Get Updates
Get notified of breaking news, exclusive insights, and must-see stories!

2011-2015ರ ಮಧ್ಯೆ ದೇಶದಲ್ಲಿ ಕೇವಲ ಎಪ್ಪತ್ತು ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರು, ಜೂನ್ 16: ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಬದಲಾವಣೆ ಗೋಚರಿಸುತ್ತಿದೆ. 2010-11 ಹಾಗೂ 2014-15ರ ಮಧ್ಯೆ 3.3 ಕೋಟಿ ಕೃಷಿಯೇತರ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಬಗ್ಗೆ ಮೆಕ್ ಕಿನ್ಸಿ ಗ್ಲೋಬಲ್ ಇನ್ ಸ್ಟಿಟ್ಯೂಟ್ ಅಧ್ಯಯನ ನಡೆಸಿದೆ.

ಈ ಸಂಖ್ಯೆ ಮೂಲಕ ಹೇಳುವುದಾದರೆ ವಾರ್ಷಿಕ ಸರಾಸರಿ ಎಂಬತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಇದೇ ಅವಧಿಯಲ್ಲಿ ಕೃಷಿ ಉದ್ಯೋಗ ಎರಡೂವರೆ ಕೋಟಿಗೂ ಹೆಚ್ಚು ಇಳಿಕೆಯಾಗಿದೆ. ಈ ನಾಲ್ಕು ವರ್ಷದ ಅವಧಿಗೆ ನಿವ್ವಳ ಹೆಚ್ಚಳವನ್ನು ಲೆಕ್ಕ ಹಾಕಿದರೆ ಅದು ಬರೀ ಎಪ್ಪತ್ತು ಲಕ್ಷ ಮಾತ್ರ.

7 mn jobs added between FY11 and FY15, says McKinsey report

ಒಟ್ಟಾರೆ ಉದ್ಯೋಗವು 4.56 ಕೋಟಿಯಿಂದ 4.63 ಕೋಟಿಗೆ ಹೆಚ್ಚಾಗಿದೆ. ಪ್ರತಿ ವರ್ಷ ಬರುತ್ತಿರುವ ಕಾರ್ಮಿಕರ ಸಂಖ್ಯೆಗೆ ಹೋಲಿಸಿದರೆ ಕೃಷಿಯೇತರ ವಲಯದಲ್ಲಿ ಸೃಷ್ಟಿಯಾದ ಉದ್ಯೋಗ ಏನೇನೂ ಸಾಲುವುದಿಲ್ಲ. ದುಡಿಮೆಯ ವಯೋಮಾನದವರ ಲೆಕ್ಕವನ್ನು ಹಿಡಿದು ಹೇಳುವುದಾದರೆ ಭಾರತದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಅಂಥ ವೇಗವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ನ್ಯಾಷನಲ್ ಸ್ಯಾಂಪಲ್ ಸರ್ವೇ ಕಚೇರಿ ನಡೆಸಿದ ಉದ್ಯೋಗ ಹಾಗೂ ನಿರುದ್ಯೋಗ ಪ್ರಮಾಣದ ಆಧಾರದ ಮೇಲೆ ಈ ವರದಿ ಸಿದ್ಧವಾಗಿದೆ. 2011-2012ರ ಆರ್ಥಿಕ ವರ್ಷದಲ್ಲಿ ಅಂದರೆ ಆರ್ಥಿಕ ಹಿಂಜರಿತ ಇದ್ದ ಸಂದರ್ಭದಲ್ಲಿ ಕೇವಲ 1.1 ಕೋಟಿ ಉದ್ಯೋಗ ಸೃಷ್ಟಿಯಾಗಿದೆ.

ಆ ನಂತರದ ಎರಡು ವರ್ಷಗಳಲ್ಲಿ ಮತ್ತೆ ಪ್ರಗತಿಯಾಗಿದ್ದು, 2.2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಪ್ರಮುಖವಾಗಿ ವ್ಯಾಪಾರ, ಆತಿಥ್ಯ, ನಿರ್ಮಾಣ ಹಾಗೂ ಸಂಚಾರ ವಲಯದಲ್ಲಿ ಸೃಷ್ಟಿಯಾದ ಉದ್ಯೋಗಗಳಿವು. ಗಣಿಗಾರಿಕೆ ಹಾಗೂ ಉತ್ಪಾದನಾ ವಲಯದಲ್ಲಿ ಸಂಖ್ಯೆ ಇಳಿಮುಖವಾಗಿದೆ.

ಒಟ್ಟಾರೆಯಾಗಿ ನೋಡುವಾಗ ಕೃಷಿ ವಲಯದಲ್ಲಿ 2011ರಲ್ಲಿ ಶೇ 55.4ರಷ್ಟಿದ್ದ ಕಾರ್ಮಿಕರ ಪಾಲ್ಗೊಳ್ಳುವ ಪ್ರಮಾಣ 2015ರ ಹೊತ್ತಿಗೆ ಶೇ 52.4ಕ್ಕೆ ಕುಸಿದಿದೆ. ಈ ಪೈಕಿ ಬಹುತೇಕ ಕುಸಿತ ಕಂಡಿರುವುದು ಆರ್ಥಿಕ ಹಿಂಜರಿಕೆಯ ಆರಂಭದ ವರ್ಷದಲ್ಲಿ ಎಂಬುದು ಗಮನಾರ್ಹ ಅಂಶ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+