತಪ್ಪಿಗೆ ಗುಜರಾತ್‌ನ ಕೆಲವು ರೈತರು ಕೋರ್ಟ್ ಮೆಟ್ಟಿಲೇರುವಂತಾಗಿದೆ. ಕೇವಲ ಐದಾರು ಎಕರೆ ಜಮೀನು ಹೊಂದಿರುವ ಈ ರೈತರು ಮಾಡಿದ ತಪ್ಪು ಅನುಮತಿಯಿಲ್ಲದೆ ಬೇರೆ ತಳಿಯ ಅಲೂಗಡ್ಡೆ ಬೆಳೆದಿದ್ದು. ಅದಕ್ಕೆ ಪ್ರತಿಯೊಬ್ಬರೂ ತೆರಬೇಕಾಗಿರುವ ದಂಡ ಬರೋಬ್ಬರಿ 1.05 ಕೋಟಿ ರೂ.
ಈ ರೈತರನ್ನು ಕೋರ್ಟ್‌ಗೆ ಎಳೆದಿರುವುದು ದೈತ್ಯ ಕಂಪೆನಿ ಪೆಪ್ಸಿಕೋ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಆಘಾತ ಉಂಟುಮಾಡಿರುವ ಕಂಪೆನಿ ವಿರುದ್ಧ ರೈತ ಪರ ಮನಸ್ಸುಗಳು ಸಿಡಿದೆದ್ದಿವೆ. ರೈತರನ್ನು ಉಳಿಸಲು ಪೆಪ್ಸಿಕೋ ಮತ್ತು ಲೇಸ್ ಬಹಿಷ್ಕರಿಸಿ ಎಂಬ ಅಭಿಯಾನ ಆರಂಭಿಸಿದ್ದಾರೆ.
#WeDontWantThisJunk #BoycottPepsi #BoycottLays #StandWithFarmers #UnitedForOurselves ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಆರಂಭಿಸಲಾಗಿದೆ. ಭಾರತೀಯ ಕುಲಾಂತರಿ ವಿರೋಧಿ ಮೈತ್ರಿಕೂಟ ಈ ಅಭಿಯಾನದ ನೇತೃತ್ವ ವಹಿಸಿದೆ. ಇದಕ್ಕೆ ಅನೇಕ ರೈತ ಸಂಘಟನೆಗಳು ಕೈಜೋಡಿಸಿದ್ದು, ಪೆಪ್ಸಿಕೋದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿವೆ.
ನಮ್ಮ ನೆಲ ಮತ್ತು ನೀರನ್ನು ಬಳಸಿಕೊಂಡು ಪೆಪ್ಸಿಕೋ ನಮಗೆ ವಿಷವುಣಿಸುತ್ತಿದೆ. ಅದರ ಜತೆಗೆ ನಮ್ಮದೇ ಬಡ ರೈತರ ಮೇಲೆ ಪ್ರಹಾರ ನಡೆಸುತ್ತಿದೆ. ಹೀಗಾಗಿ ಅದರ ಎಲ್ಲ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಗಿರುವುದು ಏನು?
ಗುಜರಾತ್‌ನ ಅಹ್ಮದಾಬಾದ್‌ನ ಕೆಲವು ಸಣ್ಣ ರೈತರು ತಮ್ಮ ಬಳಿ ಇರುವ 3-4 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದರು. ಇವರಲ್ಲಿ ನಾಲ್ಕು ಮಂದಿಯ ವಿರುದ್ಧ ಈ ತಿಂಗಳ ಆರಂಭದಲ್ಲಿ ಪೆಪ್ಸಿಕೋ ದಾವೆ ಹೂಡಿತ್ತು. ಈ ರೈತರು ಬೆಳೆದು, ಮಾರಾಟ ಮಾಡಿದ ಆಲೂಗಡ್ಡೆ ತನ್ನ 'ಲೇಸ್' ಉತ್ಪನ್ನಕ್ಕೆ ಬಳಸುವ ಪೇಟೆಂಟ್ ಹೊಂದಿರುವ ತಳಿಯಾಗಿದೆ. ತನ್ನ ಬಳಿ ಇರುವ ಪೇಟೆಂಟ್ ತಳಿಯ ಅಲೂಗಡ್ಡೆಯನ್ನು ಬೆಳೆದಿರುವುದಕ್ಕೆ ಉಂಟಾದ ನಷ್ಟವನ್ನು ಭರಿಸಲು ರೈತರು ತಲಾ 1.05 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅದು ವಾದಿಸಿದೆ.
