Arecanut Price: ಅಡಿಕೆಗೆ ಸಿಗುತ್ತಾ ಬಂಪರ್ ಬೆಲೆ? ಕೊಬ್ಬರಿ ಬೆಲೆ ಎಷ್ಟಿದೆ ತಿಳಿಯಿರಿ
ಕಳೆದ ವರ್ಷ ಸಾಕಷ್ಟು ಏರಿಳಿತ ಕಂಡಿದ್ದ ಅಡಿಕೆ ಬೆಲೆ ಈಗ ಚೇತರಿಸಿಕೊಳ್ಳುವ ಮುನ್ಸೂಚನೆ ಕೊಟ್ಟಿದೆ. ರೋಗಭಾದೆ, ಹವಾಮಾನ ಬದಲಾವಣೆಯಂತಹ ಅಂಶಗಳು ಅಡಿಕೆ ಇಳುವರಿ ಮೇಲೆ ಪರಿಣಾಮ ಬೀರಿದ್ದು ಅಡಿಕೆ ಧಾರಣೆ ಏರಿಕೆಯಾಗದೇ ಇದ್ದರೆ ಬೆಳೆಗಾರರು ನಷ್ಟ ಹೊಂದುವ ಭಯದಲ್ಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದ್ದು ಬೆಳೆಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.
ಮಂಗಳವಾರ ರಾಶಿ ಅಡಿಕೆ ಧಾರಣೆ 50,000 ರೂಪಾಯಿ ಗಡಿ ದಾಟಿದ್ದು ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಮಂಗಳವಾರ ಶಿವಮೊಗ್ಗ ಮತ್ತು ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಹರಾಜಾಗಿದೆ.

ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ 40,009 ರೂಪಾಯಿ ಇದ್ದರೆ ಗರಿಷ್ಠ 52,389 ರೂಪಾಯಿ ಆಗಿತ್ತು. ಸರಕು ಅಡಿಕೆ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 53,100 ರೂಪಾಯಿ ಇದ್ದರೆ ಗರಿಷ್ಠ 93,996 ರೂಪಾಯಿ ಆಗಿತ್ತು. ಅಡಿಕೆ ಬೆಲೆ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗುವ ವಿಶ್ವಾಸದಲ್ಲಿದ್ದಾರೆ ಅಡಿಕೆ ಬೆಳೆಗಾರರು.
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಯಲ್ಲಾಪುರ | ಅಪಿ | ₹59,399 | ₹60,901 | ₹60,699 |
| 2 | ಯಲ್ಲಾಪುರ | ತಟ್ಟಿ ಬೆಟ್ಟೆ | ₹30,819 | ₹38,699 | ₹33,890 |
| 3 | ಯಲ್ಲಾಪುರ | ರಾಶಿ | ₹39,600 | ₹58,399 | ₹47,809 |
| 4 | ಯಲ್ಲಾಪುರ | ಚಾಲಿ | ₹27,892 | ₹38,889 | ₹35,799 |
| 5 | ಯಲ್ಲಾಪುರ | ಕೆಂಪು ಗೋಟು | ₹12,899 | ₹26,899 | ₹22,620 |
| 6 | ಶಿವಮೊಗ್ಗ | ಬೆಟ್ಟೆ | ₹47,299 | ₹56,109 | ₹55,299 |
| 7 | ಶಿವಮೊಗ್ಗ | ರಾಶಿ | ₹40,009 | ₹52,389 | ₹50,089 |
| 8 | ಶಿವಮೊಗ್ಗ | ಗೊರಬಲು | ₹16,059 | ₹31,111 | ₹23,899 |
| 9 | ಶಿವಮೊಗ್ಗ | ಸರಕು | ₹53,100 | ₹93,996 | ₹74,199 |
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)
ಕೊಬ್ಬರಿ ಧಾರಣೆ ಹೇಗಿದೆ?
ಕಳೆದ ವರ್ಷ ದಾಖಲೆಯ ಬೆಲೆ ತಲುಪಿದ್ದ ಕೊಬ್ಬರಿ ಬಳಿಕ ಅಲ್ಪ ಕುಸಿತ ಕಂಡಿತ್ತು. 2025ರಲ್ಲಿ ಕೂಡ ಕೊಬ್ಬರಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇಳುವರಿ ಕಡಿಮೆಯಾಗಿದ್ದು ಈಗಾಗಲೇ ಎಳನೀರು ಮತ್ತು ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಕೂಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಕೊಬ್ಬರಿ 12,000 ದಿಂದ 14,000 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಮಂಗಳವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 13,600 ರೂಪಾಯಿ ಇದ್ದರೆ ಗರಿಷ್ಠ 14,900 ರೂಪಾಯಿ ಆಗಿತ್ತು. ಅರಸೀಕೆರೆ ಮಾರುಕಟ್ಟೆಯಲ್ಲಿ ಗರಿಷ್ಠ 14,500 ರೂಪಾಯಿಗೆ ಮಾರಾಟವಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹13,600 | ₹14,900 | ₹14,700 |
| 2 | ಅರಸೀಕೆರೆ | ಕೊಬ್ಬರಿ | ₹10,000 | ₹14,500 | ₹14,200 |
| 3 | ತುರುವೇಕೆರೆ | ಬೇರೆ | ₹9,100 | ₹9,100 | ₹9,100 |












Click it and Unblock the Notifications