Get Updates
Get notified of breaking news, exclusive insights, and must-see stories!

ಜೂನ್ 3ರ ಸುದ್ದಿಸಾರ: ನೀವು ಓದಲೇ ಬೇಕಿದ್ದ 10 ಸುದ್ದಿಗಳು

ವೀಕೆಂಡ್ ಗಡಿಬಿಡಿಯಲ್ಲಿ ಜೂನ್ 3ರಂದು ಕೆಲವಾರು ಸುದ್ದಿಗಳು ನಿಮ್ಮ ಕಣ್ತಪ್ಪಿದವೇ? ಹಾಗಾದರೆ, ಅಂಥ ಸುದ್ದಿಗಳೂ ಸೇರಿದಂತೆ ಶನಿವಾರದ ಕೆಲವು ಮಹತ್ವದ ಸುದ್ದಿಗಳನ್ನು ತಂದು ಇಲ್ಲಿ ನಿಮ್ಮ ಮುಂದೆ ಸುರಿದಿದ್ದೇವೆ.

ದಿನದ ಸುದ್ದಿಗಳಲ್ಲಿ ಮೈಸೂರಿನಲ್ಲಿ ನಡೆದ ಕರ್ನಾಟಕ ಸರ್ಕಾರದ ನಾಲ್ಕು ವರ್ಷಗಳ ಸಾಧನಾ ಸಮಾವೇಶ, ಭಾನುವಾರ (ಜೂನ್ 4) ನಡೆಯಲಿರುವ ಭಾರತ- ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸೆಣಿಸಿನ ಮುನ್ನೋಟ ರಾರಾಜಿಸಿದವು.

ಅವುಗಳ ಜತೆಗೆ, ಎಸ್ಸಿ, ಎಸ್ಟಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ ಸಿದ್ದರಾಮಯ್ಯ ವಿರುದ್ಧ ಫೇಸ್ ಬುಕ್ ನಲ್ಲಿ ವಾಗ್ದಾಳಿ, ಜಿಎಸ್ ಟಿಯಿಂದಾಗಿ ತುಟ್ಟಿಯಾಗಲಿರುವ ಚಿನ್ನ, ಪಾದರಕ್ಷೆ, ಸಿದ್ಧ ಉಡುಪು... ಇವೇ ಮೊದಲಾದ ಸುದ್ದಿಗಳು ಸದ್ದು ಮಾಡಿದವು.

ಈ ಸುದ್ದಿಗಳು ಸೇರಿದಂತೆ ಮತ್ತಷ್ಟು ಸುದ್ದಿಗಳು ಇಲ್ಲಿವೆ.

1. ಮೈಸೂರು: ಕೊಟ್ಟ ಮಾತು ದಿಟ್ಟ ಸಾಧನೆ, ಸಾಧನಾ ಸಮಾವೇಶದ ಹೈಲೈಟ್ಸ್

ರಾಜ್ಯ ಸರ್ಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 'ಕೊಟ್ಟ ಮಾತು ದಿಟ್ಟ ಸಾಧನೆ ಮತ್ತು ಸಾಧನಾ ಸಮಾವೇಶ' ಯಶಸ್ವಿಯಾಗಿ ನಡೆದಿದೆ. (ಮುಂದೆ ಓದಿ...)

Top 10 news of June 3rd, 2017

2. ಬೇರೆ ಜಾತಿಯವರಿಗೆ ವಿಷ ಭಾಗ್ಯ ಕರುಣಿಸಿ: ಫೇಸ್ ಬುಕ್ ನಲ್ಲಿ ಸಿಎಂಗೆ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಿಶಿಷ್ಟ ಜಾತಿ, ವರ್ಗಗಳ ವಿದ್ಯಾರ್ಥಿಗಳಿಗಾಗಿ ಘೋಷಿಸಿರುವ ಉಚಿತ ಬಸ್ ಪಾಸ್ ಸೌಕರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. (ಮುಂದೆ ಓದಿ...)

