• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬಿಎ ಪದವೀಧರ ಹಳ್ಳಿಗೆ ಬಂದ, ಡ್ರ್ಯಾಗನ್ ಕೃಷಿಯಲ್ಲಿ ಯಶಸ್ಸು ಕಂಡ!

|
Google Oneindia Kannada News

ಬೀದರ್, ಜುಲೈ 15: ಎಂಬಿಎ ಓದಿದ ಯುವಕ ಬೆಂಗಳೂರಿನ ಖಾಸಗಿ ಕಂಪನಿ ಫ್ಲಿಪ್‌ ಪ್‌ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಯೂಟ್ಯೂಬ್‌ನಲ್ಲಿ ಡ್ರ್ಯಾಗನ್ ಪ್ರೂಟ್ ಬೇಸಾಯದ ಕುರಿತು ತಿಳಿದುಕೊಂಡ. ಹಳ್ಳಿಗೆ ವಾಪಸ್ ಆಗಿ ತನ್ನ ತಂದೆಯ ದುಡಿಮೆಗೆ ನೆರವಾದ. ತಮ್ಮ ಹೊಲದಲ್ಲಿ ಡ್ರ್ಯಾಗನ್ ಹಣ್ಣು ಬೆಳೆಸಿ ಈಗ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಲಿದ್ದರೂ ಅಪ್ಪ ಹೊಲದಲ್ಲಿ ಶ್ರಮವಹಿಸಿ ದುಡಿಯುವುದಕ್ಕೆ ಸಹಾಯ ಮಾಡಬೇಕು ಎಂದು ಆಲೋಚಿಸುತ್ತಿದ್ದ. ಐದಾರು ಎಕರೆಯ ಕೃಷಿಯ ಜಮೀನಿನಲ್ಲಿ ಯಾವುದೇ ಲಾಭವು ಬರುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಬಿಎ ಪದವೀಧರ ಶ್ರೀನಿವಾಸ ಯೂಟ್ಯೂಬ್ ಚಾನಲ್ ಮೂಲಕ ಪರಿಚಿತರಾಗಿದ್ದ ಹಾಗೂ ಡ್ರ್ಯಾಗನ್ ಕೃಷಿಯಲ್ಲಿ ಯಶಸ್ಸು ಕಂಡಿದ್ದ ತೆಲಂಗಾಣ ಮೂಲದ ಡಾ. ಶ್ರೀನಿವಾಸನ್ ಮಾರ್ಗದರ್ಶನ ಪಡೆದುಕೊಂಡ.

ಬೀದರ್: ಮೊದಲ ಬಾರಿಗೆ ಯುದ್ಧ ವಿಮಾನ ಹಾರಿಸಿದ ತಂದೆ- ಮಗಳುಬೀದರ್: ಮೊದಲ ಬಾರಿಗೆ ಯುದ್ಧ ವಿಮಾನ ಹಾರಿಸಿದ ತಂದೆ- ಮಗಳು

ಒಂದು ವರ್ಷದ ಹಿಂದೆ ಬೀದರ್ ಜಿಲ್ಲೆಯಲ್ಲಿ ಭಾಲ್ಕಿ ತಾಲೂಕಿನ ಮೋರಂಬಿ ಎಂಬ ಗ್ರಾಮದಲ್ಲಿ ಸುಮಾರು 2000 ಡ್ರ್ಯಾಗನ್ ಹಣ್ಣಿನ ಸಸಿಗಳನ್ನು ನೆಟಿ ಮಾಡಿದ. ಶ್ರಮಪಟ್ಟು ಮಾಡಿದ ಕಾಯಕ ಈಗ ಕೈ ಹಿಡಿದಿದೆ. ಈ ಸಣ್ಣ ರೃತ ಕುಟುಂಬವು ಈಗ ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಇತರರಿಗೆ ಮಾದರಿಯಾಗಿದೆ.

ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳು ಎಂದಾಕ್ಷಣ ನಮಗೆ ಗೋಚರಿಸುವುದು ಈ ಪ್ರದೇಶದ ಬರ ಹಾಗೂ ನೀರಿನ ಹಾಹಾಕಾರ. ಹೀಗಿರುವಾಗ ಭಾಲ್ಕಿ ತಾಲೂಕಿನ ಮೋರಂಬಿ ಎಂಬ ಗ್ರಾಮದಲ್ಲಿ ಡ್ರ್ಯಾಗನ್ ಹಣ್ಣುಗಳನ್ನು ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ ಎಂಬಿಎ ಪದವೀಧರ ಶ್ರೀನಿವಾಸ್.

ಭಾಲ್ಕಿ ತಾಲೂಕಿನ ಮೋರಂಬಿ ಗ್ರಾಮದ ನಿವಾಸಿ ಅನಂತರಾವ್ ಇತ್ತಾಪ್ಪೆ ಕೃಷಿಕರು. ಇವರ ಮಗ ಎಂಬಿಎ ಪದವೀಧರ ಶ್ರೀನಿವಾಸ್ ಕೂಡ ಕೃಷಿ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಜೊತೆಗೆ ತಂದೆಯ ಜೊತೆ ಸೇರಿ ಡ್ರ್ಯಾಗನ್ ಹಣ್ಣುಗಳ ಕೃಷಿಗೆ ಕೈ ಹಾಕಿ ಯಶಸ್ಸು ಪಡೆದಿದ್ದಾರೆ.

