ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ; ಸಹಾಯಧನಕ್ಕಾಗಿ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18; ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ರೈತರಿಗೆ ಸಹಾಯಧನಗಳನ್ನು ನೀಡಲಾಗುತ್ತಿದೆ. ಅರ್ಹ ರೈತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2022-23 ನೇ ಸಾಲಿನ ತೋಟಗಾರಿಕೆಯಲ್ಲಿ ಕೊಯ್ಲೋತ್ತರ ನಿರ್ವಹಣಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕಾರ್ಯಕ್ರಮದಡಿ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಕರೆಯಲಾಗಿದೆ.

ಕಬ್ಬು ಮಾರಾಟಕ್ಕೆ ರೈತ, ಸಕ್ಕರೆ ಕಾರ್ಖಾನೆ ನಡುವೆ ಒಪ್ಪಂದ ಕಡ್ಡಾಯ ಕಬ್ಬು ಮಾರಾಟಕ್ಕೆ ರೈತ, ಸಕ್ಕರೆ ಕಾರ್ಖಾನೆ ನಡುವೆ ಒಪ್ಪಂದ ಕಡ್ಡಾಯ

ಆಸಕ್ತ ರೈತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ ನವೆಂಬರ್ 14 ಆಗಿರುತ್ತದೆ. ರೈತರು ಹೆಚ್ಚಿನ ಮಾಹಿತಿಗಾಗಿ ಹಡಗಲಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಯೋಜನೆಗಳ ವಿವರಗಳು ಇಲ್ಲಿವೆ....

ಮಹಿಳೆಯರು, ವೃದ್ಧರೂ ಸಹ ಅಡಿಕೆ ಮರ ಏರಲು ನೆರವಾಗುವ ಟ್ರೀ ಸೈಕಲ್ ಆವಿಷ್ಕರಿಸಿದ ರೈತಮಹಿಳೆಯರು, ವೃದ್ಧರೂ ಸಹ ಅಡಿಕೆ ಮರ ಏರಲು ನೆರವಾಗುವ ಟ್ರೀ ಸೈಕಲ್ ಆವಿಷ್ಕರಿಸಿದ ರೈತ

Apply For Subsidy Under NADP Programme For Horticulture Crops

ಕ್ಷೇತ್ರ ಮಟ್ಟದಲ್ಲಿ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕಗಳು ಕಾರ್ಯಕ್ರಮ ಅನುಷ್ಠಾನಗೊಳಿಸಲು ಕಟ್ಟಡ ವಿನ್ಯಾಸ ಮಾದರಿಗೆ ಶೇ. 50ರಂತೆ ರೂ.1ಲಕ್ಷ ಸಹಾಯಧನ ಇರುತ್ತದೆ.

ರೈತ ದಸರಾ 2022: ಕೆಸರು ಗದ್ದೆಯಲ್ಲಿ ಬಿದ್ದರು, ಕಾಲು‌ಕಟ್ಟಿಕೊಂಡು ಓಡಿ ಗೆದ್ದರು ರೈತ ದಸರಾ 2022: ಕೆಸರು ಗದ್ದೆಯಲ್ಲಿ ಬಿದ್ದರು, ಕಾಲು‌ಕಟ್ಟಿಕೊಂಡು ಓಡಿ ಗೆದ್ದರು

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಸಹಾಯಧನ ಕಾರ್ಯಕ್ರಮವಿದೆ. ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಶೇ.50 ರಂತೆ 4 ಲಕ್ಷ ಸಹಾಯಧನ ಇರುತ್ತದೆ.

ಅರ್ಹತೆಗಳು; ವಿಸ್ತೀರ್ಣ 2.00 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹೊಂದಿರಬೇಕು. 9000 ಘ.ಮೀ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ 5 ಲಕ್ಷ ಸಹಾಯಧನವಿದ್ದು, ವಿಸ್ತೀರ್ಣ 4.00 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹೊಂದಿರಬೇಕು.

Apply For Subsidy Under NADP Programme For Horticulture Crops

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ರೈತರು ಸ್ವಂತ ಜಮೀನು, ನೀರಾವರಿ ಉಳ್ಳವರಾಗಿರಬೇಕು ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಹಾಗೂ ಮುಂದೆ ಬೆಳೆಯಲು ಆಸಕ್ತಿ ಹೊಂದಿರುವ ರೈತರು ಸಹ ಸದರಿ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ.

ಹನಿ ನೀರಾವರಿ ಕಾರ್ಯಕ್ರಮ; ಎಲ್ಲಾ ವರ್ಗದ ರೈತರಿಗೆ ಹನಿ ನೀರಾವರಿ ಪ್ರತಿ ಫಲಾನುಭವಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ಈ ಪೈಕಿ ಸಾಮಾನ್ಯ ರೈತರಿಗೆ ಮೊದಲ 2.0 ಹೆಕ್ಟೇರ್ ಪ್ರದೇಶಕ್ಕೆ ಶೇ.75ರಷ್ಟು ಸಹಾಯಧನ ಹಾಗೂ 2.0 ಹೆಕ್ಟೇರ್ ಮೇಲ್ಪಟ್ಟು ಗರಿಷ್ಠ 3.0 ಹೆಕ್ಟೇರ್ ಪ್ರದೇಶದವರೆಗೆ ಶೇ.45ರಷ್ಟು ಸಹಾಯಧನವನ್ನು ವಿತರಣೆ ಮಾಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಗೆ ಗರಿಷ್ಠ 2.00 ಹೆಕ್ಟೇರ್ ವರೆಗೆ ಶೇ.90 ರಷ್ಟು ಸಹಾಯಧನ ಪಾವತಿಸಲಾಗುವುದು ಹಾಗೂ 2.0 ಹೆಕ್ಟೇರ್ ಮೇಲ್ಪಟ್ಟು ಗರಿಷ್ಠ 3.0 ಹೆಕ್ಟೇರ್ ಪ್ರದೇಶದವರೆಗೆ ಶೇ.45ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.

ಸದರಿ ರೈತರು ಆರ್‍ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಫಲಾನುಭವಿಗಳು ನೀರಾವರಿ ಮೂಲವನ್ನು ಹೊಂದಿರಬೇಕು ಹಾಗೂ ಸೂಕ್ಷ್ಮ ನೀರಾವರಿ ಘಟಕಗಳು ಕಾರ್ಯನಿರ್ವಹಿಸಲು ಅವಶ್ಯವಿರುವ ವಿದ್ಯುಚ್ಫಕ್ತಿ ಮೂಲಗಳನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ 8105166176, 9743674669, 8497812276 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಸಸಿ ವಿತರಣೆ; ಐಗೂರು, ಯಸಳೂರು ಮತ್ತು ಬಿಳಿಗೇರಿಯಲ್ಲಿರುವ ಸಂಬಾರ ಮಂಡಳಿಯ ಇಲಾಖಾ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಸಾಂಬಾರ ನಾಟಿ ಸಾಮಗ್ರಿಗಳು ಲಭ್ಯವಿದೆ. ಕೊಡಗು ಜಿಲ್ಲೆಯ ಎಸ್‍ಸಿ/ ಎಸ್‍ಟಿ ರೈತರು ಈ ಹಂಗಾಮಿನಲ್ಲಿ ನಾಟಿ ಮಾಡಲು ಸಸಿಗಳನ್ನು ಪಡೆಯಬಹುದು. ಚಿಕ್ಕ ಏಲಕ್ಕಿ ಬೀಜ ರೂ.3 ಮತ್ತು ಬ್ಲಾಕ್ ಪೆಪ್ಪರ್ ರೂಟೆಡ್ ಕಟಿಂಗ್ಸ್ ರೂ.2 ದರ ನಿಗದಿ ಮಾಡಲಾಗಿದೆ.

ಮಾಹಿತಿಗಾಗಿ ಐಗೂರು ಸ್ಪೈಸಸ್ ಬೋರ್ಡ್‍ನ ನರ್ಸರಿಯ ಫಾರ್ಮ್ ಮ್ಯಾನೇಜರ್ (9745295470), ಯಸಳೂರು ಸಾಂಬಾರ ಮಂಡಳಿ ನರ್ಸರಿಯ ಫಾರ್ಮ್ ಮ್ಯಾನೇಜರ್ (8310208940) ಹಾಗೂ ಬಿಳಿಗೇರಿ ಸಾಂಬಾರ ಮಂಡಳಿ ಇಲಾಖೆಯ ನರ್ಸರಿಯ ಫಾರ್ಮ್ ಮ್ಯಾನೇಜರ್ (9480249497) ಸಂಪರ್ಕಿಸಬಹುದಾಗಿದೆ.

English summary
Applications invited form farmers under National Agriculture Development Programme (NADP). Subsidy will given to horticulture crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X