Weekend Travel: ಈ ಮಳೆಗಾಲಕ್ಕೆ ಕೊಡಗಿನ ಕೋಟೆ ಬೆಟ್ಟದ ಚೆಲುವು ಕಣ್ತುಂಬಿಕೊಳ್ಳುವ ದಾರಿ ಹೇಗೆ..?
ಮಡಿಕೇರಿ, ಜೂನ್ 17: ಮುಂಗಾರು ಮಳೆ ಸುರಿದಾಗ ಬೆಟ್ಟಗುಡ್ಡಗಳು ಹಸಿರಿನಿಂದ ನಳನಳಿಸುವುದನ್ನು ನೋಡುವುದೇ ಮಜಾ.. ಕೊಡಗಿಗೆ ಈ ಸಮಯದಲ್ಲಿ ಭೇಟಿ ನೀಡಿದರೆ ಸದಾ ಮಳೆ ಮೋಡದ ಮುಸುಕಿನಲ್ಲಿ ತಣ್ಣಗೆ ಮಲಗಿದಂತೆ ಕಾಣುವ ಬೆಟ್ಟ ಶ್ರೇಣಿಗಳು ಅದರ ನಡುವಿನಿಂದ ಎದ್ದು ನಾಗಾಲೋಟದಲ್ಲಿ ಓಡುವ ಶ್ವೇತಧಾರಿಯ ಮೋಡಗಳು ಕಣ್ಣಿಗೆ ಆನಂದ ನೀಡುತ್ತವೆ.
ಮಳೆಗಾಲ ಆರಂಭದ ಈ ದಿನಗಳಲ್ಲಿ ಬೆಟ್ಟಗುಡ್ಡಗಳತ್ತ ತೆರಳುವುದು ತುಸು ಕಷ್ಟವಾದರೂ ಬೆಟ್ಟದ ಮೇಲೆ ತೆರಳಿದ ನಂತರ ಕಾಣುವ ದೃಶ್ಯಗಳು ಅಮೋಘವಾಗಿರುತ್ತದೆ. ಈ ದೃಶ್ಯಗಳನ್ನು ಸವಿಯುವ ಸಲುವಾಗಿಯೇ ಚಾರಣಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕೊಡಗಿನಲ್ಲಿರುವ ಬೆಟ್ಟಗಳು ಚಾರಣಕ್ಕೆ ಯೋಗ್ಯವಾಗಿದ್ದು, ಅಪಾಯಕಾರಿಯಲ್ಲ. ಹೆಚ್ಚಿನ ಬೆಟ್ಟಗಳ ಮೇಲೆ ದೇವಸ್ಥಾನಗಳಿದ್ದು, ಇಲ್ಲಿಗೆ ಪ್ರತಿದಿನವೂ ಅರ್ಚಕರು ತೆರಳಿ ಪೂಜೆ ಸಲ್ಲಿಸಿ ಬರುತ್ತಾರೆ.

ಜಿಲ್ಲೆಯಲ್ಲಿರುವ ಇಂತಹ ಬೆಟ್ಟಗಳ ಪೈಕಿ ಸೋಮವಾರಪೇಟೆ ತಾಲೂಕಿನ ಈ ಪೈಕಿ ತಾಲೂಕಿನ ಮಾದಾಪುರಕ್ಕೆ ಹತ್ತಿರವಿರುವ ಮುಕ್ಕೊಡ್ಲು ಬಳಿಯ ಕೋಟೆ ಬೆಟ್ಟವೂ ಒಂದಾಗಿದೆ. ಈ ಬೆಟ್ಟಕ್ಕೆ ಪ್ರತಿ ವರ್ಷವೂ ಸಾವಿರಾರು ಜನ ಚಾರಣಿಗರಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರು ಈ ಬೆಟ್ಟಕ್ಕೆ ತೆರಳಿ ಇಲ್ಲಿರುವ ಬೊಟ್ಲಪ್ಪ ಈಶ್ವರ ದೇವಸ್ಥಾನಕ್ಕೆ ಪೂಜೆ ಮಾಡಿಸಿಕೊಂಡು ಬರುವುದು ಮಾಮೂಲಿಯಾಗಿದೆ.
