ರೈತರ ಕೈಗೆ ಅದ್ಭುತ ರಿಮೋಟ್ ಕೊಟ್ಟ ಟೆಕ್ಕಿ
ಬೆಂಗಳೂರು, ಅ.24: ರೈತರ ಕಷ್ಟ ರೈತರಿಗಷ್ಟೆ ಗೊತ್ತು ಎಂಬ ಮಾತಿದೆ .ಆದರೆ, ರೈತರ ಸಂಕಷ್ಟವನ್ನು ಅಧ್ಯಯನ ಮಾಡಿರುವ ನಗರದ ಸಂಸ್ಥೆಯೊಂದು ರೈತರ ಕೈಗೆ ಅದ್ಭುತ ಸಾಧನವೊಂದನ್ನು ಕೊಟ್ಟಿದೆ. ವಿನ್ಫಿನೆಟ್ ಟೆಕ್ನಾಲಜೀಸ್ ನ ಟೆಕ್ಕಿಗಳು ರೈತರ ಕೈಗೆ ನೀಡಿರುವ ರಿಮೋಟ್ ಅತ್ಯುಪಯುಕ್ತವಾಗಲಿದೆ. ಕೆಲ ವರ್ಷಗಳ ಹಿಂದೆ ಕಂಡು ಹಿಡಿದ ಕಿಸಾನ್ ರಾಜ ಎಂಬ ಈ ಸಾಧನ ಈಗ ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಗ್ರಾಮೀಣ ಭಾಗಗಳಲ್ಲಿ ದಿನಕ್ಕೆರಡು ಬಾರಿ ಸಿಂಗಲ್ ಫೇಸ್ ಹಾಗೂ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾತ್ರ ಆಗುತ್ತದೆ. ಮಧ್ಯರಾತ್ರಿ ನಂತರ ಯಾವಾಗ ಪವರ್(ವಿದ್ಯುತ್) ಬಂದಿದೆ ನೋಡಿಕೊಂಡು ನೀರಾವರಿ ಪಂಪ್ ಚಾಲು ಮಾಡಬೇಕಾಗುತ್ತದೆ.ರಾತ್ರೋರಾತ್ರಿ ಪಂಚ್ ಆನ್ ಮಾಡಿ ಬರುವುದು ನಿತ್ಯ ಕಾಯಕವಾದರೂ ಸುಲಭದ ಕೆಲಸವೇನಲ್ಲ.

ಎಷ್ಟೋ ರೈತರು ಮೈಲಿಗಟ್ಟಲೆ ಹಾದಿ ತುಳಿದು ನೀರಿನ ಪಂಪ್ ಆನ್ ಮಾಡಿ ಬೆಳೆಗಳಿಗೆ ನೀರುಣುಸುತ್ತಾರೆ. ಈ ಸಮಸ್ಯೆಗೆ ವಿನ್ಫಿನೆಟ್ ಸಂಸ್ಥೆ ಪರಿಹಾರ ಕಂಡು ಕೊಂಡಿದೆ. ಈಗ ರಿಮೋಟ್ ಕಂಟ್ರೋಲ್ ಮೂಲಕ ದೂರದಲ್ಲಿರುವ ನೀರಾವರಿ ಪಂಪ್ ಸೆಟ್ ನಿಯಂತ್ರಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಬೆಂಗಳೂರು ಮೂಲದ ವಿನ್ಫಿಟೆಕ್ ಟೆಕ್ನಾಲಜೀಸ್ ನ ಸಿಇಒ ವಿಜಯ್ ಭಾಸ್ಕರ್ ರೆಡ್ಡಿ ಅವರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ಮೊಬೈಲ್ ಮೋಟರ್ ಕಂಟ್ರೋಲರ್ ಸಾಧನ ರೈತ ಮಿತ್ರ ಎನಿಸಲಿದೆ. ಈ ಸಾಧನ ಅಭಿವೃದ್ಧಿಪಡಿಸಿದ ಹಿಂದಿನ ಕಥೆಯನ್ನು ರೆಡ್ಡಿ ಅವರು ವಿಸ್ತಾರವಾಗಿ ವಿವರಿಸಿದ್ದಾರೆ.
ಆಂಧ್ರಪ್ರದೇಶದ ಕಡಪ ಮೂಲದ 36 ವರ್ಷ ವಯಸ್ಸಿನ ಟೆಕ್ಕಿ ರೆಡ್ಡಿ ಅವರು ವಿನ್ಪಿನೆಟ್ ಸಂಸ್ಥೆಗೂ ಮುನ್ನ ಸಿಸ್ಕೋ ಸಂಸ್ಥೆಯಲ್ಲಿ ದುಡಿದಿದ್ದಾರೆ. ಕಿಸಾನ್ ರಾಜ ಹೆಸರಿನಲ್ಲಿ ಜಿಎಸ್ ಎಂ ಆಧಾರಿತ ಮೊಬೈಲ್ ಜತೆ ರಿಮೋಟ್ ಕಂಟ್ರೋಲರ್ ಬಳಸಿ ರೈತರು 3 ಫೇಸ್ ನೀರಾವರಿ ಪಂಪ್ ನಿಯಂತ್ರಿಸಬಹುದಾಗಿದೆ.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಮೀಕ್ಷೆ ನಡೆಸಿ ರೈತರ ಸಮಸ್ಯೆ ಅರಿವಾದ ಮೇಲೆ ಈ ಸಾಧನ ಸೃಷ್ಟಿಸಲಾಯಿತು ಎಂದು ರೆಡ್ಡಿ ಹೇಳುತ್ತಾರೆ.