3. ಸಹೋದರನ ಮೊಬೈಲ್ ಸಾಮ್ರಾಜ್ಯವನ್ನು ಅಲುಗಾಡಿಸಿದ ಮುಕೇಶ್ ಅಂಬಾನಿ

ಪಕ್ಕಾ ವ್ಯಾಪಾರಸ್ಥನಾಗಿರುವ ಮುಕೇಶ್ ಅಂಬಾನಿ ಸದ್ಯಕ್ಕೆ ಮುಟ್ಟಿದ್ದೆಲ್ಲಾ ಚಿನ್ನ, ಹಿಡಿದ ಕೆಲಸವನ್ನು ಪಕ್ಕಾ ವೃತ್ತಿಪರತೆಯಿಂದ ಮಾಡಿ ಮುಗಿಸುವ ಮುಕೇಶ್, ರಿಲಯನ್ಸ್ ಜಿಯೋ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿದ್ದು ಗೊತ್ತೇ ಇದೆ. (ಮುಂದೆ ಓದಿ...)

4. ಭಾರತದ ಮುಂದಿನ ರಾಷ್ಟ್ರಪತಿ ಮುರಳೀ ಮನೋಹರ ಜೋಷಿ?

ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ನಡೆದಿದೆ. ಇದೀಗ ರಾಷ್ಟ್ರಪತಿ ಗಾದಿಗೆ ಬಿಜೆಪಿ ಮುಖಂಡ ಮುರಳೀ ಮನೋಹರ್ ಜೋಷಿ ಹೆಸರು ಕೇಳಿಬರುತ್ತಿದ್ದು, ಅಚ್ಚರಿ ಮೂಡಿಸಿದೆ. (ಮುಂದೆ ಓದಿ...)

5.ಬೆಂಗಳೂರಿನಲ್ಲಿ ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮನೆ ಮುಂದೆ ಇದ್ದ ಬಾಲಕಿಯನ್ನು ಹೊತ್ತೊಯ್ದ ದುಷ್ಕರ್ಮಿಗಳು ಈ ನೀಚ ಕೃತ್ಯ ಎಸಗಿದ್ದಾರೆ. ಆ ನಂತರ ಮನೆ ಮುಂದೆ ಬಿಸಾಡಿ ಹೋಗಿದ್ದಾರೆ. (ಮುಂದೆ ಓದಿ...)

Top 10 news of June 3rd, 2017

6. ಭಾರತವನ್ನು ಪಾಕ್ ಮಣಿಸುವುದು ಕಷ್ಟಸಾಧ್ಯ ಎಂದ ಅಫ್ರೀದಿ

ಭಾರತ - ಪಾಕಿಸ್ತಾನ ಕ್ರಿಕೆಟ್ ಕದನವೆಂದರೆ ಸಾಕು ನರನಾಡಿಗಳಲ್ಲಿ ರಕ್ತ ಸಂಚಾರ ವೇಗ ಪಡೆಯುತ್ತದೆ, ಭಾರತ ತಂಡ ಪಾಕಿಸ್ತಾನವನ್ನು ಮತ್ತೊಮ್ಮೆ ಸದೆಬಡಿಯಬೇಕೆಂಬ ಹುಮ್ಮಸ್ಸು ನೂರ್ಮಡಿಯಾಗುತ್ತದೆ. (ಮುಂದೆ ಓದಿ...)

7. ಅನಂತ್ ನಾಗ್ ನಲ್ಲಿ ಭಯೋತ್ಪಾದಕರ ದಾಳಿ, ಇಬ್ಬರು ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ಅನಂತ್ ನಾಗ್ ನಲ್ಲಿ ಸೇನೆಯ ವಾಹನಗಳ ಮೇಲೆ ಉಗ್ರರ ದಾಳಿ ನಡೆದಿದ್ದು, ಇಬ್ಬರು ಯೋಧರು ಹುತಾತ್ಮನಾಗಿ, ನಾಲ್ವರಿಗೆ ಗಾಯಗಳಾಗಿವೆ. ಉಧಂಪುರ್ ನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. (ಮುಂದೆ ಓದಿ...)

8. ಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಚಿನ್ನ, ಪಾದರಕ್ಷೆ ಸೇರಿದಂತೆ ಇತರ ಪರಿಕರಗಳಿಗೆ ವಿಧಿಸಬೇಕಿದ್ದ ದರಗಳ ಪಟ್ಟಿ ಅಂತಿಮಗೊಂಡಿದೆ. ಶನಿವಾರ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ದರಗಳನ್ನು ಅಂತಿಮಗೊಳಿಸಲಾಯಿತು. (ಮುಂದೆ ಓದಿ...)

