ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕಿಸಾನ್ 13ನೇ ಕಂತು: ಫಲಾನುಭವಿಗಳು ಕೂಡಲೇ ಇಕೈವೈಸಿ ನವೀಕರಣ ಮಾಡಿಕೊಳ್ಳಿ

|
Google Oneindia Kannada News

ಬೆಂಗಳೂರು, ನವೆಂಬರ್ 29: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 13ನೇ ಕಂತು ಪಡೆಯಲಿರುವ ಅರ್ಹ ಈ ಕೂಡಲೇ ಇಕೆವೈಸಿ (eKYC) ನವೀಕರಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕರ್ನಾಟಕ ಸೇರಿದಂತೆ ದೇಶದ ಅರ್ಹ ಫಲಾನುಭವಿ ರೈತರು ಕೇಂದ್ರ ಸರ್ಕಾರ ನೀಡುವ 2,000 ಕೃಷಿ ಸಹಾಯಧನ 12ನೇ ಕಂತನ್ನು ಈಗಾಗಲೇ ಪಡೆದಿದ್ದಾರೆ. ಅದೇ ರೀತಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 13ನೇ ಕಂತಿನ 2000ರೂ.ಪಡೆಯಲು ಇಕೆವೈಸಿ (eKYC) ನವೀಕರಣ ಮಾಡಿಸಬೇಕು.

ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಲು ನಿರ್ಣಯ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಲು ನಿರ್ಣಯ

ಯೋಜನೆಯ ಫಲಾನುಭವಿಗಳಿಗೆ ಡಿಸೆಂಬರ್ ಒಳಗೆ ಅಂದರೆ ನವೆಂಬರ್ 30 ಕೊನೆಯ ದಿನದೊಳಗೆ ಇಕೆವೈಸಿ ಭರ್ತಿ ಮಾಡಬೇಕು. ಇಲ್ಲವಾದರೆ 13ನೇ ಕಂತಿನ ಹಣ ಸಿಗುವುದಿಲ್ಲ ಎಂದು ತಿಳಿಸಲಾಗಿದೆ. ಆದ್ದರಿಂದ ಅರ್ಹ ರೈತರು ಮೊದಲು ಯೋಜನೆಗೆ ಅಗತ್ಯವಿರುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಫಲಾನುಭವಿಗಳ ಅರ್ಜಿ ನಮೂನೆಯು ಅಪೂರ್ಣವಾಗಿದ್ದರೆ, ಅವರು ಪ್ರೋತ್ಸಾಹಧನ ಪಡೆಯುವಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ.

Beneficiaries of PM Kisan Yojana to get 13th Installement immediately get EKYC renewal

ಮುಂದುವರಿದ ಕಬ್ಬ ಬೆಳೆಗಾರರ ಪ್ರತಿಭಟನೆ

ಇನ್ನು ಕರ್ನಾಟಕದಲ್ಲಿ ಕಬ್ಬಿಗೆ ಎಫ್‌ಆರ್‌ಪಿ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಏಳು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಹಾಗೂ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಮುಖಂಡರು ಸೋಮವಾರ ಬಾರ್‌ಕೋಲ್‌ ಚಳವಳಿ ನಡೆಸಿದರು.

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಬ್ಬು ಬೆಳೆಗಾರ ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಏಳನೇ ದಿನವೂ ಮುಂದುವರಿದಿದೆ. ರಾಜ್ಯದ ವಿವಿಧ ಜಿಲ್ಲೆಯಿಂದ ಬಂದಿದ್ದ ನೂರಾರು ರೈತ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Beneficiaries of PM Kisan Yojana to get 13th Installement immediately get EKYC renewal

ದೇಶಕ್ಕೆ ಅನ್ನ ನೀಡುವ ರೈತನನ್ನು ಏಳು ದಿನಗಳಿಂದ ರಸ್ತೆಯಲ್ಲಿ ಮಲಗಿಸಿರುವ ಸರ್ಕಾರಕ್ಕೆ ರೈತರ ಕಷ್ಟಕ್ಕಿಂತ ಸಕ್ಕರೆ ಕಾರ್ಖಾನೆ ಮಾಲೀಕರ ಹಿತವೇ ಮುಖ್ಯವಾಗಿದೆ. ರೈತ ಮಹಿಳೆಯರು ಕಿತ್ತೂರ್ ರಾಣಿ ಚೆನ್ನಮ್ಮನ ಅವತಾರ ತಾಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ, ಕಬ್ಬುದರ ಏರಿಕೆ ಮಾಡಲಿ ಎಂದು ರೈತ ಮುಖಂಡರು ಆಗ್ರಹಿಸಿದರು.

English summary
Beneficiaries of PM Kisan Yojana to get 13th Installement immediately get EKYC renewal, Central Govrtment said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X