1.25 ಕೆಜಿ ತೂಕದ ಕಿಸಾನ್ ರಾಜ ಕಂಟ್ರೋಲರ್ ಪವರ್ ಫೇಸ್ ಹಾಗೂ ಸ್ಟಾಟರ್ ಮಧ್ಯೆ ಇಡಲಾಗಿರುತ್ತದೆ. ಮ್ಯಾನುಯಲ್, ಆಟೋಮೆಟಿಕ್ ಹಾಗೂ ಟೈಮರ್ ಮೂರು ರೀತಿಯಲ್ಲಿ ಇದನ್ನು ಬಳಸಬಹುದಾಗಿದೆ. ನೀರು ಪಂಪ್ ಮಾಡಲು ಮೋಟರ್ ತೆಗೆದುಕೊಳ್ಳುವ ಅವಧಿ, ಇನ್ನು ಎಷ್ಟು ಕಾಲ ಪಂಪ್ ಮಾಡಬಲ್ಲುದು ಮುಂತಾದ ವಿವರಗಳು ಅಂಗೈಯಲ್ಲೆ ಸಿಗುತ್ತದೆ.
ಜತೆಗೆ ಯಾರಾದರೂ ಮೋಟರ್ ಕದಿಯಲು ಯತ್ನಿಸಿದರೆ, ಹೈ ವೋಲ್ಟೇಜ್ ವ್ಯತ್ಯಯ ಉಂಟಾದರೆ, ವೈರ್ ತುಂಡಾದರೆ, ಡ್ರೈ ಆಗಿ ಓಡುತ್ತಿದ್ದರೆ ರೈತರಿಗೆ ಕಾಲ್ ಅಲರ್ಟ್ ಸಿಗುತ್ತದೆ. interactive voice response (IVR) ಮೂಲಕ ರೈತರು ಸಾಧನ ಉಪಯೋಗಿಸಬಹುದಾಗಿದೆ.
ಇಲ್ಲಿವರೆಗೂ ಸುಮಾರು 8 ಸಾವಿರಕ್ಕೂ ಅಧಿಕ ಸಾಧನಗಳನ್ನು ಮಾರಾಟ ಮಾಡಿರುವ ರೆಡ್ಡಿ ಇನ್ನಷ್ಟು ಬದಲಾವಣೆಯೊಂದಿಗೆ ಮತ್ತೊಮ್ಮೆ ಸಾಧನವನ್ನು ರೈತರ ಕೈಗಿಡುತ್ತಿದ್ದಾರೆ. ಮೈಸೂರಿನಲ್ಲಿ 2.5 ಎಕರೆ ಬಾಳೆ ಬೆಳೆಯುವ ಪಾಟೀಲರು ಒಂದು ವರ್ಷಕಾಲ ಕಿಸಾನ್ ರಾಜ ಸಾಧನ ಬಳಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಹೊಸ ಸಾಧನದ ಬೆಲೆ 3500, 800 ಗ್ರಾಂ ತೂಕ ಇರಲಿದೆ. ಒಂದಕ್ಕಿಂತ ಹೆಚ್ಚು ಮೋಟರ್ ನಿಯಂತ್ರಿಸಲು ಮಲ್ಟಿ ಮೋಟರ್ ಸಾಧನವನ್ನು 7500 ರು ನೀಡಿ ಪಡೆಯಬಹುದು.
ಹೆಚ್ಚಿನ ಮಾಹಿತಿ ಸಂಪರ್ಕಿಸಿ:
ವಿನ್ಫಿನೆಟ್ ಟೆಕ್ನಾಲಜೀಸ್ ಪ್ರೈ. ಲಿ
ಮಾರತ್ ಹಳ್ಳಿ ಸೇತುವೆ ಬಳಿ
ವಿಮಾನ ನಿಲ್ದಾಣ-ವೈಲ್ಡ್ ಫೀಲ್ಡ್ ರಸ್ತೆ
ಬೆಂಗಳೂರು 560 037
Tel No : +91 8041644294
Cell No : +91 9980010810
ವೆಬ್ ತಾಣ: ವಿನ್ಫಿನೆಟ್ ಟೆಕ್ನಾಲಜೀಸ್ ಪ್ರೈ. ಲಿ












Click it and Unblock the Notifications