ದೇವೇಗೌಡ ದೊಡ್ಡ ನಾಟಕಕಾರ: ಖೇಣಿ
ಬೆಂಗಳೂರು,
ಮಾ. 6: "ನಾನು ಜಾತಿ ಪರವಾಗಿಲ್ಲ. ದೇವಗೌಡರಿಗೆ ಹಳೇ ಗ್ರಾಮಫೋನ್ ನಂತೆ ಹೇಳಿದಂತೆ ಹೇಳುವ ಚಾಳಿ. ಕುಮಾರಸ್ವಾಮಿ ತಂದೆಯನ್ನು ತೊರೆದರೆ ದೊಡ್ಡ ಲೀಡರ್ ಆಗುತ್ತಾರೆ ಅವರು outstanding gentleman. ನಿಜ ಜೀವನದಲ್ಲಿ ದೇವೇಗೌಡರ ಕುಟುಂಬ ದೊಡ್ಡ ನಾಟಕ ಕಂಪೆನಿ. ದೇವೇಗೌಡರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು" ಹೀಗೆಲ್ಲಾ ಹೇಳಿದವರು ನೈಸ್ ಸಂಸ್ಥೆ ಮಾಲೀಕ ಅಶೋಕ್ ಖೇಣಿ. ನಗರದ ಗ್ರ್ಯಾಂಡ್ ಅಶೋಕ ಹೋಟೆಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. id="toptextpromo">"ನನ್ನ
ಬಳಿ ಗೂಂಡಾಗಲಿಲ್ಲ. ಗೂಂಡಾಗಳಿದ್ದರೆ ಹೋರಾಟ ತಡೆಯುತ್ತಿದ್ದೆ. ಗೌಡರಿಗೆ ದೇವರೇ ಬುದ್ಧಿ ಕೊಡಬೇಕು. ಗೌಡರು ಅನಾವಶ್ಯಕವಾಗಿ ರೈತರನ್ನು ಎತ್ತಿಕಟ್ಟುತ್ತಿದ್ದಾರೆ .ರೈತರೇ ಯಡಿಯೂರಪ್ಪ ಅವರಿಗೆ ಸಹಕಾರ ನೀಡಿ, ನೈಸ್ ಗೆ ಸಂಬಂಧಿಸಿದಂತೆ ಸುಮಾರು 400 ಪ್ರಕರಣಗಳನ್ನು ಗೆದ್ದಿದ್ದೇನೆ.ಕರ್ನಾಟಕದಲ್ಲಿ 2500 ಕಿ.ಮೀ ಬೀದರ್ ನಿಂದ ಬೆಂಗಳೂರು, ಮಂಗಳೂರು ನಿಂದ ಬೆಂಗಳೂರು ಸಂಪರ್ಕ ಸಾಧಿಸುವ ಯೋಜನೆ ಸರ್ಕಾರಕ್ಕೆ ನೀಡುವ ತಯಾರಿಯಲ್ಲಿದ್ದೇನೆ. ಕರ್ನಾಟಕ ಸ್ಲಮ್ ಮುಕ್ತವಾಗಬೇಕು ಎಂಬುದು ನನ್ನಾಸೆ. ನೀರಾವರಿ ಪೂರೈಕೆ, ವಿದ್ಯುತ್ ಸೌಲಭ್ಯ ನೀಡಲು ಯೋಜನೆ ರೂಪಿಸಲು ಸಿದ್ಧ. ನೈಸ್ ಯೋಜನೆಯಲ್ಲಿ ಭೂಕಬಳಿಕೆ ನಿರೂಪಿಸಿದರೆ ತಲೆದಂಡಕ್ಕೆ ಸಿದ್ಧ" ಎಂದು ಅಶೋಕ್ ಖೇಣಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಖೇಣಿ
ಅವರ ಸುದ್ದಿಗೋಷ್ಠಿಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಖೇಣಿ ಜನರಿಗೆ ಮಕ್ಮಲ್ ಟೋಪಿ ಹಾಕಲು ಬಂದಿದ್ದಾನೆ. ಖೇಣಿ ಮಾತಿಗೆ ಬೆಲೆಯಿಲ್ಲ ಎಂದಿದ್ದಾರೆ.











Click it and Unblock the Notifications