ಪೆಪ್ಸಿಕೋ ವಿರುದ್ಧ ಆಕ್ರೋಶ
ಮೊದಲೇ ಸಂಕಷ್ಟದಲ್ಲಿರುವ ರೈತರ ಮೇಲೆ ವಿದೇಶಿ ಕಂಪೆನಿಯೊಂದು ಈ ರೀತಿ ದಾಳಿ ಮಾಡಿರುವುದು ಕೃಷಿ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಬಡ ರೈತರ ಮೇಲೆ ಆರ್ಥಿಕ ಹೊರೆ ಹೇರಲು ಮುಂದಾಗಿರುವ ಪೆಪ್ಸಿಕೋ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಇದರ ಉತ್ಪನ್ನಗಳನ್ನು ನಿಷೇಧಿಸುವಂತೆ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನಕ್ಕೆ ರೈತರು ಮಾತ್ರವಲ್ಲದೆ, ವಿವಿಧ ಸಂಘಟನೆಗಳ ಕಾರ್ಯಕರ್ತರು, ಹೋರಾಟಗಾರರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ.
|
ನೀರಿಗೂ ದಾವೆ ಹೂಡದಿದ್ದರೆ ಸಾಕು
ಲೇಸ್ ಚಿಪ್ಸ್‌ಗಳಲ್ಲಿ ಬಳಸುವ ಆಲೂಗಡ್ಡೆ ತಳಿಯನ್ನು ಬೆಳೆಯುವ ತನ್ನ ಹಕ್ಕಿಗೆ ಧಕ್ಕೆ ತಂದಿರುವುದಕ್ಕೆ ಪೆಪ್ಸಿಕೋ ನಾಲ್ವರು ಗುಜರಾತಿ ರೈತರು 1.05 ಕೋಟಿ ರೂ ನೀಡುವಂತೆ ದಾವೆ ಹೂಡಿದೆ. ಪೆಪ್ಸಿಯಲ್ಲಿ ಬಳಸಿದ ಇದೇ ನೆಲದ ನೀರನ್ನು ಬಳಸುತ್ತಿರುವುದಕ್ಕೆ ಜನರ ಮೇಲೆ ಪೆಪ್ಸಿಕೋ ದಾವೆ ಹೂಡಲಾರದು ಎಂದು ಆಶಿಸೋಣ ಎಂದು ರವಿ ನಾಯರ್ ಎಂಬುವವರು ಹೇಳಿದ್ದಾರೆ.
|
ರೈತರು ಬೇಕೇ ವಿನಾ, ವಿಷವಲ್ಲ
ಬೈ ಬೈ ಪೆಪ್ಸಿ. ನಮಗೆ ನಮ್ಮ ರೈತರು ಮತ್ತು ಅವರ ಒಳಿತು ಮುಖ್ಯವೇ ಹೊರತು ನಿಮ್ಮ ವಿಷವಲ್ಲ. ನಿಮ್ಮ ಗಂಟುಮೂಟೆ ಕಟ್ಟಿ ತೊಲಗಿ ಎಂದು ಮಾನ್ಸಿ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಹಾಸ್ಯಾಸ್ಪದ
ಆಲೂಗಡ್ಡೆ ಬೆಳೆದಿರುವುದಕ್ಕೆ ತಲಾ ಒಂದು ಕೋಟಿ ರೂ. ದಾವೆ! ಪೆಪ್ಸಿ ಇಂಡಿಯಾ ಬಿಲಿಯನ್ ಸಂಪಾದಿಸಲು ನಮ್ಮ ಜನ ಸಂಪನ್ಮೂಲವನ್ನು, ನಮ್ಮ ಭೂಮಿಯನ್ನು ಮತ್ತು ನಮ್ಮ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಳಿಕ ಹಾಸ್ಯಾಸ್ಪದ ದಾವೆಗಳ ಮೂಲಕ ನಮ್ಮ ಜನರನ್ನೇ ಕಾನೂನು ಸಮರಕ್ಕೆ ಸಿಲುಕಿಸುತ್ತಿದೆ ಎಂದು ಮೀತ್ ಗೋಯಲ್ ಎಂಬುವವರು ಕಿಡಿಕಾರಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications