ಅಸ್ಸಾಂನ ಈ ಚಹಾ ಬೆಲೆ ಒಂದು ಕೆ.ಜಿ.ಗೆ 1 ಲಕ್ಷ ರುಪಾಯಿ!
ಗುವಾಹಟಿ, ಜೂನ್ 20: ಭಾರತ ಚಹಾ ಪ್ರಿಯರ ದೇಶ, ನೀರು ಬಿಟ್ಟರೆ ದೇಶದಲ್ಲಿ ಹೆಚ್ಚಾಗಿ ಕುಡಿಯುವುದು ಚಹಾವನ್ನು, ಸಾಮಾನ್ಯವಾಗಿ ಭಾರತದಲ್ಲಿ ಪ್ರತಿ ಕಪ್ ಚಹಾ ಬೆಲೆ 10 ರುಪಾಯಿಯಿಂದ 20 ರುಪಾಯಿವರೆಗೆ ಇದೆ. ಐಷಾರಾಮಿ ಹೋಟೆಲ್‌ಗಳಲ್ಲಿ ಇದರ ಬೆಲೆ 100 ರಿಂದ 500 ರೂಗಳ ವರೆಗೆ ಇರಬಹುದು. ಚಹಾ ಪುಡಿ 1000 ರುಪಾಯಿವರೆಗೆ ಇರುತ್ತದೆ, ಆದರೆ ಅಸ್ಸಾಂನ ಟೀ ಎಸ್ಟೇಟ್ ಒಂದು ತಾನು ಉತ್ಪಾದಿಸಿದ ಚಹಾವನ್ನು ದಾಖಲೆ ಬೆಲೆಗೆ ಮಾರಾಟ ಮಾಡಿದೆ.
ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾ ಜೋರ್ಹತ್‌ನ ಹರಾಜು ಕೇಂದ್ರದಲ್ಲಿ ಸೋಮವಾರ ಪ್ರತಿ ಕೆ.ಜಿ.ಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದೆ.
ಇದು ಈ ವರ್ಷದಲ್ಲೇ ಅತಿ ಹೆಚ್ಚು ದಾಖಲೆಗೆ ಮಾರಾಟವಾದ ಚಹಾ ಎನಿಸಿಕೊಂಡಿದೆ. ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡಿದ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ಎಸಾಹ್ ಟೀ ಖರೀದಿಸಿದೆ ಎಂದು ತಿಳಿಸಿದ್ದಾರೆ.

ಅಪರೂಪದ ಚಹಾ!
ಪಭೋಜನ್ ಗೋಲ್ಡ್ ಟೀ ಹಿತವಾದ ರುಚಿಯೊಂದಿಗೆ ಪ್ರಕಾಶಮಾನವಾದ ಹಳದಿ ಡಿಕಾಕ್ಷನ್ ನೀಡುತ್ತದೆ ಮತ್ತು ಚಹಾ ಎಸ್ಟೇಟ್‌ನಿಂದ ಆಯ್ಕೆ ಮಾಡಿದ ಉತ್ತಮವಾದ ಟೀ ಎಲೆಗಳಿಂದ ತಯಾರಿಸಲಾಗುತ್ತದೆ. ಸುಳಿ ಚಿನ್ನದ ಬಣ್ಣಕ್ಕೆ ತಿರುಗುತ್ತವೆ ಮತ್ತು ಪಾನೀಯಕ್ಕೆ ಬಣ್ಣ ಸೇರಿಸುತ್ತವೆ.
ಎಸಾಹ್ ಟೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಜಿತ್ ಶರ್ಮಾ ಮಾತನಾಡಿ, ಅಸ್ಸಾಂನ ಅತ್ಯುತ್ತಮ ಚಹಾ ಮಿಶ್ರಣಗಳಲ್ಲಿ ಒಂದನ್ನು ತಮ್ಮ ಗ್ರಾಹಕರಿಗೆ ಒದಗಿಸಲು ಚಹಾ ವೈವಿಧ್ಯವು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
"ಈ ಚಹಾ ವೈವಿಧ್ಯವು ಅಪರೂಪ, ಚಹಾ ಪ್ರಿಯರಿಗೆ, ಇದು ಒಂದು ಕಪ್‌ನಲ್ಲಿನ ಅನುಭವ. ನಮ್ಮ ಗ್ರಾಹಕರು ಪ್ರಪಂಚದಾದ್ಯಂತ ಹರಡಿದ್ದಾರೆ ಮತ್ತು ಈ ವಿಧದ ರುಚಿ ಮತ್ತು ಚಹಾದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಅಧಿಕೃತ ಅಸ್ಸಾಂ ಚಹಾ ಒದಗಿಸುವ ನಮ್ಮ ಕೆಲಸವನ್ನು ಮುಂದುವರಿಸಲು ಸಾಧ್ಯವಾಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ'' ಎಂದು ಬಿಜಿತ್ ಶರ್ಮಾ ಹೇಳಿದರು.

ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್‌ನ ಮಾಲೀಕ ರಾಖಿ ದತ್ತಾ ಸೈಕಿಯಾ ಮಾತನಾಡಿ, "ನಾವು ಈ ಅಪರೂಪದ ವಿಧದ ಚಹಾವನ್ನು ಕೇವಲ ಒಂದು ಕೆಜಿ ಉತ್ಪಾದಿಸಿದ್ದೇವೆ ಮತ್ತು ಹೊಸ ದಾಖಲೆ ಬೆಲೆಯಿಂದ ಇತಿಹಾಸ ಸೃಷ್ಠಿಸಿರುವುದಕ್ಕೆ ಸಂತೋಷವಾಗುತ್ತಿದೆ. ಈ ಚಹಾ ಪಡೆದ ಬೆಲೆಯು ಅಸ್ಸಾಂ ಚಹಾ ಉದ್ಯಮವು ಕಳೆದುಹೋದ ಖ್ಯಾತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ,'' ಎಂದು ಅವರು ಹೇಳಿದರು.
ಈ ವಿಧದ ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾಕ್ಕೆ ವಿವೇಚನಾಶೀಲ ಗ್ರಾಹಕರು, ಚಹಾ ಪ್ರಿಯರು ಮತ್ತು ಖರೀದಿದಾರರಿಂದ ಹೆಚ್ಚಿನ ಬೇಡಿಕೆಯನ್ನು ಅನುಸರಿಸಿ ಈ ವಿಧವನ್ನು ಮೊದಲ ಬಾರಿಗೆ ತಯಾರಿಸಲಾಗಿದೆ ಎಂದು ಸೈಕಿಯಾ ಹೇಳಿದರು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications