ದಕ್ಷಿಣ ಕನ್ನಡ: 700 ಜಾತಿಯ ವಿದೇಶಿ ಹಣ್ಣುಗಳನ್ನು ಬೆಳೆದ ರೈತ

ನಮ್ಮ ಸುತ್ತಲಿನ ಜನರಲ್ಲಿ ಹಲವು ಬಗೆಯ ಹವ್ಯಾಸಗಳನ್ನು ನೋಡಿರುತ್ತೇವೆ. ನಾಯಿ ಸಾಕುವವರು, ಬೆಕ್ಕು ಸಾಕೋರು, ವಿವಿಧ ದೇಶಗಳ ಕರೆನ್ಸಿ ಸಂಗ್ರಹಿಸೋರು, ಉಳ್ಳವರು ವರೈಟಿ ಕಾರುಗಳನ್ನು ಕೊಳ್ಳೋದು ಹೀಗೆ. ಆದರೆ ದಕ್ಷಿಣ ಕನ್ನದ ಜಿಲ್ಲೆಯ ರೈತರೊಬ್ಬರ ಹವ್ಯಾಸ ಎಂಥವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅನಿಲ್ ಬಲಂಜ ಸುಮಾರು 40 ದೇಶಗಳ 700 ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಇದು ಅವರ ಹವ್ಯಾಸವಂತೆ. ಇದನ್ನು ತಿಳಿದ ಬ್ಯುಸಿನೆಸ್ ಲೈನ್ ಪತ್ರಿಕೆ ಪ್ರತಿನಿಧಿ ಎ.ಜೆ. ವಿನಾಯಕ್ ಬಲಂಜರವರ ತೋಟಕ್ಕೆ ಖುದ್ದು ಭೇಟಿ ನೀಡಿ ಒಂದು ಸುಂದರ ವರದಿ ಬರೆದಿದ್ದಾರೆ. ಆ ವರದಿಯ ಪೂರ್ಣ ಪಾಠ ಇಲ್ಲಿದೆ.

ಭಾರತದಲ್ಲಿ ಅನೇಕ ರೈತರು ವಿದೇಶಿ ಹಣ್ಣುಗಳಾದ ರಾಂಬುಟಾನ್, ಡ್ರಾಗನ್ ಫ್ರೂಟ್, ಮ್ಯಾಂಗೋಸ್ಟೀನ್ ಬೆಳೆಯುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಬೆರಳೆಣಿಕೆಯಷ್ಟು ರೈತರ ಹವ್ಯಾಸವಾಗಿ ಆರಂಭವಾದದ್ದು.

Dakshina Kannada: Belthangady Farmer Anil Balanja Grow 700 Varieties Of Tropical Fruits

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅನಿಲ್ ಬಲಂಜ ಅಂಥ ಒಬ್ಬ ಆಸಕ್ತಿ ಉಳ್ಳ ರೈತ. ಇವರಿಗೆ ವಿದೇಶಿ ಹಣ್ಣುಗಳನ್ನು ಬೆಳೆಯುವುದು ನಿತ್ಯದ ಕಾಯಕ ಮತ್ತು ನಿರಂತರ ಸಂಶೋಧನಾ ಚಟುವಟಿಕೆ.

ಬ್ಯುಸಿನೆಸ್ ಲೈನ್ ಪತ್ರಿಕೆಯ ವರದಿಗಾರ ಆತನ ತೋಟಕ್ಕೆ ಭೇಟಿ ಕೊಟ್ಟಾಗ (ಮಂಗಳೂರಿನಿಂದ 70 ಕಿಲೋಮೀಟರ್) ಅವರು ತಮ್ಮ ನರ್ಸರಿಯಲ್ಲಿ ಯಾವುದೋ ಗಿಡದ ಕಸಿ ಕಟ್ಟುತ್ತಿದ್ದರು, ಅದರ ನಡುವೆಯೇ ಕೊಂಚ ಬಿಡುವು ಮಾಡಿಕೊಂಡು ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ "ನಾನು ಕಳೆದ 20 ವರ್ಷಗಳಿಂದ ವಿಶ್ವದಾದ್ಯಂತ ಅನೇಕ ತಳಿಗಳನ್ನು ತಂದು ಬೆಳೆಸುತ್ತಿದ್ದೇನೆ" ಎಂದು ಹೇಳಿದರು.

