Arecanut Price: ಸ್ಥಿರತೆ ಕಾಯ್ದುಕೊಂಡ ಅಡಿಕೆ ಬೆಲೆ: ಕೊಬ್ಬರಿ ಧಾರಣೆ ಹೇಗಿದೆ ನೋಡಿ

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ₹50,000 ಸನಿಹ ಬಂದಿರುವ ರಾಶಿ ಕೆಂಪಡಿಕೆ ಬೆಲೆ ಸದ್ಯ ₹49 ಸಾವಿರ ಆಸುಪಾಸಿನಲ್ಲಿದೆ. ಮುಂದಿನ ದಿನಗಳಲ್ಲಿ 50 ಸಾವಿರ ದಾಟುವ ನಿರೀಕ್ಷೆಯಲ್ಲಿದ್ದಾರೆ ಅಡಿಕೆ ಬೆಳೆಗಾರರು.

2024ರ ಆರಂಭದಲ್ಲಿ ಅಡಿಕೆ ಧಾರಣೆ ಏರಿಕೆ ಕಾಣುವ ಮೂಲಕ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿತ್ತು, ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಕುಸಿತ ಕಾಣದೇ ಇರುವುದು ಅಡಿಕೆ ಬೆಳೆಗಾರರ ಆತಂಕ ಕಡಿಮೆ ಮಾಡಿದೆ.

 Arecanut Prices Stays at ₹49,000, Latest Copra Price in Karnataka Markets on Feb 5th

ಫೆಬ್ರವರಿ 5ರಂದು ಸೋಮವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ ₹35,000 ಗಳಿಂದ ₹49,000 ದವರೆಗೆ ಮಾರಾಟವಾಗಿದೆ. ಹಲವು ಮಾರುಕಟ್ಟೆಗಳಲ್ಲಿ ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ.

ಸೋಮವಾರ ಶಿವಮೊಗ್ಗ, ಸಾಗರ, ಯಲ್ಲಾಪುರ, ಸಿದ್ದಾಪುರ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹35,009 ಆಗಿದ್ದರೆ ಗರಿಷ್ಠ ₹49,111 ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹43,009 ಇದ್ದರೆ, ಗರಿಷ್ಠ ₹47,299 ಆಗಿತ್ತು.

ಸಾಗರ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಧಾರಣೆ ಕನಿಷ್ಠ ₹28,100 ಆಗಿದ್ದರೆ ಗರಿಷ್ಠ ಮಾರಾಟ ದರ ₹37,001 ಆಗಿತ್ತು.ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹46,889 ಇದ್ದರೆ ಗರಿಷ್ಠ ಬೆಲೆ ₹52,935 ಆಗಿತ್ತು.

ಫೆಬ್ರವರಿ 5ರಂದು ಅಡಿಕೆ ಬೆಲೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಕಾರ್ಕಳ ಹೊಸ ವೆರೈಟಿ ₹25,000 ₹35,000 ₹30,000
2 ಬಂಟ್ವಾಳ ಕೋಕಾ ₹18,000 ₹28,500 ₹23,500
3 ಕೊಪ್ಪ ಬೆಟ್ಟೆ ₹46,000 ₹49,000 ₹47,000
4 ಕೊಪ್ಪ ರಾಶಿ ₹45,000 ₹49,000 ₹47,000
5 ಕುಮಟಾ ಕೋಕಾ ₹16,099 ₹28,999 ₹25,469
6 ಕುಮಟಾ ಫ್ಯಾಕ್ಟರಿ ₹10,869 ₹21,299 ₹20,539
7 ಸಾಗರ ಸಿಪ್ಪೆಗೋಟು ₹7,511 ₹19,509 ₹18,069
8 ಸಾಗರ ಕೆಂಪು ಗೋಟು ₹24,899 ₹37,169 ₹35,699
9 ಸಾಗರ ರಾಶಿ ₹30,899 ₹48,799 ₹47,599
10 ಶಿವಮೊಗ್ಗ ಬೆಟ್ಟೆ ₹41,199 ₹54,569 ₹54,399
11 ಶಿವಮೊಗ್ಗ ಸರಕು ₹41,000 ₹81,896 ₹65,750
12 ಶಿವಮೊಗ್ಗ ರಾಶಿ ₹35,009 ₹49,111 ₹47,099
13 ಸಿದ್ದಾಪುರ ತಟ್ಟಿ ಬೆಟ್ಟೆ ₹41,289 ₹46,099 ₹43,099
14 ಸಿದ್ದಾಪುರ ರಾಶಿ ₹43,009 ₹47,299 ₹46,979
15 ಶಿರಸಿ ರಾಶಿ ₹43,600 ₹47,859 ₹45,914
16 ಯಲ್ಲಾಪುರ ಅಪಿ ₹54,100 ₹59,629 ₹56,069
17 ಯಲ್ಲಾಪುರ ರಾಶಿ ₹46,889 ₹52,935 ₹50,008
18 ಯಲ್ಲಾಪುರ ಬಿಳೆ ಗೊಟು ₹24,009 ₹33,691 ₹30,199

ಕೊಬ್ಬರಿ ಧಾರಣೆ ಮಾಹಿತಿ

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ತಿಪಟೂರು ಕೊಬ್ಬರಿ ₹8,600 ₹9,800 ₹9,500
2 ಅರಸೀಕೆರೆ ಕೊಬ್ಬರಿ ₹7,500 ₹10,100 ₹9,313
3 ಬೆಂಗಳೂರು ಕೊಬ್ಬರಿ ₹11,000 ₹12,500 ₹11,750
4 ಕೆ.ಆರ್.ಪೇಟೆ ಬೇರೆ ₹8,600 ₹8,600 ₹8,600
5 ತುಮಕೂರು ಬಾಲ್ ₹8,850 ₹10,400 ₹9,900

ಸೋಮವಾರ ರಾಜ್ಯದ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆ ಸ್ಥಿರವಾಗಿದೆ. ಪ್ರಮುಖ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹8,600 ಇದ್ದರೆ ಗರಿಷ್ಠ ₹9,800 ಆಗಿತ್ತು. ನಾಫೆಡ್ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಆರಂಭಿಸಿದ ನಂತರ ಕೊಬ್ಬರಿ ಬೆಲೆ ಮತ್ತಷ್ಟು ಏರಿಕೆ ಕಾಣಬಹುದು ಎಂದು ಕೊಬ್ಬರಿ ಬೆಳೆಗಾರರು ನಿರೀಕ್ಷೆ ಮಾಡಿದ್ದಾರೆ.

ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,500 ಇದ್ದರೆ ಗರಿಷ್ಠ ಧಾರಣೆ ₹10,100 ಆಗಿತ್ತು. ಬೆಂಗಳೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹11,000 ಆಗಿದ್ದರೆ ಗರಿಷ್ಠ ₹12,500ಕ್ಕೆ ಮಾರಾಟವಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+