keyboard_backspace

ಒಬ್ಬ ಸಂತೆಯಲ್ಲಿ ಸಿಕ್ಕಿಬಿದ್ದ... ಮತ್ತೊಬ್ಬ ಸ್ವಾತಿಯಲ್ಲಿ ಇದ್ದ !

Google Oneindia Kannada News

ಬೆಂಗಳೂರು ಜನವರಿ 08: ಅಯ್ಯೋ...ಸ್ವಾಮಿ.. ನಂದೇನು ತಪ್ಪಿಲ್ಲ. ಗೊತ್ತಿಲ್ಲದೇ ಹೊಟ್ಟೆಗೆ ಮಣ್ಣು ತಿನ್ನೋ ಕೆಲಸ ಮಾಡಿ ಬಿಟ್ಟೆ. ದಯವಿಟ್ಟು ಬಿಟ್ಟುಬಿಡಿ.. ಪ್ಲೀಸ್‌ ಹೀಗೆ ಒಬ್ಬ ಕಾಲಿಡಿದು ಅಂಗಲಾಚುತ್ತಿದ್ದರೆ, ಇನ್ನೋಬ್ಬ ವ್ಯಕ್ತಿಗೆ ಉಸಿರೇ ಇಲ್ಲ ! ಅಯ್ಯೋ ಭಗವಂತ, ಏನಯ್ಯಾ ಬಾಯಿಗೆ ಮಣ್ಣು ಹಾಕಿಬಿಟ್ಟೆ ಅಂತ ಕಿರುಚಾಟ !

ಎಸಿಬಿ ಅಧಿಕಾರಿಗಳು ಒಂದು ಲಂಚ ಪ್ರಕರಣದಲ್ಲಿ ಎರಡು ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಬೇಟೆಯಾಡಿದ ವಿಚಿತ್ರ ಪ್ರಕರಣ. ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸಿ ಕಂದಾಯ ನಿರೀಕ್ಷಕ ಹಾಗೂ ಆರು ಲಕ್ಷ ರೂಪಾಯಿ ಲಂಚ ಸ್ವೀಕರಿಸಿ ಚಿಕ್ಕಜಾಲ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮೈಸೂರು; ತಳ್ಳುಗಾಡಿಯವರಿಂದ ಲಂಚ ಪಡೆದ ಪೊಲೀಸರು ಅಮಾನತು ಮೈಸೂರು; ತಳ್ಳುಗಾಡಿಯವರಿಂದ ಲಂಚ ಪಡೆದ ಪೊಲೀಸರು ಅಮಾನತು

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ಚಿಕ್ಕಜಾಲ ಠಾಣೆಯ ಮುಖ್ಯಪೇದೆ ರಾಜು ಹಾಗೂ ಚಿಕ್ಕಜಾಲ ನಾಡ ಕಚೇರಿ ರಾಜಸ್ವ ನಿರೀಕ್ಷಕ ಪುಟ್ಟ ಹನುಮಯ್ಯ ಅಲಿಯಾಸ್ ಪ್ರವೀಣ್ ಎಸಿಬಿ ಬಲೆಗೆ ಬಿದ್ದ ಲಂಚಬಾಕರು. ಚಿಕ್ಕಜಾಲ ಠಾಣೆ ಇನ್ಸ್ಪೆಕ್ಟರ್ ಯಶವಂತ್ ನಿನ್ನೆ ಮಧ್ಯಾಹ್ನದಿಂದ ಠಾಣೆಗೆ ಬಂದಿಲ್ಲ. ಇನ್‌ಸ್ಪೆಕ್ಟರ್ ಸೂಚನೆಯಂತೆ ಸಂತೆಯಲ್ಲಿ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದುಹೆಡ್ ಕಾನ್ಸ್ಟೇಬಲ್ ಜೈಲಿಗೆ ಹೋಗಿದ್ದಾರೆ.

