ಮಂಡ್ಯ ಬಳಿ ಕಾಮಗಾರಿ; ಹಲವು ರೈಲು ಸಂಚಾರ ರದ್ದು, ಪಟ್ಟಿ
ಮಂಡ್ಯ, ಜುಲೈ 30; ನೈಋತ್ಯ ರೈಲ್ವೆ ಮಂಡ್ಯ ನಿಲ್ದಾಣ ಹತ್ತಿರದ ಕಾಮಗಾರಿಯನ್ನು ಕೈಗೊಂಡಿದೆ. ಆದ್ದರಿಂದ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ, ಕೆಲವು ರೈಲು ತಡವಾಗಿ ಸಂಚಾರ ನಡೆಸಲಿವೆ. ರೈಲು ಪ್ರಯಾಣಿಕರು ಈ ಕುರಿತು ಮಾಹಿತಿ ತಿಳಿಯುವುದು ಉತ್ತಮ.
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈಋತ್ಯ ರೈಲ್ವೆ, ಹುಬ್ಬಳ್ಳಿ ಅನೀಶ್ ಹೆಗಡೆ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಮಂಡ್ಯ ನಿಲ್ದಾಣ ಹತ್ತಿರದ ಲೆವೆಲ್ ಕ್ರಾಸ್ ಗೇಟ್ ನಂ-73ರ ಕೆಳ ಸೇತುವೆ ಕಾಮಗಾರಿಯ ಸಲುವಾಗಿ ಕೆಲವು ಬದಲಾವಣೆ ಮಾಡಲಾಗಿದೆ.

ಕೆಲವು ರೈಲುಗಳ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿಯ ವಿವರಗಳು ಹೀಗಿವೆ. ಜುಲೈ 30 ರಿಂದ ಆಗಸ್ಟ್ 1 ರ ತನಕ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
ರೈಲುಗಳ ರದ್ದು
* ರೈಲು ಸಂಖ್ಯೆ 06270 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮೈಸೂರು ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30ರಂದು ರದ್ದುಗೊಳಿಸಲಾಗುತ್ತಿದೆ. ರೈಲು ಸಂಖ್ಯೆ 06268 ಮೈಸೂರು-ಅರಸೀಕೆರೆ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 31ರಂದು ರದ್ದುಗೊಳಿಸಲಾಗುತ್ತಿದೆ.
ರೈಲು ಸಂಖ್ಯೆ 06514 ಶಿವಮೊಗ್ಗ ಟೌನ್-ತುಮಕೂರು ವಿಶೇಷ ಡೆಮು ರೈಲನ್ನು ತಿಪಟೂರು ಮತ್ತು ತುಮಕೂರು ನಿಲ್ದಾಣಗಳ ನಡುವೆ ಆಗಸ್ಟ್ 1 ರಂದು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ಹೇಳಿದೆ.
ಮಾರ್ಗ ಮಧ್ಯೆ ನಿಯಂತ್ರಣ
* ಜುಲೈ 30ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16591 ಎಸ್. ಎಸ್. ಎಸ್ ಹುಬ್ಬಳ್ಳಿ- ಮೈಸೂರು ದೈನಂದಿನ ಹಂಪಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
* ಜುಲೈ 30ರಂದು ಮೈಲಾಡುತುರೈ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16231 ಮೈಲಾಡುತುರೈ- ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
* ಜುಲೈ 30ರಂದು ತಾಳಗುಪ್ಪ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 45 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
* ಜುಲೈ 30ರಂದು ತಿರುಪತಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16220 ತಿರುಪತಿ-ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
* ಜುಲೈ 30ರಂದು ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16021 ಡಾ ಎಂ. ಜಿ. ಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 120 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
ಕೆಲವು ರೈಲುಗಳು ರದ್ದು/ ಮಾರ್ಗ ಮಧ್ಯ ನಿಯಂತ್ರಣ
ತುಮಕೂರು-ಅರಸೀಕೆರೆ ಭಾಗದ ಹೆಗ್ಗೆರೆ ನಿಲ್ದಾಣದ ಪಾದಾಚಾರಿಗಳ ಮೇಲ್ಸೇತುವೆ ಕಾಮಗಾರಿ ಸಲುವಾಗಿ ಆಗಸ್ಟ್ 1ರಂದು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಆಗಸ್ಟ್ 1ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06512 ತುಮಕೂರು-ಬಾಣಸವಾಡಿ ಡೆಮು ವಿಶೇಷ ರೈಲು 120 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.
ಆಗಸ್ಟ್ 1ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16567 ತುಮಕೂರು-ಶಿವಮೊಗ್ಗ ಟೌನ್ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲು 15 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.
ರೈಲು ಸಂಖ್ಯೆ 12089 ಕೆ. ಎಸ್. ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 1ರಂದು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.












Click it and Unblock the Notifications