ಜಿಕೆವಿಕೆ ಆವರಣದಲ್ಲಿ ಹಳ್ಳಿಯಾದ ಬೆಂಗಳೂರು
ಬೆಂಗಳೂರು, ನ. 20 : ಅಲ್ಲಿ ಪಕ್ಕಾ ಹಳ್ಳಿಯ ವಾತಾವರಣ ಮೈದೆಳೆದಿತ್ತು. ನಗರದ ಜಿಕೆವಿಕೆ ಕಾಲೇಜು ಆವರಣದಲ್ಲಿ ಬುಧವಾರದಿಂದ ಕೃಷಿ ಕಲರವ ಆರಂಭವಾಗಿದೆ. ಕೃಷಿ ಮೇಳದ ಸಂಭ್ರಮದೊಂದಿಗೆ ರೈತನೆಡೆಗೆ ನೇರ ಮಾಹಿತಿ ಪ್ರವಾಹ.
ಸುಮಾರು 600 ಕ್ಕೂ ಹೆಚ್ಚು ಮಳಿಗೆಗಳು ಕೃಷಿ ಸಂಬಂಧಿ ಕತೆ ಹೇಳುತ್ತಾ ನಿಂತಿವೆ, ಕೃಷಿ ಯಂತ್ರೋಪಕರಣ, ಹೊಸ ಹೊಸ ಬೀಜದ ತಳಿ, ಸುಗಂಧ ಸಸ್ಯಗಳು, ಔಷಧಿ ಸಸ್ಯಗಳು, ರೊಘ ತರುವ ಕೀಟದ ಬಗ್ಗೆ ಮಾಹಿತಿ, ನೀರಾವರಿ, ಮಾದರಿ ಗ್ರಾಮ....ಹೀಗೆ ಹತ್ತು ಹಲವು ರೈತ ಸ್ನೇಹಿ ಸಂಗತಿಗಳು ಮೈದೆಳೆದಿದೆ.[ಬೆಂಗಳೂರಿನಲ್ಲಿ 3 ದಿನಗಳ ಕೃಷಿಮೇಳಕ್ಕೆ ಚಾಲನೆ]
ಮಣ್ಣಿನ ಮಡಿಕೆ ಮಾಡುವ ಕುಂಬಾರನಿಂದ ಹಿಡಿದು ಮೊಬೈಲ್ ನಲ್ಲಿ ಕೃಷಿ ಮಾಹಿತಿ ಪಡೆಯುವ ಆಧುನಿಕ ರೈತನವರೆಗೆ ಮೇಳದಲ್ಲಿ ಕಾಣಸಿಗುತ್ತಾರೆ. ಪ್ರತಿಯೊಂದಕ್ಕೂ ಒಂದೊಂದು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ನೀರಾವರಿ, ಮಾದರಿ ಪ್ರಾತ್ಯಕ್ಷಿಕೆ, ಯಂತ್ರೋಪಕರಣ, ಬೀಜ, ಸಸ್ಯ ಸೇರಿದಮತೆ ಪ್ರತಿ ವಿಷಯಕ್ಕೆ ಸಂಬಂಧಿಸಿ ನೂರಕ್ಕು ಹೆಚ್ಚು ಮಳಿಗೆಗಳಿವೆ.
ಕೃಷಿ ಮೇಳದ ಒಂದಿಷ್ಟು ಚಿತ್ರಗಳು....

ಧಾನ್ಯದ ಗೋಪುರ
ಪ್ರದರ್ಶನದ ಹೊರ ಆವರಣದಲ್ಲಿರುವ ಧಾನ್ಯದ ಗೋಪುರ.

ಧಾನ್ಯಗಳ ರಂಗು
ರಾಗಿ, ಭತ್ತ ಬಳಸಿ ನಿಮರ್ಮಿಸಿದ ರಂಗೋಲಿ.

ಮಾಹಿತಿ ಪಡೆದ ಜನ
ಹಲವಾರು ಕೃಷಿ ಸಂಬಂಧಿ ಉಪಕರಣಗಳ ಮಾಹಿತಿ ಪಡೆದ ನಾಗರಿಕರು.

ಸಸ್ಯಗಳ ಮಾರಾಟ
ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ

ಪ್ರಶಸ್ತಿ ವಿಜೇತರು
ರಾಜ್ಯಪಾಲ ಮತ್ತು ಕೃಷಿ ಸಚಿವರೊಂಧಿಗೆ ಅತ್ಯುತ್ತಮ ರೈತ ಪ್ರಶಸ್ತಿ ಗಳಿಸಿದ ಸಾಧಕರು.

ಅಡಕೆ ಸುಲಿಯುವ ಯಂತ್ರ
ಮೇಳದಲ್ಲಿ ಗಮನ ಸೆಳೆದ ಅಡಕೆ ಸುಲಿಯುವ ಯಂತ್ರ.












Click it and Unblock the Notifications