ಕೃಷಿ ಆತ್ಮ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಮೇ 22: ಕರ್ನಾಟಕ ಕೃಷಿ ಇಲಾಖೆಯಲ್ಲಿ 'ಆತ್ಮ' ಯೋಜನೆಯಡಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ ತಾವು ಯಾವ ಜಿಲ್ಲೆಗಳಲ್ಲಿ, ಯಾವ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಲು ಆಸಕ್ತಿಯಿದೆಯೋ ಅಂತಹ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರುಗಳಿಗೆ ದಿನಾಂಕ 31. 5. 2014 ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಮುದ್ದಾಂ/ನೋಂದಣಿ ಅಂಚೆ ಮೂಲಕ ಸಲ್ಲಿಸುವುದು.

ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ (Agriculture Technology Management Agency- ATMA) ಪ್ರಕಟಣೆಯಲ್ಲಿರುವ ತಾಂತ್ರಿಕ ಹುದ್ದೆಗಳು ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾದ್ದರಿಂದ ಯುವಕ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು. ಆದರೂ ಸೂಕ್ತ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಪಡೆದವರನ್ನು ಪರಿಗಣಿಸಲಾಗುವುದು. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. (ಮುಂಗಾರು-2014: 25 ಬೆಳೆಗಳಿಗೆ ಕೃಷಿ ವಿಮೆ ಭಾಗ್ಯ)

agriculture-technology-management-agency-karnataka-call-for-techno-recruitments

ಹೆಚ್ಚಿನ ವಿವರಗಳಿಗೆ ಇಲಾಖೆಯ http://raitamitra.kar.nic.in ವೆಬ್ ಸೈಟಿನಲ್ಲಿ ಮಾಹಿತಿ ಪಡೆಯಬಹುದು. ಅರ್ಜಿಗಳನ್ನು ಈ ವೆಬ್ ಸೈಟಿನಿಂದ ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಮೇ 31 ರಂದು ಸಂಜೆ 5 ಗಂಟೆ ಒಳಗಾಗಿ ಸಂಬಂಧಿಸಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ/ಸಂಬಂಧಿಸಿದ ನಿರ್ದೇಶಕರು ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು/ಧಾರವಾಡಕ್ಕೆ ತಲುಪಿಸುವುದು.

ಲಕೋಟೆ ಮೇಲೆ ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ಕೆಂಪು ಶಾಯಿಯಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು. ಅರ್ಜಿಗಳನ್ನು ವೆಬ್ ಸೈಟಿನಲ್ಲಿ ಸೂಚಿಸಿರುವಂತೆ ಅಭ್ಯರ್ಥಿಯು ಅರ್ಜಿಯೊಂದಿಗೆ ಸಲ್ಲಿಸಲಾಗಿರುವ ಮಾಹಿತಿ/ದಾಖಲಾತಿಗಳನ್ವಯ ಆದ್ಯತೆ ಪಟ್ಟಿಯನ್ನು ತಯಾರಿಸಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಪ್ರಕಟಿಸಲಾಗುವುದು. (ಭಾರತದಲ್ಲಿ ಮಳೆ ಮೇಲೆ ಎಲ್ ನಿನೊ ಪ್ರಭಾವ ಹೀಗಿದೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+