ಕುಮಾರಸ್ವಾಮಿ ಮಾತುಕತೆ ಬಳಿಕವೂ ನಿಂತಿಲ್ಲ ರೈತರ ಪ್ರತಿಭಟನೆ
ಬೆಳಗಾವಿ, ನವೆಂಬರ್ 22: ಕುಮಾರಸ್ವಾಮಿ ಅವರು ಮೊನ್ನೆಯಷ್ಟೆ ಕಬ್ಬು ಬೆಳೆಗಾರರನ್ನು ಕರೆದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ ಸಹ ಕಬ್ಬು ಬೆಳೆಗಾರರು ಇಂದೂ ಸಹ ಪ್ರತಿಭಟನೆ ಮಾಡಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಸೇರಿ ಇನ್ನೂ ಕೆಲವು ಕಡೆ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಪಾವತಿ, ಕಬ್ಬಿಗೆ ಬೆಂಬಲ ಬೆಲೆ, ಎಫ್‌ಆರ್‌ಪಿ ಏರಿಕೆ ಮುಂತಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಮೊನ್ನೆ ಕಬ್ಬು ಬೆಳೆಗಾರರಿಗೆ ಭರವಸೆ ನೀಡಿದಂತೆ ಇಂದು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸುತ್ತಿದ್ದಾರೆ. ಅದರೂ ಸಹ ಕಬ್ಬು ಬೆಳೆಗಾರರು ಪ್ರತಿಭಟನೆ ನಿಲ್ಲಿಸಿಲ್ಲ.

ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದ ವಿಜಯಪುರ, ಬಳ್ಳಾರಿ , ಕಲಬುರಗಿಗಳಲ್ಲಿ ಇಂದು ಪ್ರತಿಭಟನೆ ನಡೆದಿಲ್ಲ. ಇಂದು ಪ್ರತಿಭಟನೆ ನಡೆದಿರುವ ಬೆಳಗಾವಿ, ಚಿಕ್ಕೋಡಿಗಳಲ್ಲೂ ಸಹ ಪ್ರತಿಭಟನೆ ತೀವ್ರ ಸ್ವರೂಪವಾಗಿ ಇರಲಿಲ್ಲ.
ಆದರೆ ಇಂದಿನ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯ ಫಲಿತಾಂಶ ಏನಾಗುತ್ತದೆ ಎಂಬುದರ ಮೇಲೆ ಕಬ್ಬು ಬೆಳೆಗಾರರ ಭವಿಷ್ಯ ನಿಂತಿದೆ. ಜೊತೆಗೆ ಮೈತ್ರಿ ಸರ್ಕಾರದ ಭವಿಷ್ಯವೂ ಇದೇ ಸಭೆಯ ಫಲಿತಾಂಶದ ಮೇಲೆ ನಿಂತಿದೆ.












Click it and Unblock the Notifications