ಪೂರ್ವ ಮುಂಗಾರಿನಿಂದ ಸಾವಿರಾರು ಹೆಕ್ಟೇರ್ ಬೆಳೆ ಕಳೆದುಕೊಂಡು ಕಂಗಾಲಾದ ರೈತರು

ಬೆಂಗಳೂರು, ಜೂನ್. 02: ಈ ವರ್ಷ ಕಳೆದೆರಡು ತಿಂಗಳಿಂದ ರಾಜ್ಯದ ವಿವಿಧೆಡೆ ಸುರಿದ ಅಕಾಲಿಕ ಪೂರ್ವ ಮುಂಗಾರು ಮಳೆಗೆ ಸಾವಿರಾರು ಹೆಕ್ಟೇರ್‌ ಬೆಳೆ ಕೊಚ್ಚಿ ಹೋಗಿದ್ದು, ರಾಜ್ಯದ ರೈತರ ಸಂಕಷ್ಟವನ್ನು ಹೆಚ್ಚಿಸಿದೆ. 9,500 ಹೆಕ್ಟೇರ್ ಕೃಷಿ ಬೆಳೆಗಳು ಮತ್ತು 12,000 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ ಎಂದು ವರದಿ ಹೇಳಿದೆ.

ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಾರ್ಚ್ ಮತ್ತು ಮೇ ನಡುವಿನ ಮಳೆಯಿಂದಾಗಿ 9,581.62 ಹೆಕ್ಟೇರ್ ಭೂಮಿಯಲ್ಲಿನ ಕೃಷಿ ಬೆಳೆಗಳು ಮತ್ತು 12,060.86 ಹೆಕ್ಟೇರ್‌ಗಳಲ್ಲಿನ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಬೆಳೆಯನ್ನೇ ನಂಬಿಕೊಂಡಿದ್ದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಮಳೆ ಇನ್ನು ಶುಕ್ತವಾರವು ಮುಂದುವರೆಯುವ ಸಾಧ್ಯತೆಯಿದೆ.

Agricultural And Horticultural crops washed out by pre monsoon rains

ಬರಗಾಲದ ಅವಧಿಯನ್ನೇ ಹೆಚ್ಚಾಗಿ ಕಾಣುವ ಬೀದರ್ ಈ ವರ್ಷ ಅತಿ ಹೆಚ್ಚು ಮಳೆಯಾಗಿದ್ದು, ಇದರಿಂದಾಗಿ ಅತ್ಯಂತ ಕೆಟ್ಟ ಬೆಳೆ ನಷ್ಟವನ್ನು ಎದುರಿಸುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (KSNDMC) ಡೇಟಾಬೇಸ್ ಪ್ರಕಾರ ಮಾರ್ಚ್ ಮತ್ತು ಮೇ ನಡುವೆ ಜಿಲ್ಲೆಯಲ್ಲಿ ಒಟ್ಟು 200 ಮಿಮೀ ಮಳೆಯಾಗಿದೆ, ಇದು ಸಾಮಾನ್ಯಕ್ಕಿಂತ 235% ನಷ್ಟು ಹೆಚ್ಚು.

ಇದರಿಂದ ಬೀದರ್ ಜಿಲ್ಲೆಯಲ್ಲಿ ಒಟ್ಟು 5,577 ಹೆಕ್ಟೇರ್ ಕೃಷಿ ಬೆಳೆ ಹಾಗೂ 1,292 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಕೊಚ್ಚಿ ಹೋಗಿವೆ. ಅದೇ ರೀತಿ ಯಾದಗಿರಿಯಲ್ಲಿ 1,115.73 ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದ್ದು, ಮುಂಗಾರು ಪೂರ್ವದಲ್ಲಿ 98 ಮಿ.ಮೀ ಮಳೆ ದಾಖಲಾಗಿದ್ದು, ವಾಡಿಕೆ ಮಳೆಗಿಂತ ಶೇ.62ರಷ್ಟು ಜಾಸ್ತಿಯಾಗಿದೆ. ಈ ಎರಡು ಜಿಲ್ಲೆಗಳ ನಂತರ ದಾವಣಗೆರೆ, ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಕೃಷಿ ಬೆಳೆ ನಷ್ಟದಿಂದ ಹೆಚ್ಚಾಗಿ ಹಾನಿಗೊಳಗಾಗಿವೆ.