 ತೋಟಗಾರಿಕೆ ಇಲಾಖೆ ಸಹಕಾರ

ತೋಟಗಾರಿಕೆ ಇಲಾಖೆ ಸಹಕಾರ

ಕೃಷಿಕ ಅನಂತರಾವ ಇತ್ತಾಪ್ಪೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಯೋಗದಲ್ಲಿ 90 ಸಾವಿರ ರೂಪಾಯಿ ಸಹಾಯ ಧನ ಪಡೆದುಕೊಂಡಿದ್ದರು ಹಾಗೂ ತಮ್ಮ ಸ್ವಂತ ಹಣ ಹೂಡಿ 6 ರಿಂದ 7 ಲಕ್ಷ ರೂಪಾಯಿ ಖರ್ಚು ಮಾಡಿ, ತೋಟಗಾರಿಕೆ ಇಲಾಖೆ ವತಿಯಿಂದ ಸಲಹೆ ಪಡೆದುಕೊಂಡು ಡ್ರ್ಯಾಗನ್ ಹಣ್ಣಿನ ಕೃಷಿ ಮಾಡಿ ಬೀದರ್ ಜಿಲ್ಲೆಗೆ ಮಾದರಿಯಾಗಿದ್ದಾರೆ.

 ಯೂಟ್ಯೂಬ್ ಚಾನೆಲ್‌ ನೋಡಿ ಕೃಷಿ

ಯೂಟ್ಯೂಬ್ ಚಾನೆಲ್‌ ನೋಡಿ ಕೃಷಿ

ಐದಾರು ಎಕರೆಯಲ್ಲಿ ಸಾಂಪ್ರದಾಯಿಕ ಕೃಷಿ ಮಾಡಿಕೊಂಡಿದ್ದರು ಅನಂತರಾವ ಇತ್ತಾಪ್ಪೆ. ಮಗ ಶ್ರೀನಿವಾಸ್ ಖಾಸಗಿ ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲಿದ್ದರೂ ಸುಮ್ಮನೆ ಕೂರಲಿಲ್ಲ. ಯೂಟ್ಯೂಬ್‌ನಲ್ಲಿ ಆಧುನಿಕ ಕೃಷಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಡಾ. ಶ್ರೀನಿವಾಸನ್ ಅವರ ಕೃಷಿ ನೋಡಿದ ಮೇಲೆ ಅವರನ್ನು ಪರಿಚಯ ಮಾಡಿಕೊಂಡ. ಅವರ ಮಾರ್ಗದರ್ಶನದ ಮೂಲಕ ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡಿದ್ದಾರೆ ತಂದೆ ಮತ್ತು ಮಗ.

 ಒಂದು ಡ್ರ್ಯಾಗನ್ ಹಣ್ಣಿನ ಸಸಿಗೆ 80 ರೂಪಾಯಿ

ಒಂದು ಡ್ರ್ಯಾಗನ್ ಹಣ್ಣಿನ ಸಸಿಗೆ 80 ರೂಪಾಯಿ

ಒಂದು ಡ್ರ್ಯಾಗನ್ ಹಣ್ಣಿನ ಸಸಿಗೆ ತಲಾ 80 ರೂಪಾಯಿಯಂತೆ ಹತ್ತಿರದ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಊರಿನಿಂದ ಒಟ್ಟು 500 ಸಸಿಗಳನ್ನು ತಂದರು. ಅದರ ಜೊತೆಗೆ ಒಂದು ಕಂಬಕ್ಕೆ 450 ರೂ.ಗೆ ನೀಡಿ ಒಟ್ಟು 500 ಪೋಲ್‌ಗಳನ್ನು ನೆಟ್ಟು ಡ್ರ್ಯಾಗನ್ ಹಣ್ಣಿನ ಸಸಿ ನಾಟಿ ಮಾಡಿದರು.

 ಡ್ರ್ಯಾಗನ್ ಪ್ರೂಟ್ ಮಾರುಕಟ್ಟೆ

ಡ್ರ್ಯಾಗನ್ ಪ್ರೂಟ್ ಮಾರುಕಟ್ಟೆ

ಹಣ್ಣನ್ನು ಹೈದರಾಬಾದ್ ಮಾರುಕಟ್ಟೆ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ 80ರಿಂದ 90 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಸಸಿ ನೆಟ್ಟ ಒಂದು ವರ್ಷಗಳ ಕಾಲ ಸ್ಟಾರ್ಟಪ್ ಅವಧಿಯ ಹಾಗೆ. ಒಂದು ವರ್ಷದ ನಂತರ ಹಣ್ಣುಗಳು ಬೆಳೆಯುತ್ತಿರುತ್ತವೆ.

