keyboard_backspace

ಜಪಾನ್‌ ಚುನಾವಣೆ ಆರಂಭ: ಕಿಶಿದಾಗೆ ಮೊದಲ ಪರೀಕ್ಷೆ

Google Oneindia Kannada News

ಟೋಕಿಯೋ, ಅಕ್ಟೋಬರ್‌ 31: ಜಪಾನ್‌ ಸಂಸತ್ತು ಇತ್ತೀಚೆಗೆ ವಿಸರ್ಜನೆಗೊಂಡಿದ್ದು ಭಾನುವಾರ ಚುನಾವಣೆ ಆರಂಭಗೊಂಡಿದೆ. ಈ ಚುನಾವಣೆಯು ಈ ತಿಂಗಳ ಆರಂಭದಲ್ಲಷ್ಟೇ ಅಧಿಕವಾರವನ್ನು ವಹಿಸಿಕೊಂಡ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾರಿಗೆ ಪರೀಕ್ಷೆ ಆಗಿದೆ.

ತಾನು ಜಪಾನ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಹತ್ತು ದಿನಗಳಲ್ಲೇ ಫುಮಿಯೋ ಕಿಶಿದಾ ಸಂಸತ್ತಿನ ಕೆಳಮನೆಯನ್ನು ವಿಸರ್ಜನೆ ಮಾಡಿದ್ದಾರೆ. ಈಗ ತಮ್ಮ ನಿರ್ಧಾರಗಳಿಗೆ ಜನರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಹೊಸದಾಗಿ ಚುನಾವಣೆಯನ್ನು ಇಂದು ಎದುರಿಸುತ್ತಿದ್ದಾರೆ. ಜಪಾನ್‌ನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 465 ಸ್ಥಾನಗಳು ಇದೆ ಎಂದು ವರದಿಯು ಉಲ್ಲೇಖ ಮಾಡಿದೆ. ಹಾಗೆಯೇ ಜಪಾನ್‌ನ ಸಂಸತ್ತಿನ ಅತೀ ಬಲಿಷ್ಠವಾದುದ್ದು ಈ ಕೆಳಮನೆಯಾಗಿದೆ. ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಈ ಚುನಾವಣೆಯಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಜಯಗಳಿಸಿದ್ದ ಸ್ಥಾನವನ್ನು ಕೂಡಾ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿದೆ. ಆದರೂ ಫುಮಿಯೋ ಕಿಶಿದಾ ನೇತೃತ್ವದ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಬಹುಮತವನ್ನು ಪಡೆಯಲಿದ್ದಾರೆ.

ಜಪಾನ್ ಪ್ರಧಾನಿಗೆ 'ಒಲಿಂಪಿಕ್ಸ್‌' ಕಂಟಕ..! ಅಧಿಕಾರದಿಂದ ಕೇಳಗಿಳಿಯುತ್ತಾರಾ ರೈತನ ಮಗ..?ಜಪಾನ್ ಪ್ರಧಾನಿಗೆ 'ಒಲಿಂಪಿಕ್ಸ್‌' ಕಂಟಕ..! ಅಧಿಕಾರದಿಂದ ಕೇಳಗಿಳಿಯುತ್ತಾರಾ ರೈತನ ಮಗ..?

2017ರಲ್ಲಿ ಆಗಿನ ಪ್ರಧಾನ ಶಿಂಜೋ ಅಬೆ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ಉತ್ತರಾಧಿಕಾರಿಯಾಗಿ ಯೋಶಿಹಿದೆ ಸುಗಾ ಆಡಳಿತ ನಡೆಸಿದ್ದರು. ಕೊರೊನಾ ಕಾಲಘಟ್ಟದಲ್ಲಿ ಆಡಳಿತವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿಲ್ಲ ಎಂಬ ಆಕ್ರೋಶಕ್ಕೆ ಯೋಶಿಹಿದೆ ಸುಗಾ ಒಳಗಾದರು. ಹಾಗೆಯೇ ಬಳಿಕ ಟೋಕಿಯೋ ಒಲಿಂಪಿಕ್ ಹೊರತಾಗಿಯೂ ಜಪಾನ್‌ನಲ್ಲಿ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳಲಿಲ್ಲ ಎಂಬುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ಇದು ಸರ್ಕಾರದ ಪತನಕ್ಕೆ ಕಾರಣವಾಯಿತು.