Agricultural And Horticultural crops washed out by pre monsoon rains

ರಾಜ್ಯದಾದ್ಯಂತ 3,750 ಹೆಕ್ಟೇರ್ ಜೋಳ, 1,782 ಹೆಕ್ಟೇರ್ ಭತ್ತ, 920 ಹೆಕ್ಟೇರ್ ಸೂರ್ಯಕಾಂತಿ, 843.94 ಹೆಕ್ಟೇರ್ ಬಾಜ್ರಾ ಮತ್ತು 711 ಹೆಕ್ಟೇರ್ ಗೋಧಿ ಬೆಳೆಗಳು ಮುಂಗಾರು ಪೂರ್ವ ಅವಧಿಯಲ್ಲಿ ನಾಶವಾಗಿವೆ.

"ಇದು ರಬಿ ಬೆಳೆ ಬಿತ್ತನೆಯ ಅವಧಿಯಾಗಿದ್ದು, ಅನಿರೀಕ್ಷಿತ ಮಳೆಯು ರೈತರ ಬೆಳೆಗಳಿಗೆ ಹಾನಿಯುಂಟು ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಈ ರೀತಿಯ ಮಳೆಯನ್ನು ನಾವು ನೋಡುವುದಿಲ್ಲ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಈ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ" ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಕೃಷಿ ಬೆಳೆಗಳಿಗಿಂತ ಚಿಕ್ಕದಾದ ಬೆಳೆ ಚಕ್ರಗಳನ್ನು ಹೊಂದಿರುವ ತೋಟಗಾರಿಕಾ ರೈತರು ಆಗಾಗ್ಗೆ ಋತುಮಾನದ ವಿಪತ್ತುಗಳಿಂದ ನಷ್ಟ ಹೊಂದುತ್ತಾರೆ. ಕಳೆದ ಕೆಲವು ತಿಂಗಳಲ್ಲಿ ಸುಮಾರು 201.6 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಈ ಬಾರಿ ಮಾವು ಮತ್ತು ಅದನ್ನು ಹೆಚ್ಚು ಬೆಳೆಯುವ ಜಿಲ್ಲೆ ಕೋಲಾರವು ಬೆಳೆ ನಷ್ಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೋಲಾರದಲ್ಲಿ ಸುಮಾರು 7,257 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 6,750.5 ಹೆಕ್ಟೇರ್‌ನಲ್ಲಿ ಇತ್ತೀಚೆಗೆ ಮಾವು ನಷ್ಟವಾಗಿದ್ದು ಈಗಾಗಲೇ ಸಂಕಷ್ಟದಲ್ಲಿರುವ ಮಾವು ರೈತರನ್ನು ದಂಗುಬಡಿಸಿದೆ. ಇದರ ನಂತರ ದ್ರಾಕ್ಷಿ (1,639.3 ಹೆಕ್ಟೇರ್), ಟೊಮೆಟೊ (1,125.89 ಹೆಕ್ಟೇರ್), ಬಾಳೆ, ಪಪ್ಪಾಯಿ, ಈರುಳ್ಳಿ, ಅಡಿಕೆ ಮತ್ತು ದಾಳಿಂಬೆ ಸರತಿ ಸಾಲಿನಲ್ಲಿವೆ. ಈ ಬೆಳೆಗಳ ನಷ್ಟದಿಂದಾಗಿ ಬೆಂಗಳೂರಿನಲ್ಲಿ ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದೆ.

ತೋಟಗಾರಿಕಾ ಇಲಾಖೆಯು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನೀಡಿರುವ ಮಾರ್ಗಸೂಚಿ ಪ್ರಕಾರ ರೈತರಿಗೆ ಪರಿಹಾರ ನೀಡಲು 34.66 ಕೋಟಿ ರೂಪಾಯಿ ಅಗತ್ಯವಿದೆ ಎಂದು ಅಂದಾಜಿಸಿದೆ. t

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+