'ಒನ್‌ ಇಂಡಿಯಾ ಕನ್ನಡ' ಜೊತೆ ಮಾತನಾಡಿರುವ ಶ್ರೀನಿವಾಸ್‌ ಅನಂತರಾವ ಇತ್ತಾಪ್ಪೆ, "ಬೆಳದಿರುವ ಡ್ರ್ಯಾಗನ್ ಹಣ್ಣಿನ ಸಸಿ ತಳಿಯು ಹೈಬ್ರಿಡ್ SIUM - ಸಿ ( ಕೆಂಪು ಬಣ್ಣ ) ಹೊಂದಿದೆ. ಡ್ರ್ಯಾಗನ್ ಪ್ರೂಟ್ ಪ್ರತಿ ಕೆಜೆಗೆ 90ರಿಂದ 100 ರೂ.ವರಿಗೂ ಮಾರಾಟವಾಗುತ್ತದೆ. ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಸ್ಥಳೀಯವಾಗಿ ಹಣ್ಣುಗಳನ್ನು ಮಾರಾಟ ಮಾಡಿದ್ದೇನೆ" ಎಂದರು.

 10 ಲೀಟರ್ ನೀರು ಸಾಕು

10 ಲೀಟರ್ ನೀರು ಸಾಕು

"ಬೇಸಿಗೆ ಕಾಲದಲ್ಲಿ ಒಂದು ಗಿಡಕ್ಕೆ ವಾರಕ್ಕೆ 10 ಲೀಟರ್‌ ನೀರು ಸಾಕಾಗುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಬೆಳೆ ಬರುತ್ತದೆ. ಒಮ್ಮೆ ನೆಡುವುದು ಕಷ್ಟದ ಕೆಲಸ. ಬಳಿಕ ನಿರ್ವಹಣೆ ಸುಲಭ. ನಮ್ಮ ಈ ಚಿಕ್ಕ ಕೃಷಿ ಭೂಮಿ ರಸ್ತೆ ಹತ್ತಿರ ಇರುವುದರಿಂದ ದಿನನಿತ್ಯವು ಗ್ರಾಮೀಣ ರೈತರು ಬಂದು ಡ್ರ್ಯಾಗನ್ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೇಳುತ್ತಿದ್ದಾರೆ. ನನ್ನ ಪ್ರಕಾರ ಒಂದು ಎಕರೆ ಕಡಿಮೆ ಪ್ರದೇಶದಲ್ಲಿ ಈ ಹಣ್ಣಿನ ನಾಟಿ ಮಾಡುವುದು ಸೂಕ್ತ. ಕಡಿಮೆ ಕೃಷಿಯ ಭೂಮಿಯನ್ನು ಹೊಂದಿರುವ ರೈತರಿಗೆ ಈ ಕೃಷಿ ಅನುಕೂಲ" ಎಂದು ಶ್ರೀನಿವಾಸ್‌ ಹೇಳಿದರು.

ಆರೋಗ್ಯಕ್ಕೆ ಭಾಗ್ಯ ಡ್ರ್ಯಾಗನ್ ಪ್ರೂಟ್

ಈ ಹಣ್ಣು ಅನೇಕ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಬಿಳಿ ರಕ್ತ ಕಣ ಹೆಚ್ಚಿಸುವಲ್ಲಿ ಈ ಹಣ್ಣಿನ ಪಾತ್ರ ಹಿರಿದಾಗಿದೆ. ಡೆಂಗ್ಯೂ, ಜ್ವರಕ್ಕೆ ಹೇಳಿ ಮಾಡಿಸಿದಂತಿವೆ ಈ ಡ್ರ್ಯಾಗನ್‌ ಪ್ರೂಟ್ಸ್.‌ ಅಜೀರ್ಣಕ್ಕೆ ಮದ್ದಾಗಿಯೂ ಈ ಹಣ್ಣು ಕೆಲಸ ಮಾಡುತ್ತದೆ.

ಶುಗರ್‌ ಕಂಟ್ರೋಲ್‌ಗೂ ಡ್ರ್ಯಾಗನ್‌ ಹಣ್ಣು ಪರಿಣಾಮಕಾರಿಯಾಗಿದೆ. ಶ್ವಾಸಕೋಶದ ಸಮಸ್ಯೆ, ಉಸಿರಾಟ ಸಮಸ್ಯೆಗಳಿಗೆ ಉಪಯೋಗಕಾರಿಯಾಗಿದೆ. ಮೂಳೆ ಬಲವರ್ದನೆ, ಹಲ್ಲುಗಳನ್ನು ಬಲಿಷ್ಟಗೊಳಿಸಲು, ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ ನೀಗಿಸಲು ಸಹಕಾರಿಯಾಗಿದೆ. ರೆಗ್ಯೂಲರ್‌ ಆಗಿ ಡ್ರ್ಯಾಗನ್‌ ಪ್ರೂಟ್‌ ಸೇವಿಸಿದರೆ ಚರ್ಮಕಾಂತಿ ವೃದ್ದಿಯಾಗುತ್ತದೆ.

English summary
Srinivas an MBA Graduate from Bidar, Karnataka who gave up his comfortable job and city life to become a full time farmer. He got success in dragon fruit farimng.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X