9. ವಾರಾಂತ್ಯ ಲೇಖನ: ನುಗ್ಗಿಕೇರಿ ಹನುಮಪ್ಪನ ಭಕ್ತ ಸೈಯದ್ ಶೇಖ್

ಆಡು-ಮೇಕೆಗಳ ಮಧ್ಯೆ ಅಷ್ಟೇ ಕರಿ ಗಡ್ಡ-ತಲೆಗೂದಲಿನ ಜತೆಗೆ ಕಂಡ ಆತನ ಹೆಸರು ಸೈಯದ್ ಶೇಖ್. ತಲೆ ಮೇಲಿನ ಟೋಪಿ ಕೈಯಲ್ಲಿ ಹಿಡಿದು, ಮೇಕೆಗಳನ್ನು ಮೇಯಿಸುತ್ತಿದ್ದವನ ಜತೆಗೆ ಒಂದಿಷ್ಟು ಮಾತು ಕುದುರಿತು. ಏನ್ ಮಾಡ್ತೀರಿ, ಎಲ್ಲಿದ್ದೀರಿ ಎಂಬ ಕುಶಾಲಿಯ ಮಾತುಗಳು ಕ್ರಮೇಣ ಅಚ್ಚರಿಗೆ ದೂಡಿದವು. (ಮುಂದೆ ಓದಿ...)

10. ಕೆ.ಮಂಜು ಹೆಸ್ರಲ್ಲಿ ಯುವತಿಯರಿಗೆ ಬಲೆ ಬೀಸುತ್ತಿದ್ದ ನಕಲಿ ನಿರ್ಮಾಪಕ

''ನಾನು ಕನ್ನಡದ ದೊಡ್ಡ ನಿರ್ಮಾಪಕ. ಮಂಜು ನನ್ನ ಹೆಸರು. ಸುಮಾರು 40 ಸಿನಿಮಾ ಮಾಡಿದ್ದೀನಿ. ನನ್ನ ಮುಂದಿನ ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ, ನನ್ನ ಜೊತೆ ಬನ್ನಿ''......ಇದು ಕೆ.ಮಂಜು ಹೆಸರನ್ನ ಬಳಸಿಕೊಂಡು ಹೊರ ರಾಜ್ಯದ ಯುವತಿಯರನ್ನ ಮೋಸ ಮಾಡುತ್ತಿದ್ದ ನಕಲಿ ನಿರ್ಮಾಪಕನ ಅಸಲಿ ಕಥೆ. (ಮುಂದೆ ಓದಿ...)

Top 10 news of June 3rd, 2017

-------

(ವಿಶೇಷ ಸುದ್ದಿ)

ಎಂಜಿ ರಸ್ತೆಯಲ್ಲಿದ್ದ ಶಂಕರ್ ನಾಗ್ ಥಿಯೇಟರ್ ಕ್ಲೋಸ್.!

ಶಂಕರ್ ನಾಗ್ ಅಭಿಮಾನಿ ಬಳಗಕ್ಕೆ ಈಗೊಂದು ಬೇಸರದ ಸಂಗತಿ ಬಂದಿದೆ. ಶಂಕರ್ ನಾಗ್ ಅವರ ಹೆಸರಿನಲ್ಲಿದ್ದ ಏಕೈಕ ಚಿತ್ರಮಂದಿರವನ್ನ ಮುಚ್ಚಲು ನಿರ್ಧರಿಸಿದ್ದಾರೆ. ಈ ಮೂಲಕ ದಶಕಗಳ ಕಾಲ ಕಲಾರಸಿಕರನ್ನ ಕೈ ಬೀಸಿ ಕರೆಯುತ್ತಿದ್ದ ಚಿತ್ರಮಂದಿರಕ್ಕೆ ಬೀಗ ಬೀಳುತ್ತಿದೆ. ಇದು ಕರಾಟೆಕಿಂಗ್ ಅಭಿಮಾನಿ ಬಳಗಕ್ಕೆ ಸಿಡಲು ಬಡಿದಂತಾಗಿದೆ. (ಮುಂದೆ ಓದಿ...)

Top 10 news of June 3rd, 2017

----

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+