ನಾನು ಪಿಯುಸಿ ಮುಗಿಸಿದಾಕ್ಷಣ ನನ್ನ 19ನೇ ವಯಸ್ಸಿನಿಂದ ಕೃಷಿಯಲ್ಲಿ ತೊಡಗಿದ್ದೇನೆ. ವಿದೇಶಿ ಹಣ್ಣುಗಳನ್ನು ಬೆಳೆಯುವುದು ನನ್ನ ಹವ್ಯಾಸ, ಜೀವನೋಪಾಯಕ್ಕಾಗಿ ಅಡಿಕೆ ಮತ್ತು ತೆಂಗು ಬೆಳೆಯುತ್ತೇನೆ ಎಂದು ಹೇಳಿದ್ದಾರೆ.

Dakshina Kannada: Belthangady Farmer Anil Balanja Grow 700 Varieties Of Tropical Fruits

ತಮ್ಮ 30 ಎಕರೆ ಪ್ರದೇಶದಲ್ಲಿ 40 ದೇಶಗಳಿಂದ ತಂದಿರುವ ಸುಮಾರು 700 ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಹವಾಗುಣದ ಕಾರಣ ಎಲ್ಲವೂ ಫಲ ಕೊಟ್ಟಿಲ್ಲವೆಂದರು. ಇವರು ನೆಟ್ಟ ಶೇಕಡಾ 40 ರಷ್ಟು ಗಿಡಗಳ ಫಲಕೊಟ್ಟಿವೆ. ಕೆಲವು ಗಿಡಗಳು ಫಲ ನೀಡಲು 8- 15 ವರ್ಷ ಬೇಕಾಗುತ್ತದೆ ಎಂದು ಹೇಳಿದರಲ್ಲದೆ, ಹಣ್ಣಿನ ಗಿಡ ಬೆಳೆಯುವುದು ಒಂದು ತಾಳ್ಮೆಯ ಕೆಲಸವೆಂದೇ ತಿಳಿಸಿದ್ದಾರೆ. ಉಷ್ಣವಲಯದ ಪ್ರದೇಶಗಳಿಂದಲೇ ಹೆಚ್ಚಿನ ಗಿಡಗಳನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದ ಅವರು ಮಲೇಷಿಯಾ, ಥೈಲ್ಯಾಂಡ್, ಕಂಬೋಡಿಯಾ, ವಿಯೆಟ್ನಾಂ, ಬ್ರೆಜಿಲ್ ಮುಂತಾದ ದೇಶಗಳಿಂದ ಗಿಡಗಳನ್ನು ತರಿಸಿರುವುದಾಗಿ ಹೇಳಿದ್ದಾರೆ.

ವಿದೇಶಗಳ ಹಣ್ಣಿನ ಬೆಳೆಗಾರರೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣಗಳ ಮೊರೆಹೋಗಿದ್ದಾರೆ. (ಫೇಸ್ ಬುಕ್). ಅವರ ತೋಟದಲ್ಲಿ ಮೊದಲ ವಿದೇಶಿ ಹಣ್ಣು ಬೆಳೆದದ್ದು ಬ್ರೆಜಿಲ್‌ನ ರೋಲಿನಾ ಡೆಲಿಸಿಯೋಸಾ (ಬಿರಿಬಾ ಎಂಬ ಹೆಸರೂ ಇದೆ). ಇದು ಸೀತಾಫಲ ಜಾತಿಗೆ ಸೇರಿದ ಹಣ್ಣು. ತನ್ನ ತೋಟದ ಸೀತಾಫಲ ಬೀಜಗಳಿಗೆ ಪ್ರತಿಯಾಗಿ ಆತ ತನ್ನ ಫೇಸ್‌ಬುಕ್ ಸ್ನೇಹಿತನಿಂದ ಈ ಹಣ್ಣಿನ ಬೀಜಗಳನ್ನು ತರಿಸಿಕೊಂಡಿದ್ದಂತೆ.

