Get Updates
Get notified of breaking news, exclusive insights, and must-see stories!

Arecanut Price: ಅಡಿಕೆ ಬೆಲೆ ಅಲ್ಪ ಕುಸಿತ; ಕೊಬ್ಬರಿ ಬೆಲೆ ಹೇಗಿದೆ ತಿಳಿಯಿರಿ

ರಾಜ್ಯ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಮುಂದುವರೆದಿದೆ. ಕಳೆದ ವಾರ ₹54,000 ದಾಟಿದ್ದ ಅಡಿಕೆ ಬೆಲೆ ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿತ್ತು. ಈ ವಾರ ಅಡಿಕೆ ಧಾರಣೆ ಮತ್ತಷ್ಟು ಏರುವ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ. ರಾಜ್ಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಅಲ್ಪ ಕುಸಿತ ಕಂಡಿದೆ.

ಬುಧವಾರ ರಾಶಿ ಅಡಿಕೆ ಧಾರಣೆ ವಿವಿಧ ಮಾರುಕಟ್ಟೆಗಳಲ್ಲಿ ₹1000 ದವರೆಗೆ ಕುಸಿತ ಕಂಡಿದೆ. ಹೊಳಲ್ಕೆರೆಯಲ್ಲಿ ಕ್ವಿಂಟಾಲ್‌ ರಾಶಿ ಅಡಿಕೆ ಧಾರಣೆ ಕನಿಷ್ಠ ₹50,519 ಇದ್ದರೆ ಗರಿಷ್ಠ ₹52,819 ಆಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹47,512 ಇದ್ದರೆ ಗರಿಷ್ಠ ₹53,700 ಆಗಿತ್ತು.

Arecanut and Copra Prices See Minor Drop in Karnataka on May 22

ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹28,989 ಇದ್ದರೆ ಗರುಷ್ಠ ₹52,219 ಕ್ಕೆ ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ₹30,008-₹53,009 ದರಕ್ಕೆ ಮಾರಾಟವಾಗಿದೆ. ಸರಕು ಅಡಿಕೆ ಧಾರಣೆ ಕನಿಷ್ಠ ₹54,069 ಇದ್ದರೆ ಗರಿಷ್ಠ ₹79,896 ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಹೊಳಲ್ಕೆರೆ ರಾಶಿ ₹50,519 ₹52,819 ₹51,426
2 ಚನ್ನಗಿರಿ ರಾಶಿ ₹47,512 ₹53,700 ₹52,539
3 ಚಿತ್ರದುರ್ಗ ಅಪಿ ₹52,719 ₹53,129 ₹52,949
4 ಚಿತ್ರದುರ್ಗ ಬೆಟ್ಟೆ ₹37,110 ₹37,599 ₹37,379
5 ಚಿತ್ರದುರ್ಗ ರಾಶಿ ₹52,239 ₹52,669 ₹52,489
6 ಪುತ್ತೂರು ಹೊಸ ವೆರೈಟಿ ₹28,000 ₹38,000 ₹33,000
7 ಸಾಗರ ಬಿಳೆ ಗೊಟು ₹27,699 ₹29,599 ₹28,385
8 ಸಾಗರ ರಾಶಿ ₹28,989 ₹52,219 ₹51,699
9 ಶಿವಮೊಗ್ಗ ಬೆಟ್ಟೆ ₹45,069 ₹55,319 ₹54,119
10 ಶಿವಮೊಗ್ಗ ಸರಕು ₹54,069 ₹79,896 ₹68,996
11 ಶಿವಮೊಗ್ಗ ರಾಶಿ ₹30,008 ₹53,009 ₹52,169
12 ಸಿದ್ದಾಪುರ ಬಿಳೆ ಗೊಟು ₹27,319 ₹31,009 ₹30,209
13 ಸಿದ್ದಾಪುರ ಕೋಕಾ ₹26,289 ₹30,009 ₹27,899
14 ಸಿದ್ದಾಪುರ ರಾಶಿ ₹44,099 ₹49,799 ₹48,499
15 ಸಿರಾ ಬೇರೆ ₹20,000 ₹25,000 ₹24,177
16 ಶಿರಸಿ ಕೆಂಪು ಗೋಟು ₹25,699 ₹30,290 ₹27,707
17 ಶಿರಸಿ ರಾಶಿ ₹44,099 ₹49,589 ₹47,874
18 ಶಿರಸಿ ಚಾಲಿ ₹34,099 ₹39,098 ₹37,592
19 ಯಲ್ಲಾಪುರ ಅಪಿ ₹56,833 ₹57,661 ₹56,833
20 ಯಲ್ಲಾಪುರ ರಾಶಿ ₹44,899 ₹53,899 ₹50,999
21 ಯಲ್ಲಾಪುರ ಹಣ್ಣು ₹33,099 ₹39,141 ₹37,599

ಕೊಬ್ಬರಿ ಬೆಲೆ ಹೇಗಿದೆ?

ರಾಜ್ಯದಲ್ಲಿ ಕೊಬ್ಬರಿ ಧಾರಣೆ ಆರಕ್ಕೇರದೆ ಮೂರಕ್ಕಿಳಿಯದೆ ಸ್ಥಿರವಾಗಿದೆ. ಬಹುತೇಕ ಮಾರುಕಟ್ಟೆಗಳಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ ₹8,000 ರಿಂದ ₹9,500 ನಡುವೆ ಮಾರಾಟವಾಗುತ್ತಿದೆ. ₹ 10 ಸಾವಿರ ದಾಟುತ್ತದೆ ಎಂದು ನಿರೀಕ್ಷೆ ಮಾಡಿದ್ದ ತೆಂಗು ಬೆಳೆಗಾರರಿಗೆ ನಿರಾಸೆಯಾಗಿದೆ.

ಬುಧವಾರ ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ಕೊಬ್ಬರಿ ಬೆಲೆ ಕನಿಷ್ಠ ₹8,000 ಇದ್ದರೆ ₹8,800 ಆಗಿತ್ತು. ಮಧುಗಿರಿ ಮಾರುಕಟ್ಟೆಯಲ್ಲಿ ಕನಿಷ್ಠ ₹7,500 ಇದ್ದರೆ ಗರಿಷ್ಠ ₹9,000 ಆಗಿತ್ತು. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,500 ಇದ್ದರೆ ಗರಿಷ್ಠ ಧಾರಣೆ ₹9,500 ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹8,000 ₹8,800 ₹8,800
2 ಮಧುಗಿರಿ ಕೊಬ್ಬರಿ ₹7,500 ₹9,000 ₹8,300
3 ಮಧುಗಿರಿ ಬೇರೆ ₹5,000 ₹7,800 ₹7,300
4 ತಿಪಟೂರು ಕೊಬ್ಬರಿ ₹8,500 ₹9,500 ₹8,600
5 ಮಳವಳ್ಳಿ ಕೊಬ್ಬರಿ ₹6,800 ₹7,300 ₹7,300
6 ನಾಗಮಂಗಲ ಮಾಧ್ಯಮ ₹6,600 ₹8,600 ₹8,600

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+