ತೆರೆದಿದೆ ಅಡುಗೆಮನೆ ಓ ಬಾ ಅತಿಥಿ

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಿ ಬೇಸಿಗೆ ಈಗ ತಾನೆ ಕಾಲಿಟ್ಟಿದೆ. ದೂರದೂರಿನಿಂದ ಬಂದ ಲಕ್ಷಾನುಲಕ್ಷ ಹಮ್ಮೀರರೆಲ್ಲ ಸಾಂಸ್ಕೃತಿಕ ಸೌರಭ ಸವಿಯಲು ತಯಾರಾಗಿದ್ದಾರೆ. ಬಂದವರ ಹಸಿವು ತಣಿಸಲೆಂದು ಏಳೆಂಟು ಬೃಹತ್ ಅಡುಗೆಮನೆಗಳು ಸ್ಟೌವನ್ನು ಚಾಲು ಮಾಡಿಕೊಂಡು ಕೂತಿವೆ. ತೆರೆದಿದೆ ಮನೆ ಓ ಬಾ ಅತಿಥಿ ಎಂದು ಬಾಣಸಿಗರು ಕೈಯಲ್ಲಿ ಸೌಟು ಹಿಡಿದು ನಿಂತಿದ್ದಾರೆ.
ತರಹೇವಾರಿ ಬೆಳಗಾವಿಯ ಸ್ಪೆಷಲ್ ತಿಂಡಿ ತಿನಿಸುಗಳು ಚುರುಗುಟ್ಟುವ ಹೊಟ್ಟೆಯನ್ನು ಸೇರಲು ಕಾತುರದಿಂದ ಕಾಯುತ್ತಿವೆ. ಇನ್ನೇಕೆ ತಡ ಬೆಳಗಿನ ನಾಷ್ಟಾಕ್ಕಾಗಿ ಅಡುಗೆಮನೆಗಳತ್ತ ಪಾದ ಬೆಳೆಸಿ. ಶುಕ್ರವಾದ ನಾಷ್ಟಾಕ್ಕೆ ಬೆಳಗಾವಿಯ ಟ್ರೇಡ್ ಮಾರ್ಕ್ ತಿಂಡಿಗಳಾದ ಶಿರಾ, ಉಪ್ಪಿಟ್ಟು, ಚಹಾ, ಕಾಫಿ ಅತಿಥಿಗಳಿಗಾಗಿ ತಯಾರಾಗುತ್ತಿವೆ.
ತಿಂಡಿ ಆದ ಮೇಲೆ ಮಧ್ಯಾಹ್ನದ ಊಟಕ್ಕೇನು ವಿಶೇಷ ಎಂದು ಕೇಳಿಯೇ ಕೇಳುತ್ತೀರಿ. ಹೀಗಿದೆ ನೋಡಿ ಮಧ್ಯಾಹ್ನದ ಮೆನು : ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿ, ಬದನೆಕಾಯಿ ಪಲ್ಲೆ, ಕಡಲೆಕಾಳು ಪಲ್ಲೆ. ಗೋಧಿ ಹುಗ್ಗಿ ನೀವು ತಿಂದಿಲ್ಲವಾದರೆ ರಾತ್ರಿಯ ಊಟವನ್ನು ಮಿಸ್ ಮಾಡಿಕೊಳ್ಳಬೇಡಿ..... ಜೊತೆಗೆ ಬೆಳಗಾವಿ ಸೂಪರ್ ಸ್ಪೆಷಲ್ ಸಿಹಿ ತಿನಿಸು ಮೋತಿಪಾಕ್ ವಡಿ ಸವಿಯುವುದನ್ನು ಮರೆಯಬೇಡಿ. ಈ ಬೆಳಗಾವಿ ಸೂಪರ್ ಸ್ಪೆಷಲ್ ಸ್ವೀಟಿನ ಸವಿಯೇ ಅಂತಹುದು. ಅದನ್ನು ಹೇಗೆ ತಯಾರಿಸುತ್ತಾರೆಂದು ತಿಳಿಯಬೇಕೆ?











Click it and Unblock the Notifications