Vaishno Devi Tour: ಕೇವಲ ₹21,890ನಲ್ಲಿ "ವೈಷ್ಣೋ ದೇವಿ" ಟೂರ್ ಪ್ಯಾಕೇಜ್ ಘೋಷಣೆ, ದಿನಾಂಕಗಳ ವಿವರ ತಿಳಿಯಿರಿ
ನಹದೆಹಲಿ, ಜೂನ್, 14: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಮೂದಲಿನಿಂದಲೂ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಬರೀ ದೇಶ ಅಲ್ಲದೆ ವಿದೇಶಗಳಿಗೂ ಕೂಡ ಕಡಿಮೆ ದರದ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸುವ ಮೂಲಕ ಜನಮನ್ನಣೆ ಪಡೆದಿದೆ. ಹಾಗೆಯೇ ಇದೀಗ "ವೈಷ್ಣೋ ದೇವಿ"ಗೆ ಪ್ರವಾಸ ಪ್ಯಾಕೇಜ್ ಬಿಡುಗಡೆ ಮಾಡಿದೆ. ಈ ಪ್ರವಾಸ ಪ್ಯಾಕೇಜ್‌ನ ದರಗಳು ಮತ್ತು ದಿನಾಂಕಗಳ ವಿವರವನ್ನು ಇಲ್ಲಿ ತಿಳಿಯಿರಿ.
ಭಾರತೀಯ ರೈಲ್ವೇಯ ಪ್ರವಾಸೋದ್ಯಮ ವಿಭಾಗವಾದ IRCTCಯು "ವೈಷ್ಣೋ ದೇವಿ"ಗೆ ಪ್ರವಾಸ ಕೈಗೊಳ್ಳುವವರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಮಾತಾ ವೈಷ್ಣೋದೇವಿಯ ಆಶೀರ್ವಾದ ಪಡೆಯಲು ಬಯಸುವ ಭಕ್ತರಿಗೆ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದ್ದು, ಈ ಪ್ರವಾಸದ ಸಾರಿಗೆ ವಿಭಾಗವು ರೈಲು ಆಗಿದೆ.

ನೀವು ಭಾರತ್ ಗೌರವ್ ಪ್ರವಾಸೋದ್ಯಮದ ರೈಲಿನಲ್ಲಿ 7 ರಾತ್ರಿಗಳು ಮತ್ತು 8 ಹಗಲುಗಳ ಪ್ರವಾಸ ಕೈಗೊಳ್ಳಬಹುದಾಗಿದೆ. ಇನ್ನು ಈ ಪ್ರವಾಸವು ಜೂನ್ 25ರಂದು ಆರಂಭವಾಗಲಿದೆ. ಜೂನ್ 25ರಂದು ಕೋಲ್ಕತ್ತಾ ರೈಲು ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿರುವ ಭಾರತ್ ಗೌರವ್ ಪ್ರವಾಸೋದ್ಯಮ ರೈಲು ಜುಲೈ 2ರವರೆಗೆ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿಯನ್ನು ಐಆರ್‌ಸಿಟಿಸಿ ನೀಡಿದೆ.
ಈ ಪ್ರವಾಸೋದ್ಯಮದ ರೈಲು ಖರಗ್‌ಪುರ ಜಂಕ್ಷನ್, ಟಾಟಾ, ಮುರಿ, ರಾಂಚಿ, ಬೊಕಾರೊ ಸ್ಟೀಲ್ ಸಿಟಿ, ಚಂದ್ರಾಪುರ, ಗೋಮಾ ಜಂಕ್ಷನ್, ಹಜಾರಿಬಾಗ್ ರಸ್ತೆ, ಕೊಡೆರ್ಮಾ, ಗಯಾ, ಡೆಹ್ರಿ ಆನ್ ಸನ್, ಸಸಾರಾಮ್ ಮತ್ತು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ ನಿಲುಗಡೆ ಆಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಈ ಸಂದರ್ಭದಲ್ಲಿ ನೀವು ಹಲವಾರು ಅದ್ಭುತ ಪ್ರವಾಸಿ ತಾಣಗಳನ್ನು ಅನ್ವೇಷಣೆ ಮಾಡಬಹುದಾಗಿದೆ. ಈ ವೇಳೆ ನೀವು ಕಾತ್ರಾ-ವೈಷ್ಣೋದೇವಿ, ಋಷಿಕೇಶದಲ್ಲಿರುವ ರಾಮ್ ಜೂಲಾ ಮತ್ತು ಲಕ್ಷ್ಮಣ ಜೂಲಾ ಅವರ ವಾಸ್ತುಶಿಲ್ಪದ ವೈಭವವನ್ನು ಸವಿಯಬಹುದಾಗಿದೆ. ನಂತರ ತ್ರಿವೇಣಿ ಘಾಟ್‌ನ ಪ್ರಕೃತಿ ಸೌಂದರ್ಯ, ಹರಿದ್ವಾರದಲ್ಲಿನ ಭಾರತ ಮಾತಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ. ಹಾಗೆಯೇ ಇದೆ ವೆಳೆ ಹರ್ ಕಿ ಪೌರಿಯಲ್ಲಿ ಗಂಗಾ ಆರತಿಯನ್ನು ಸಹ ವೀಕ್ಷಿಸಹುದಾಗಿದೆ.