 ಬಹುಮತ ಸಾಧಿಸಲು ಎಷ್ಟು ಸ್ಥಾನ ಅಗತ್ಯ?

ಬಹುಮತ ಸಾಧಿಸಲು ಎಷ್ಟು ಸ್ಥಾನ ಅಗತ್ಯ?

ಜಪಾನ್‌ನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 465 ಸ್ಥಾನಗಳ ಪೈಕಿ ಬಹುಮತ ಪಡೆಯಲು ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಹಾಗೂ ಅದರ ಕೊಮಿಟೊ ಒಕ್ಕೂಟವು 233 ಸ್ಥಾನದಲ್ಲಿ ಗೆಲುವು ಸಾಧಿಸುವು ಅನಿವಾರ್ಯವಾಗಿದೆ. ಇನ್ನು ಈ ಚುನಾವಣೆಗೂ ಮುನ್ನ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಮಾತ್ರವೇ ಜಪಾನ್‌ನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 276 ಸ್ಥಾನವನ್ನು ಹೊಂದಿದ್ದು, ಬಹುಮತ ಎಲ್‌ಡಿಪಿಯದ್ದು ಆಗಿತ್ತು.

 ಮಾಧ್ಯಮಗಳ ಸಮೀಕ್ಷೆಯ ಪ್ರಕಾರ ಎಲ್‌ಡಿಪಿಗೆ ಮತ್ತೆ ಆಡಳಿತ

ಮಾಧ್ಯಮಗಳ ಸಮೀಕ್ಷೆಯ ಪ್ರಕಾರ ಎಲ್‌ಡಿಪಿಗೆ ಮತ್ತೆ ಆಡಳಿತ

ಈ ನಡುವೆ ಮಾಧ್ಯಮದ ಸಮೀಕ್ಷೆಯು ಎಲ್‌ಡಿಪಿ ಈ ಬಾರಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದೆ. ಕೆಲವು ವಿರೋಧ ಪಕ್ಷಗಳು ಐಕ್ಯ ಒಕ್ಕೂಟವನ್ನು ಮಾಡಿಕೊಂಡಿದ್ದು, ಕೆಲವು ಸಣ್ಣ ಕ್ಷೇತ್ರಗಳಲ್ಲಿ ಈ ವಿರೋಧ ಪಕ್ಷಗಳ ಒಕ್ಕೂಟವು ಗೆಲುವು ಸಾಧಿಸುವ ಸಾಧ್ಯತೆಗಳು ಅಧಿಕವಾಗಿದೆ ಎಂದು ಮಾಧ್ಯಮಗಳ ಸಮೀಕ್ಷೆಯು ಅಭಿಪ್ರಾಯಿಸಿದೆ. ಅಂದಾಜಿನ ಪ್ರಕಾರ ಆಡಳಿತಾರೂಢ ಪಕ್ಷವು 261 ಸ್ಥಾನಗಳಲ್ಲಿ ಜಯಿಸಲಿದೆ. ಬಹುಮತ ಪಡೆಯಲು 233 ಸ್ಥಾನದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾದ ಕಾರಣದಿಂದಾಗಿ ಅಂದಾಜಿನ ಪ್ರಕಾರ 261 ಸ್ಥಾನಗಳನ್ನು ಪಡೆಯುವ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಮತ್ತೆ ಅಧಿಕಾರವನ್ನು ಸ್ವೀಕಾರ ಮಾಡಲಿದೆ. ಸೋಮವಾರ ಮುಂಜಾನೆಯಲ್ಲೇ ಹಲವಾರು ಕ್ಷೇತ್ರಗಳ ಚುನಾವಣಾ ಫಲಿತಾಂಶ ದೊರೆಯುವ ಸಾಧ್ಯತೆಗಳು ಇದೆ.

ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕಾರಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕಾರ

"ಇದು ಮಹಿಳೆಯಯರು ಇಲ್ಲದ ಪ್ರಜಾಪ್ರಭುತ್ವ"

ಇನ್ನು ಚುನಾವಣೆಯಲ್ಲಿ ಲಿಂಗ ಸಮಾನತೆ ಇರಬೇಕು ಎಂದು 2018 ರ ಜಪಾನ್‌ ಕಾನೂನು ಹೇಳುತ್ತದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಒಟ್ಟು 1,051 ಇದ್ದು, ಅದರಲ್ಲಿ ಶೇಕಡ 17 ರಷ್ಟು ಮಂದಿ ಮಾತ್ರ ಮಹಿಳೆಯರು ಆಗಿದ್ದಾರೆ. ಈ ಕಾನೂನು ಇದ್ದರೂ ಕೂಡಾ ಈ ಕಾನೂನು ಪಾಲನೆ ಆಗದಿದ್ದರೆ ಯಾವುದೇ ದಂಡ ವಿಧಿಸುವ ಉಲ್ಲೇಖ ಕಾನೂನಿನಲ್ಲಿ ಇಲ್ಲ. ಆದ್ದರಿಂದ ಕಾನೂನು ಪಾಲನೆಯ ಬಗ್ಗೆ ಯಾವ ಪಕ್ಷಗಳು ಗಮನ ಹರಿಸಿದಂತೆ ಕಂಡು ಬಂದಿಲ್ಲ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದ ಲಿಂಗ ಸಮಾನತೆಯ ತಜ್ಞರುಗಳು "ಇದು ಮಹಿಳೆಯಯರು ಇಲ್ಲದ ಪ್ರಜಾಪ್ರಭುತ್ವ," ಎಂದು ದೂರಿದ್ದಾರೆ.

ಜಪಾನ್ ಸಂಸತ್ ವಿಸರ್ಜನೆ, ಅಕ್ಟೋಬರ್ 31ಕ್ಕೆ ಚುನಾವಣೆಜಪಾನ್ ಸಂಸತ್ ವಿಸರ್ಜನೆ, ಅಕ್ಟೋಬರ್ 31ಕ್ಕೆ ಚುನಾವಣೆ

 ಜಪಾನ್‌ ಸರ್ಕಾರದಲ್ಲಿ ನಡೆದಿದ್ದು ಇಷ್ಟು..

ಜಪಾನ್‌ ಸರ್ಕಾರದಲ್ಲಿ ನಡೆದಿದ್ದು ಇಷ್ಟು..

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಪಾನ್‌ನ ಪ್ರಧಾನ ಮಂತ್ರಿಯಾಗಿ ಯೋಷಿಹಿದೆ ಸುಗಾ ಅಧಿಕಾರವನ್ನು ಸ್ವೀಕಾರ ಮಾಡಿದ್ದು, ಆದರೆ ಅಧಿಕಾರ ಸ್ವೀಕಾರ ಮಾಡಿದ ಒಂದು ವರ್ಷದಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡು ಗದ್ದುಗೆಯಿಂದ ಕೆಳಕ್ಕೆ ಇಳಿದಿದ್ದಾರೆ. ಈ ಬೆನ್ನಲ್ಲೇ ಈ ತಿಂಗಳ ಅಂದರೆ ಅಕ್ಟೋಬರ್‌ 4 ರಂದು ಫುಮಿಯೋ ಕಿಶಿದಾ ಜಪಾನ್‌ನ ನೂತನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆಡಳಿತರೂಢ ಪಕ್ಷ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಫುಮಿಯೋ ಕಿಶಿದಾ ಬಳಿಕ ಜಪಾನ್‌ನ ನೂರನೇ ಪ್ರಧಾನ ಮಂತ್ರಿಯಾಗಿ ಅಕ್ಟೋಬರ್‌ 4 ರಂದು ಅಧಿಕಾರ ಪಡೆದುಕೊಂಡರು.

(ಒನ್‌ಇಂಡಿಯಾ ಸುದ್ದಿ)

English summary
Voting for Japan's general election starts, 1st key test for Prime Minister Fumio Kishida.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X