ಈ ಹಣ್ಣುಗಳನ್ನು ಬೆಳೆವುದು ಅಷ್ಟು ಸುಲಭವಲ್ಲ, ಮಲೇಷಿಯಾದ ಸೆಂಪೆಡಕ್ ಹಣ್ಣನ್ನು ಮೊದಲಿಗೆ ಬೆಳೆದವನು ನಾನು. ಈಗ ಎಲ್ಲೆಡೆ ಇದೆ. ಇದೀಗ ಹೆಚ್ಚಿನ ಮಳೆ ಆಗುತ್ತಿರುವುದರಿಂದ ಆ ಹಣ್ಣಿನ ಗಿಡಗಳನ್ನು ಬೆಳೆವುದು ನಿಲ್ಲಿಸಿದ್ದಾರಂತೆ, ಪ್ರತಿ ತಿಂಗಳೂ ಶಿಲೀಂಧ್ರ ನಾಶಕ ಕೊಟ್ಟರೂ ಸಸ್ಯಗಳು ಬಾಡುತ್ತವೆ.

ಇತ್ತೀಚೆಗೆ ಇವರ ತೋಟದಲ್ಲಿ ಫಲ ನೀಡಿದ್ದು, ಇಂಡೋನೇಷಿಯಾದ ಬ್ಲೂಜಾವಾ ಬನಾನ. ಈ ಹಣ್ಣಿನ ಹೊರಮೈ ನೀಲಿ ಬಣ್ಣಕ್ಕಿರುತ್ತದೆ. ಚೆನ್ನಾಗಿ ಮಾಗಿದ ಈ ಹಣ್ಣಿನ ತಿರುಳು ಐಸ್‌ಕ್ರೀಂ ನಂತೆ ಮೆದುವಾಗಿರುತ್ತದೆ. ಈ ಸಸ್ಯದ ಟಿಷ್ಯೂ ಕಲ್ಚರ್ ತರಿಸಿಕೊಳ್ಳಲು 21,000 ರೂ. ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

Dakshina Kannada: Belthangady Farmer Anil Balanja Grow 700 Varieties Of Tropical Fruits

ರೋಗ ನಿರ್ವಹಣೆ
700 ವಿಧದ ಹಣ್ಣುಗಳನ್ನು ಬೆಳೆವುದೆಂದರೆ ಬಹಳ ಸಮಯ ಬೇಡುವ ಮತ್ತು ಪ್ರಯಾಸದಾಯಕ ಕೆಲಸ. ಇವುಗಳ ನಿರ್ವಹಣೆಯು ಕ್ಷೇತ್ರಾನುಭವದಿಂದಲೇ ಪಡೆದಿದ್ದೇನೆ ಎಂದು ಹೇಳುತ್ತಾರೆ. ಬಿರಿಬಾ ಸಸ್ಯ ಹುಲುಸಾಗಿ ಬೆಳೆದಿದ್ದರೂ, ಫಲ ನೀಡದಿದ್ದನ್ನು ಗಮನಿಸಿದ ಇವರು ಸಸ್ಯಕ್ಕೆ ಪಾಲಿನೇಷನ್ ಆಗದೇ ಇದ್ದದ್ದನ್ನು ಅರಿತು ಸಸ್ಯದಿಂದ ಪೋಲನ್ ಸಂಗ್ರಹಿಸಿ ಪ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಕೃತಕವಾಗಿ ಪಾಲಿನೇಟ್ ಮಾಡಿದ ಮೇಲೆ ಸಸ್ಯ ಫಲಕೊಟ್ಟಿದೆ. ಇಂಥ ಪ್ರಸಂಗಗಳೆಷ್ಟೋ.

ಒಟ್ಟಾರೆ ಈ ರೈತನ ಹವ್ಯಾಸ ಸಂಶೋಧನೆಗೆ ಮತ್ತು ಹೊಸ ಹೊಸ ತಳಿಗಳನ್ನು ದೇಶದ ಕೃಷಿ ಪರಿಸರಕ್ಕೆ ಒಗ್ಗಿಸಿಕೊಳ್ಳುವ ಒಂದು ಜಾಣ ನಡೆಯಂತೆ ನನಗಂತೂ ಗೋಚರವಾಗಿದೆ.
(ಕೃಪೆ- ಬ್ಯುಸಿನೆಸ್ ಲೈನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+