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ಪ್ರಕರಣದ ವಿವರ: ಬೆಂಗಳೂರಿನ ನಿವಾಸಿಯೊಬ್ಬರು ಜಾಲ ಹೋಬಳಿಯಲ್ಲಿ 2018 ರಲ್ಲಿ ಐದು ಎಕರೆ ಜಮೀನು ಖರೀದಿಸಿದ್ದರು. ಜಮೀನಿನ ಭೂ ಮಾಲೀಕರು ಇದೇ ಭೂಮಿಯನ್ನು ಬೇರೊಬ್ಬರಿಗೆ ಮಾರಾಟ ಮಾಡಿ ಅಗ್ರಿಮೆಂಟ್ ಮಾಡಿಕೊಟ್ಟಿದ್ದರು. ಈ ಕುರಿತು ನ್ಯಾಯಾಲಯಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದ ಖರೀದಿದಾರ ಭೂಮಿಗೆ ಖಾತೆ ಮಾಡಿಕೊಡುವಂತೆ ಉತ್ತರ ತಾಲೂಕು ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಜಮೀನಿನ ದಾಖಲಾತಿ ಮಾಡಿಕೊಡಲು 50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ಭೂಮಿಯಲ್ಲಿ ನಾಮ ಫಲಕ ಹಾಕಿ ಭೂಮಿಗೆ ರಕ್ಷಣೆ ಕೊಡಲು ಆರು ಲಕ್ಷ ರೂಪಾಯಿ ಲಂಚ ಕೊಡುವಂತೆ ಚಿಕ್ಕಜಾಲ ಠಾಣೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಈ ಕುರಿತು ಭೂಮಿಯ ಖರೀದಿದಾರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ನಿನ್ನೆಯಿಂದ ಕಾರ್ಯಾಚರಣೆ: ಒಂದೇ ಪ್ರಕರಣದಲ್ಲಿ ಎರಡು ಇಲಾಖೆಯ ಅಧಿಕಾರಿಗಳನ್ನು ಟ್ರಾಪ್ ಮಾಡುವುದು ಸುಲಭದ ಮಾತಲ್ಲ. ಒಂದಡೆ ಟ್ರಾಪ್ ಆಗುತ್ತಿದ್ದಂತೆ ಅದು ಸುದ್ದಿಯಾಗಿ ಎಲ್ಲಡೆ ಹರಿದಾಡಿಬಿಟ್ಟಿರುತ್ತದೆ. ಆದರೆ ನಿನ್ನೆ ಎಸಿಬಿ ಅಧಿಕಾರಿಗಳು ರೂಪಿಸಿದ ಯೋಜನೆಯಿಂದ ಒಂದೇ ಪ್ರಕರಣದಲ್ಲಿ ಎರಡು ಇಲಾಖೆಯ ಇಬ್ಬರು ಅಧಿಕಾರಿಗಳು ಏಕ ಕಾಲಕ್ಕೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ಎರಡು ಪ್ರತ್ಯೇಕ ಎಸಿಬಿ ತಂಡ ರಚಿಸಿದ್ದರು. ಗುರುವಾರ ಮಧ್ಯಾಹ್ನದಿಂದಲೇ ಲಂಚವನ್ನು ಸ್ವೀಕರಿಸುವ ಬಗ್ಗೆ ಜಮೀನು ಮಾಲೀಕರು ಮಾತುಕತೆ ನಡೆಸುತ್ತಿದ್ದರು. ಒಬ್ಬ ಲಂಚಬಾಕ ಮಲ್ಲೇಶ್ವರಂಗೆ ಬರಲು ಹೇಳಿದ್ದ, ಮತ್ತೊಬ್ಬ ಚಿಕ್ಕಜಾಲ ಸಂತೆಗೆ ಬರಲು ತಿಳಿಸಿದ್ದ. ಒಬ್ಬನೇ ದೂರುದಾರ ಎರಡು ಕಡೆ ಓಡಾಡಿ ಲಂಚದ ಹಣ ಕೊಡಬೇಕಿತ್ತು. ಮೊದಲು ಮಲ್ಲೇಶ್ವರಂ ನಲ್ಲಿರುವ ಸ್ವಾತಿ ಹೋಟೆಲ್ ಗೆ ಕರೆಸಿಕೊಂಡ ರಾಜಸ್ವ ನಿರೀಕ್ಷಕ ಪುಟ್ಟ ಹನುಮಯ್ಯ ಕಾಫಿ ಹೀರುತ್ತಾ ಐದು ಲಕ್ಷ ರೂಪಾಯಿ ಮುಂಗಡ ಸ್ವೀಕರಿಸಿದ್ದರು. ಈ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿ ಲಂಚದ ಸಮೇತ ಹಿಡಿದುಕೊಂಡಿದ್ದಾರೆ.

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ಒಂದೇ ಕೇಸಿನಲ್ಲಿ ಇಬ್ಬರು ಲಂಚಬಾಕರ ಬೇಟೆಯಾಡಿದ ಎಸಿಬಿ !

ಇದಾದ ಎರಡೇ ಕ್ಷಣದಲ್ಲಿ ಎಸಿಬಿ ಅಧಿಕಾರಿಗಳ ಇನ್ನೊಂದು ತಂಡ ಚಿಕ್ಕಜಾಲ ಸಂತೆಗೆ ತೆರಳಿತ್ತು. ಸುಮಾರು ಹೊತ್ತು ಕಾಯಿಸಿರುವ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ಲ ರಾಜು ಕೊನೆಗೆ ಸಂತೆಗೆ ಬಂದು ಹಣ ಕೊಟ್ಟು ಹೋಗುವಂತೆ ತಿಳಿಸಿದ್ದಾರೆ. ದೂರುದಾರರು ಆರು ಲಕ್ಷ ರೂ. ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣ ವಶಪಡಿಸಿಕೊಂಡಿದ್ದಾರೆ. ಇಬ್ಬರು ಲಂಚ ಬಾಕ ಅಧಿಕಾರಿಗಳ ಕೈ ತೊಳೆದು ಹಣ ಸ್ವೀಕರಿಸಿದ ಬಗ್ಗೆ ಪ್ರಮುಖ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ. ಎಸಿಬಿ ಬಲೆಗೆ ಬಿದ್ದ ಇಬ್ಬರು ಲಂಚ ಬಾಕರು ಎಸಿಬಿ ಅಧಿಕಾರಿಗಳ ಕಾಲಿಗೆ ಬೀಳಲು ಯತ್ನಿಸಿದ್ದಾರೆ. ಯಾವುದಕ್ಕೂ ಸೊಪ್ಪು ಹಾಕದೇ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸಿಬಿ ಬೆಂಗಳೂರು ನಗರ ಘಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.

English summary
ACB officials trapped the revenue inspector and Head Constable for taking Bribes in Bengaluru. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X