ಪ್ರತಿ ಬೆಟ್ಟಗುಡ್ಡಗಳಿಗೂ ಪೌರಾಣಿಕ ನಂಟು
ಹಾಗೆನೋಡಿದರೆ ಕೊಡಗಿನಲ್ಲಿರುವ ಪ್ರತಿ ಬೆಟ್ಟಗುಡ್ಡಗಳಿಗೂ ಪೌರಾಣಿಕ ನಂಟಿದ್ದು, ದೈವ ತಾಣಗಳಾಗಿಯೂ ಗಮನಸೆಳೆಯುತ್ತವೆ. ಅದರಂತೆ ಕೋಟೆ ಬೆಟ್ಟವೂ ಚಾರಣಿಗರಿಗೆ ಸ್ವರ್ಗವಾದರೆ ಭಕ್ತರಿಗೆ ದೈವ ತಾಣವಾಗಿದೆ. ದ್ರೌಪದಾಯುಗದಲ್ಲಿ ದುರ್ಯೋಧನನ ಕಪಟ ತಂತ್ರಕ್ಕೆ ಸಿಲುಕಿ ಪಗಡೆಯಾಡಿ ಎಲ್ಲವನ್ನು ಕಳೆದುಕೊಂಡು ವನವಾಸಕ್ಕೆ ತೆರಳಿದ ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಕೊಡಗಿನ ಹಲವು ಬೆಟ್ಟಗುಡ್ಡಗಳಲ್ಲಿ ಅಡ್ಡಾಡಿದ್ದರೆಂದೂ ಅದರಂತೆ ಕೋಟೆಬೆಟ್ಟಕ್ಕೆ ಬಂದ ಅವರು ಈಶ್ವರನನ್ನು ಪೂಜಿಸುವ ಸಲುವಾಗಿ ದೇಗುಲವನ್ನು ನಿರ್ಮಿಸಿದರೆಂದು ಹೇಳಲಾಗಿದೆ.

ಈ ದೇಗುಲವೇ ಬೊಟ್ಲಪ್ಪ ಈಶ್ವರ ದೇವಾಲಯವಾಗಿದ್ದು, ಇದನ್ನು ಒಂದೇ ರಾತ್ರಿಯಲ್ಲಿ ಪಾಂಡವರು ನಿರ್ಮಿಸಿದ್ದಾರಂತೆ. ಬೆಳಗ್ಗೆ ಕೋಲಿ ಕೂಗಿದ ಪರಿಣಾಮ ದೇಗುಲಕ್ಕೆ ಬಾಗಿಲು ನಿರ್ಮಿಸಲು ಸಾಧ್ಯವಾಗಿಲ್ಲ ಎಂಬ ಮಾತುಗಳಿವೆ. ಜತೆಗೆ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗವು ಅರ್ಜುನ ಅಮರಾವತಿಯ ಗಂಡಕ್ಕಿ ಹೊಳೆಯಿಂದ ತಂದು ಪ್ರತಿಷ್ಠಾಪನೆ ಮಾಡಿದ್ದೆಂದು ಹೇಳಲಾಗಿದೆ.
ಪಾಂಡವರು ಉಳಿದುಕೊಂಡಿದ್ದ ವೇಳೆ ಕುಡಿಯಲು ಮತ್ತು ಬೆಳಗ್ಗಿನ ಕ್ರಿಯಾಕರ್ಮಗಳನ್ನು ನೆರವೇರಿಸಲು ನೀರಿನ ಅಗತ್ಯವಿದ್ದುದರಿಂದ ಬೆಟ್ಟದ ಮೇಲೆ ಬಾಣಬಿಟ್ಟು ಐದು ಕೆರೆಗಳನ್ನು ನಿರ್ಮಿಸಿದ್ದು, ಅದು ಈಗಲೂ ಇಲ್ಲಿದ್ದು, ಈ ಕೆರೆಗಳಲ್ಲಿ ಬೇಸಿಗೆಯಲ್ಲಿಯೂ ನೀರು ಬತ್ತದೆ ಇರುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.

ಬೊಟ್ಲಪ್ಪ ಈಶ್ವರ ಗ್ರಾಮಗಳ ಆರಾಧ್ಯ ದೈವ
ಇಲ್ಲಿನ ಈಶ್ವರ ಮುಕ್ಕೊಡ್ಲು, ಆವಂಡಿ, ಮೆಗತಾಳು, ಹೊದಕಾನ ಗ್ರಾಮಸ್ಥರಿಗೆ ಆರಾಧ್ಯ ದೇವರೂ ಹೌದು. ಬೆಟ್ಟಕ್ಕೆ ಚಾರಣ ತೆರಳುವವರು ದೇಗುಲಕ್ಕೆ ತೆರಳಿ ಈಶ್ವರನ ದರ್ಶನ ಮಾಡಿಕೊಂಡು ಬೆಟ್ಟವನ್ನೇರಿ ಬೆಟ್ಟದಿಂದ ಕಂಡು ಬರುವ ನಿಸರ್ಗ ಸುಂದರ ನೋಟವನ್ನು ನೋಡಿಕೊಂಡು ಹಿಂತಿರುಗಬಹುದಾಗಿದೆ. ಬೆಟ್ಟದ ಮೇಲಿಂದ ಕಣ್ಣು ಹಾಯಿಸಿದಾಗ ಕಂಡು ಬರುವ ಗಿರಿಶಿಖರಗಳ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ನಿಸರ್ಗ ಸುಂದರತೆಯನ್ನು ಮೈಮೇಲೆ ಹೊದ್ದು ಕುಳಿತಿರುವ ಕೋಟೆ ಬೆಟ್ಟದತ್ತ ತೆರಳ ಬೇಕಾದರೆ ಕಾಡು ಹಾದಿಯಲ್ಲಿ ನಡೆಯ ಬೇಕು. ಈ ವೇಳೆ ಕಲ್ಲುಮುಳ್ಳನ್ನು ಮೆಟ್ಟಿ ನಡೆಯ ಬೇಕಾಗುತ್ತದೆ. ಜತೆಗೆ ಮಳೆಗಾಲದಲ್ಲಿ ದಾಳಿ ಮಾಡಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಸುಮಾರು ಒಂಬತ್ತು ಕಿ.ಮೀ, ನಡೆಯಬೇಕಾಗುತ್ತದೆ. ಇಷ್ಟೊಂದು ಶ್ರಮಪಟ್ಟು ಬೆಟ್ಟವನ್ನೇರಿದವರಿಗೆ ಮನೋಲ್ಲಾಸ ನೀಡುತ್ತದೆ. ಈ ಬೆಟ್ಟವು ಜಿಲ್ಲೆಗಳಲ್ಲಿರುವ ಬೆಟ್ಟಗಳ ನಡುವೆ ಅತಿ ಎತ್ತರದ ಮೂರನೇ ಬೆಟ್ಟವಾಗಿದ್ದು, 5367 ಅಡಿ ಎತ್ತರವನ್ನು ಹೊಂದಿದೆ.
