Arecanut and Copra Price: ₹50 ಸಾವಿರದ ಸನಿಹದಲ್ಲಿ ಅಡಿಕೆ ಬೆಲೆ: ಕೊಬ್ಬರಿ ಬೆಲೆ ಕೂಡ ಏರಿಕೆ
2024ರ ಆರಂಭಿಕ ವರ್ಷದಲ್ಲಿ ಅಡಿಕೆ ಬೆಳೆಗಾರರಿಗೆ ಸ್ವಲ್ಪ ಸಂತಸದ ಸುದ್ದಿ ಸಿಕ್ಕಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಕೆಂಪಡಕೆ ಧಾರಣೆ ₹ 50 ಸಾವಿರಕ್ಕೆ ಸಮೀಪಿಸುತ್ತಿದೆ. ಡಿಸೆಂಬರ್ 10ರಂದು ಬುಧವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ 35,000 ರೂಪಾಯಿಗಳಿಂದ 49,000 ರೂಪಾಯಿವರೆಗೆ ಮಾರಾಟವಾಗಿದೆ.
ಕರ್ನಾಟಕ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರಿಕೆ ಕಾಣುತ್ತಿದೆ. ವರ್ಷದ ಆರಂಭದಲ್ಲೇ ಅಡಿಕೆ ಧಾರಣೆ ಹೆಚ್ಚಳವಾಗುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಮಾಧಾನ ತರಿಸಿದೆ.

ಬುಧವಾರ ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಸಾಗರ, ಶಿರಸಿ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ ಕಂಡಿದೆ. ಹೊನ್ನಳ್ಳಿ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ₹49,099 ಆಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹43,599 ಇದ್ದರೆ, ಗರಿಷ್ಠ ₹49,599 ಕ್ಕೆ ಮಾರಾಟವಾಗಿದೆ. ಸರಕು ಅಡಿಕೆ ಧಾರಣೆ ಕನಿಷ್ಠ ₹50,009 ಇದ್ದರೆ, ಗರಿಷ್ಠ ₹81,000 ಆಗಿದೆ.
ಬಂಟ್ವಾಳ ಮಾರುಕಟ್ಟೆಯಲ್ಲಿ ಹಳೆಯ ವೆರೈಟಿ ಅಡಿಕೆ ಧಾರಣೆ ಕನಿಷ್ಠ ₹42,000 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ ₹44,500 ಆಗಿತ್ತು. ಭದ್ರಾವತಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ ₹41,199 ಇದ್ದರೆ ಗರಿಷ್ಠ ₹49,419 ಆಗಿದೆ.
ಡಿಸೆಂಬರ್ 10ರಂದು ಅಡಿಕೆ ಬೆಲೆ(ಪ್ರತಿ ಕ್ವಿಂಟಾಲ್‌ಗೆ)
| ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| ಬಂಟ್ವಾಳ | ಕೋಕಾ | ₹18,000 | ₹27,500 | ₹23,500 |
| ಬಂಟ್ವಾಳ | ಹೊಸ ವೆರೈಟಿ | ₹27,500 | ₹37,000 | ₹35,000 |
| ಬೆಳ್ತಂಗಡಿ | ಹೊಸ ವೆರೈಟಿ | ₹28,400 | ₹36,500 | ₹34,500 |
| ಹೊನ್ನಳ್ಳಿ | ರಾಶಿ | ₹49,099 | ₹49,099 | ₹49,099 |
| ಹೊನ್ನಾವರ | ಹಳೆ ಚಾಲಿ | ₹35,000 | ₹39,500 | ₹38,300 |
| ಹೊನ್ನಾವರ | ಹೊಸ ಚಾಲಿ | ₹25,000 | ₹35,000 | ₹33,800 |
| ಕಾರ್ಕಳ | ಹೊಸ ವೆರೈಟಿ | ₹25,000 | ₹37,000 | ₹30,000 |
| ಕುಮಟಾ | ಕೋಕಾ | ₹21,019 | ₹31,099 | ₹29,579 |
| ಕುಮಟಾ | ಫ್ಯಾಕ್ಟರಿ | ₹11,599 | ₹23,129 | ₹21,869 |
| ಕುಮಟಾ | ಹಳೆ ಚಾಲಿ | ₹38,109 | ₹40,099 | ₹39,549 |
| ಕುಂದಾಪುರ | ಹಳೆ ಚಾಲಿ | ₹39,000 | ₹55,000 | ₹50,000 |
| ಪಾವಗಡ | ಕೆಂಪು | ₹39,000 | ₹42,000 | ₹41,540 |
| ಸಾಗರ | ಸಿಪ್ಪೆಗೋಟು | ₹20,500 | ₹20,500 | ₹20,500 |
| ಶಿವಮೊಗ್ಗ | ಬೆಟ್ಟೆ | ₹26,069 | ₹54,699 | ₹54,200 |
| ಶಿವಮೊಗ್ಗ | ಗೊರಬಲು | ₹17,000 | ₹40,269 | ₹36,369 |
| ಶಿವಮೊಗ್ಗ | ರಾಶಿ | ₹43,599 | ₹49,599 | ₹49,399 |
| ಶಿವಮೊಗ್ಗ | ಸರಕು | ₹50,009 | ₹81,000 | ₹65,620 |
| ಶಿರಸಿ | ಚಾಲಿ | ₹38,536 | ₹40,861 | ₹40,068 |
| ಶಿರಸಿ | ರಾಶಿ | ₹43,119 | ₹48,699 | ₹46,860 |
| ಭದ್ರಾವತಿ | ರಾಶಿ | ₹41,199 | ₹49,419 | ₹47,496 |
| ಚನ್ನಗಿರಿ | ರಾಶಿ | ₹46,859 | ₹49,409 | ₹48,772 |
ಕೊಬ್ಬರಿ ಧಾರಣೆ ಮಾಹಿತಿ
ಬುಧವಾರ ರಾಜ್ಯದ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರದಲ್ಲಿ ಏರಿಕೆಯಾಗಿದ್ದು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹8,200 ಇದ್ದರೆ ಗರಿಷ್ಠ ₹9,810 ಆಗಿತ್ತು. ಕಳೆದ ವಾರ ಕೊಬ್ಬರಿ ಗರಿಷ್ಠ ಧಾರಣೆ 10 ಸಾವಿರ ದಾಟಿದ್ದು, ಈ ವಾರ ಅಲ್ಪ ಕುಸಿತ ಕಂಡಿದ್ದರೂ, 10 ಸಾವಿರ ರೂಪಾಯಿ ಆಸುಪಾಸಿನಲ್ಲೇ ಇದೆ.
ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,500 ಇದ್ದರೆ ಗರಿಷ್ಠ ಧಾರಣೆ ₹9,570 ಆಗಿತ್ತು. ತುಮಕೂರಿನಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,900 ಇದ್ದರೆ ಗರಿಷ್ಠ ₹9,050 ಆಗಿತ್ತು.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹8,200 | ₹9,810 | ₹9,500 |
| 2 | ಅರಸೀಕೆರೆ | ಕೊಬ್ಬರಿ | ₹7,500 | ₹9,570 | ₹8,175 |
| 3 | ಅರಸೀಕೆರೆ | ಬೇರೆ | ₹3,000 | ₹6,000 | ₹6,000 |
| 4 | ತುಮಕೂರು | ಕೊಬ್ಬರಿ | ₹7,900 | ₹9,050 | ₹8,420 |
| 5 | ತುರುವೇಕೆರೆ | ಕೊಬ್ಬರಿ | ₹9,100 | ₹9,100 | ₹9,100 |












Click it and Unblock the Notifications