'ಸುಗ್ಗಿ ಸಿರಿ' ಗೌರವಕ್ಕೆ ಯುವ ರೈತರಿಂದ ಅರ್ಜಿ ಆಹ್ವಾನ
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನ ಸಂವಾದ ಸಂಸ್ಥೆಯ 'ಬದುಕು ಸೆಂಟರ್ ಫಾರ್ ಲೈವ್ಲಿಹುಡ್ ಲರ್ನಿಂಗ್ ಕೇಂದ್ರ'ವು ''ಸುಗ್ಗಿ ಸಿರಿ'' ಗೌರವ ನೀಡಲು ಯುವ ರೈತರಿಂದ ಅರ್ಜಿ ಆಹ್ವಾನಿಸಿದೆ.
ಉತ್ತಮ ಕೃಷಿ ಅಭ್ಯಾಸ ಇರುವ 05 ಯುವ ರೈತರನ್ನು ಗೌರವಿಸಲಾಗುವುದು. ಅತ್ಯುತ್ತಮ ಕೃಷಿ ಅಭ್ಯಾಸವಿರುವ ಒಬ್ಬರಿಗೆ 'ಸುಗ್ಗಿ ಸಿರಿ' ಗೌರವ ನೀಡಿ ಸನ್ಮಾನಿಸಲಾಗುವುದು. ಮಹಿಳಾ ಮತ್ತು ಸಣ್ಣ ಪ್ರಮಾಣದ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ.

ಕರ್ನಾಟಕ ರಾಜ್ಯ ಗ್ರಾಮೀಣ ಭಾಗಗಳಲ್ಲಿ ಉತ್ತಮವಾದ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಸುಸ್ಥಿರ ಬದುಕು ಕಟ್ಟಿಕೊಂಡು ಮಾದರಿಯಾಗಿರುವ 35ವರ್ಷದೊಳಗಿನ ಕೃಷಿಕ ಯುವ ರೈತರು ಗೌರವಕ್ಕೆ ಅರ್ಹರು. ಆಸಕ್ತರು ನವೆಂಬರ್ 15ರೊಳಗೆ ಸ್ವತಃ ತಾವಾಗಿಯೇ ಅರ್ಜಿ ಸಲ್ಲಿಬಹುದು. ಇಲ್ಲವೇ ಬೇರೆಯವರು ತಮ್ಮ ಪರಿಚಿತರನ್ನು, ತಮ್ಮೂರಿನ ಯುವ ಉತ್ತಮ ರೈತರ ಹೆಸರು ಸೂಚಿಸಿ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಕೆಗೆ ಹಾಗೂ ಹೆಚ್ಚಿನ ಮಾಹಿತಿಗೆ ಸಂವಾದ, ಬಂಜಾರಪಾಳ್ಯ ಬಸ್ ನಿಲ್ದಾಣ ಬಳಿ, ಅಗರ ಗ್ರಾಮ, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ -82, ಇ-ಮೇಲ್ [email protected] ಇಲ್ಲವೇ ಮೊಬೈಲ್ ಸಂಖ್ಯೆ 81058 18026/ 96115 62812ಗೆ ಸಂಪರ್ಕಿಸುವಂತೆ ಬದುಕು ಸೆಂಟರ್ ಫಾರ್ ಲೈವ್ಲಿಹುಡ್ ಲರ್ನಿಂಗ್ ಕೇಂದ್ರ ತಿಳಿಸಿದೆ.












Click it and Unblock the Notifications