ಇನ್ನು ಭಾರತ್ ಗೌರವ್ ಪ್ರವಾಸೋದ್ಯಮ ರೈಲಿನಲ್ಲಿ ಒಟ್ಟು 790 ಪ್ರಯಾಣಿಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. 580 ಎಕಾನಮಿ ಕ್ಲಾಸ್ ಸೀಟ್‌ಗಳು, 150 ಸ್ಟ್ಯಾಂಡರ್ಡ್ ಕ್ಲಾಸ್ ಸೀಟ್‌ಗಳು ಮತ್ತು 60 ಸೀಟ್‌ಗಳೊಂದಿಗೆ ಕಂಫರ್ಟ್ ಆಸನಗಳು ಇರಲಿವೆ ಎನ್ನುವ ಮಾಹಿತಿಯನ್ನು ನೀಡಿದೆ.
ಪ್ಯಾಕೇಜ್‌ನ ದರಗಳ ವಿವರ
ನೀವು ಎಕಾನಮಿಕ್ ಕ್ಲಾಸ್ ಕೋಚ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವುದಾದರೆ ಪ್ರತಿ ವ್ಯಕ್ತಿಗೆ 13,680 ರೂಪಾಯಿ ವೆಚ್ಚ ತಗಲುತ್ತದೆ. ಹಾಗೆಯೇ ಸ್ಟ್ಯಾಂಡರ್ಡ್ ಕೋಚ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವುದಾದರೆ 21,890 ರೂಪಾಯಿ, ಒಂದು ವೇಳೆ ಕಂಫರ್ಟ್ ಕೋಚ್‌ಗಳಲ್ಲಿ ಪ್ರಯಾಣಿಸಲು ಬಯಸಿದರೆ ಪ್ರತಿ ವ್ಯಕ್ತಿಗೆ 23,990 ರೂಪಾಯಿ ಪಾವತಿಸಬೇಕಾಗುತ್ತದೆ.
ಭಾರತ್ ಗೌರವ್ ಪ್ರವಾಸೋದ್ಯಮ ರೈಲು ಏಕ್ ಭಾರತ್ ಶ್ರೇಷ್ಠ ಭಾರತ್ ಮತ್ತು ದೇಖೋ ಅಪ್ನಾ ದೇಶ್ ಉಪಕ್ರಮಗಳ ಒಂದು ಭಾಗವಾಗಿದೆ. ಇದು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಹಾಗೆಯೇ ಇದೀಗ ವೈಷ್ಣೋದೀವಿಗೆ ಪ್ರವಾಸ ಕೈಗೊಳ್ಳಲು ಉತ್ತಮ ಅವಕಾಶವನ್ನು ಕಲ್ಪಿಸಿದೆ. ಹಾಗೆಯೇ ಪ್ರವಾಸದ ವೇಳೆ ನೀವು ಊಟ, ವಸತಿ ಸೌಲಭ್ಯಗಳನ್ನು ಕೂಡ ಪಡೆಯಬಹುದಾಗಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಟಿಕೆಟ್‌ಗಳನ್ನು ಬುಕ್ ಮಾಡಲು www.irctctourism.com ಅಥವಾ IRCTC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಒಂದು ವೇಳೆ ನೀವು ಯಾವುದೇ ತೊಂದರೆಗಳಿದ್ದಲ್ಲಿ 8595904082 ಅಥವಾ 8595904077ಗೆ ಕರೆ ಮಾಡಿ ಟಿಕಟ್ ಕಾಯ್ದಿರಿಸಬಹುದಾಗಿದೆ. ನಂತರ ರೈಲ್ವೇ ಪ್ರಧಿಕಾರವು ರೈಲು ಹೊರಡುವ ಒಂದು ವಾರದ ಮೊದಲು ಆಸನದ ವ್ಯವಸ್ಥೆಯನ್ನು ಖಚಿತಪಡಿಸಲಿದೆ ಎಂದು ತಿಳಿಸಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications