ಎಳ್ಳಿನಲ್ಲೇನಿದೆ ?ತಿನ್ನುವುದರಿಂದ ಏನು ಲಾಭ?
ಆಯುರ್ವೇದದ
ಪ್ರಕಾರ ಎಳ್ಳು ಉಷ್ಣಗುಣವುಳ್ಳದ್ದು, ವಾತ, ವೃಣ ಮತ್ತು ಚರ್ಮರೋಗ ನಿವಾರಣೆ ಮಾಡುವ ಗುಣವಿದೆ. ಎಲ್ಲಕ್ಕಿಂತ ಮಿಗಿಲಾಗಿ ರಕ್ತವೃದ್ಧಿ ಮಾಡುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣುಮಕ್ಕಳು ಪ್ರಥಮವಾಗಿ ರಜಸ್ವಲೆಯಾದಾಗ ಎಳ್ಳಿನ ಚಿಗುಳಿ ಕೊಡಲಾಗುತ್ತದೆ. ಖಗೋಲ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿಯು ಪುಷ್ಯ ಮಾಸದಲ್ಲಿ ಬರುತ್ತದೆ. ಪೂರ್ಣಿಮಾ ದಿನ ಚಂದ್ರನು ಪುಷ್ಯ ನಕ್ಷತ್ರದಲ್ಲಿರುತ್ತಾನೆ. ಪುಷ್ಯ ಮಾಸವು ಶನಿಯ ಮಾಸ. ಈ ಮಾಸದಲ್ಲಿ ಶನಿಯ ಪ್ರಭಾವವಿರುತ್ತದೆ. id="toptextpromo">ಜ್ಯೋತಿಷ
ಶಾಸ್ತ್ರದ ಪ್ರಕಾರ ಶನಿ ಶರೀರದಲ್ಲಿರುವ ಜೀವನಾಡಿಗೆ ಕಾರಕ. ಈ ಜೀವನಾಡಿಯ ಒಂದು ಶಾಖೆಯು ಹೃದಯ ಬಡಿತ ಮತ್ತು ರಕ್ತಚಲನೆಗಳನ್ನು ನಿಯಂತ್ರಿಸುತ್ತದೆ. ವೈದ್ಯ ಶಾಸ್ತ್ರದ ಪ್ರಕಾರ ಧನುರ್ಮಾಸದ ಚಳಿ ಮುಗಿಯುವ ವೇಳೆಗೆ ಶರೀರದ ಕೊಬ್ಬಿನ ಅಂಶವು ಕಮ್ಮಿಯಾಗಿರುವುದರಿಂದ ಮಕರ ಮಾಸ ಶುರುವಾಗುವಾಗಲೇ ಈ ಕೊಬ್ಬಿನ ಕೊರತೆಯನ್ನು ಸರಿದೂಗಿಸಬೇಕು. ಇದರಿಂದ ಸೂರ್ಯನ ಪ್ರಭಾವವನ್ನು ಮುಂದೆ ಎದುರಿಸಲು ಶರೀರದಲ್ಲಿ ಮುಖ್ಯವಾದ ಜೀವನಾಡಿಯು ಸುಗಮವಾಗಿ ಕೆಲಸ ಮಾಡುವುದರ ಮೂಲಕ ಹೃದಯದ ಕ್ರಿಯೆಯೂಸರಿಯಾಗಿರುವಂತೆ ಮಾಡುವ ಎಳ್ಳು ಬೆಲ್ಲವನ್ನು ಸೇವನೆ ಮಾಡುವಂತೆ ನಿಯಮ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>
ಪುಷ್ಯ
ನಕ್ಷತ್ರವು ಶನಿಯ ನಕ್ಷತ್ರ. ಶನಿಗೆ ಯಮ ಅಧಿದೇವತೆ. ಯಮ ಎಂದರೆ ಸಂಯಮ ಎಂದರ್ಥ. ಇದು ಜೀವನಾಡಿಯ ಮೂಲಕ ಮಾತ್ರ ಹತೋಟಿ ಸಾಧ್ಯ. ಜೀವನಾಡಿಯ ಈ ಕೆಲಸಕ್ಕೆ ಕೊಬ್ಬಿನ ಅಂಶ ಕಮ್ಮಿಯಾದರೆ ನಿಶ್ಯಕ್ತಿ, ಅನಾರೋಗ್ಯ ಇತ್ಯಾದಿಗಳು ಉಂಟಾಗುತ್ತವೆ. ಇದನ್ನು ನಿವಾರಿಸುವುದೇ ಎಳ್ಳು ಬೆಲ್ಲದ ಸೇವನೆ ಉದ್ದೇಶ. ಗರುಡ ಪುರಾಣದಲ್ಲಿ ನಾಭಿಸ್ಥಾನವು ಶನಿ ಸ್ಥಾನವೆಂದು ಹೇಳಲ್ಪಟ್ಟಿದೆ. ನಾಭಿ ಕಮಲದಿಂದ ಸೃಷ್ಟಿಕರ್ತನಾದ ಬ್ರಹ್ಮ ಹುಟ್ಟಿದನೆಂದು ಪುರಾಣ ಸಾರಿದೆ. ಯಾವಾಗ ಶರೀರದ ಈ ಪ್ರದೇಶವನ್ನು ಶನಿ ಪ್ರದೇಶವೆಂದು ಹೇಳಿದರೋ ಆಗ ಈ ಪ್ರದೇಶಕ್ಕೆಲ್ಲ ಮಹತ್ವಕ್ಕೆ ಶನಿಕಾರಕನೆಂದಾಯಿತು. ಈ ತಿಂಗಳಿನಲ್ಲಿ ಎಳ್ಳು ತಿಂದರೆ ಶನಿಯ ಉಪದ್ರವ ಶಮನವಾಗುತ್ತದೆಂಬ ತಾತ್ಪರ್ಯ.











Click it and Unblock the Notifications