ಹಸಿರು ಹೊದಿಕೆ ಹೊದ್ದು ಕುಳಿತ ಕೋಟೆ ಬೆಟ್ಟ
ಮಡಿಕೇರಿ ಮತ್ತು ಸೋಮವಾರಪೇಟೆ ರಸ್ತೆ ನಡುವೆ ಸಿಗುವ ಮಾದಾಪುರಕ್ಕೆ ತೆರಳಿ ಅಲ್ಲಿಂದ ಗರ್ವಾಲೆ ಅಥವಾ ಮುಕ್ಕೊಡ್ಲು ಗ್ರಾಮದ ಮೂಲಕ ಕೋಟೆಬೆಟ್ಟಕ್ಕೆ ತೆರಳಬಹುದಾಗಿದೆ. ಕೋಟೆ ಬೆಟ್ಟದ ತಳಭಾಗದವರೆಗೆ ರಸ್ತೆ ಸೌಲಭ್ಯವಿದೆ. ರಸ್ತೆ ಪಕ್ಕದಲ್ಲಿ ಬೆಟ್ಟದ ಕಡೆಗೆ ಈಶ್ವುರ ದೇಗುಲವಿದ್ದು, ಈ ದೇಗುಲಕ್ಕೆ ಮಟ್ಟಿಲನ್ನು ನಿರ್ಮಿಸಲಾಗಿದೆ. ಮೆಟ್ಟಿಲೇರಿ ಹೋದರೆ ದೇವಾಲಯವನ್ನು ತಲುಪಬಹುದಾಗಿದೆ. ಅಲ್ಲಿಂದ ಮುಂದಕ್ಕೆ ಬೆಟ್ಟವನ್ನೇರ ಬೇಕಾಗುತ್ತದೆ. ಬೃಹತ್ ಬಂಡೆಗಳ ನಡುವೆ ವೃಕ್ಷ ಸಂಕುಲವಿದ್ದು, ಮಳೆಗೆ ಹುಲ್ಲು ಸೇರಿದಂತೆ ಕುರುಚಲು ಕಾಡು ಚಿಗುರಿ ಹಸಿರ ಹೊದಿಕೆಯನ್ನು ಬೆಟ್ಟಕ್ಕೆ ಹೊದಿಸಿದೆ.
ಈ ಬೆಟ್ಟವನ್ನು ಏರುತ್ತಾ ಹೋದಂತೆ ಸುತ್ತಲೂ ಮುಗಿಲತ್ತ ದೃಷ್ಟಿ ನೆಟ್ಟ ಬೆಟ್ಟ ಶ್ರೇಣಿಗಳೆಲ್ಲವೂ ಕುಬ್ಜವಾಗುತ್ತಾ ಹೋಗುತ್ತವೆ. ನಾವು ಬೆಟ್ಟದ ತುತ್ತುತುದಿಗೆ ಹೋಗುತ್ತಿದ್ದೇವೆ ಎಂಬ ಸಂತಸ ಬೆಟ್ಟವನ್ನೇರಲು ಪ್ರೆರೇಪಿಸುತ್ತದೆ. ಸುತ್ತಲ ದೃಶ್ಯಗಳನ್ನು ಆಸ್ವಾದಿಸುತ್ತಾ ಬೆಟ್ಟವನ್ನೇರಿ ಅಲ್ಲಿ ಒಂದಷ್ಟು ಹೊತ್ತು ಕಳೆದು ಬಂದಿದ್ದೇ ಆದರೆ ಅಲ್ಲಿ ಅನುಭವಿಸಿದ ಸುಂದರ ಕ್ಷಣಗಳು, ನಿಸರ್ಗ ಸುಂದರ ನೋಟಗಳು ನಮ್ಮ ಮನಪಟಲದಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಸಂಶಯವಿಲ್ಲ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications