Weekend Travel: ಚಳಿಗಾಲದ ವೀಕೆಂಡ್ ಟ್ರಿಪ್‌ಗೆ ಈ ಸ್ಥಳಗಳನ್ನು ಮಿಸ್‌ಮಾಡಬೇಡಿ
ಪ್ರವಾಸ ಕೆಲವರಿಗೆ ಹವ್ಯಾಸವಾದರೆ, ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಅನಿವಾರ್ಯವಾಗಿದೆ. ಒತ್ತಡದ ಜೀವನ ಶೈಲಿ, ಒತ್ತಡದ ಕೆಲಸದಲ್ಲಿ ಮಾನಸಿಕವಾಗಿ ಕುಗ್ಗಿರುವವರಿಗೆ ಪ್ರವಾಸವು ಹೊಸ ಚೈತನ್ಯ ನೀಡುತ್ತದೆ. ಮನಸ್ಸಿಗೆ ಶಾಂತಿ ಉಲ್ಲಾಸ ಸಿಗಲು ಬಹುತೇಕರು ಈಗ ಪ್ರವಾಸದ ಮೊರೆ ಹೋಗುತ್ತಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇರುವವರಂತೂ ವೀಕೆಂಡ್‌ಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ ಊರು ಬಿಟ್ಟು ಬೇರೆಡೆಗೆ ಪ್ರವಾಸಕ್ಕೆ ತೆರಳಲು ಲೆಕ್ಕಚಾರ ಹಾಕುತ್ತಿರುತ್ತಾರೆ. ಒತ್ತಡ ಜೀವನಕ್ಕೆ ಎರಡು ದಿನ ಬ್ರೇಕ್ ಹಾಕಿ ಕುಟುಂಬದವರ ಜೊತೆಗೆ, ಸ್ನೇಹಿತರ ಜೊತೆಗೆ ಸಮಯ ಕಳೆಯಲು ಒಂದೊಳ್ಳೆ ವೀಕೆಂಡ್ ಟ್ರಿಪ್ ಪ್ಲಾನ್ ಮಾಡಿ.
ಬೆಂಗಳೂರಿನಲ್ಲಿರುವ ನೀವು ಯಾವ ಕಡೆಯತ್ತ ವೀಕೆಂಡ್ ಟ್ರಿಪ್ ಮಾಡಬಹುದು ಎನ್ನುವ ಯೋಚನೆ ಇದೆಯಾ..? ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆಗೆ ಟ್ರಿಪ್ ಪ್ಲ್ಯಾನ್ ಮಾಡುತ್ತಿದ್ದೀರಾ..? ಪ್ರಯಾಣ ಮಾಡಿದರೂ ಒಕೆ ಪ್ರಕೃತಿ ಸೌಂದರ್ಯ ಸವಿಯುವಂತಹ ಸುಂದರವಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕೆಂದುಕೊಂಡಿದ್ದರೆ ಈ ಕೆಳಗಿನ ಸ್ಥಳಗಳಿಗೆ ಭೇಟಿ ನೀಡಿ.

ಊಟಿ
ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಊಟಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಸುತ್ತಲೂ ಹಸಿರು, ಮಂಜು ತುಂಬಿ ಈ ನಾಡಿ ಸವಿಯನ್ನು ಅಲ್ಲಿಗೆ ಭೇಟಿ ನೀಡಿ ಸವಿಯಲೇ ಬೇಕು. ಬೆಂಗಳೂರಿನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಊಟಿಗೆ ಆರು ಗಂಟೆಯಲ್ಲಿ ತಲುಪಬಹುದು. ತಮಿಳುನಾಡಿನ ಊಟಿ ನೀಲಗಿರಿ ಬೆಟ್ಟಗಳಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ನೀಲಗಿರಿ ಮತ್ತು ಪೈನ್ ಮರಗಳು ಮತ್ತು ಕಾಫಿ ಮತ್ತು ಚಹಾ ತೋಟಗಳಿಂದ ಆವೃತವಾಗಿದೆ. ಊಟಿ ಸರೋವರ, ಬೊಟಾನಿಕಲ್ ಗಾರ್ಡನ್ಸ್ , ಎಮರಾಲ್ಡ್ ಲೇಕ್ , ಮುದುಮಲೈ ರಾಷ್ಟ್ರೀಯ ಉದ್ಯಾನವನ, ರೋಸ್ ಗಾರ್ಡನ್ , ಟೀ ಮ್ಯೂಸಿಯಂ ಮತ್ತು ಟೀ ಫ್ಯಾಕ್ಟರಿ ಸೇರಿದಂತೆ ವಿವಿಧ ಪ್ರಕೃತಿ ಸೌಂದರ್ಯದ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ.
ಕೊಡಗು
ಕೊಡಗು ಪ್ರಕೃತಿ ಸೌಂದರ್ಯದಲ್ಲಿ ಕರ್ನಾಟಕದ ಕಾಶ್ಮೀರದಂತಿದೆ. ಇತ್ತೀಚಿಗೆ ಕೊಡಗಿನತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜಂಜಾಟದಲ್ಲಿದ್ದವರು ಇಲ್ಲಿನ ನಿಸರ್ಗ ರಮಣೀಯ ಸ್ಥಳಗಳಲ್ಲಿ ಒಂದಷ್ಟು ಸಮಯವನ್ನು ಕಳೆಯಲೆಂದೇ ಜನ ಇತ್ತ ಮುಖ ಮಾಡುತ್ತಿದ್ದಾರೆ. ಇಲ್ಲಿರುವ ಬಹುತೇಕ ಪ್ರವಾಸಿ ತಾಣಗಳು ನಿಸರ್ಗ ನಿರ್ಮಿತವಾಗಿರುವುದರಿಂದ ಸದಾ ಪ್ರಶಾಂತತೆ ನೆಲೆಸಿರುತ್ತದೆ. ಹೀಗಾಗಿಯೇ ಬಹುತೇಕ ಪ್ರವಾಸಿಗರಿಗೆ ಕೊಡಗು ಇಷ್ಟವಾಗುತ್ತಿದೆ. ಬೆಟ್ಟ-ಗುಡ್ಡಗಳು, ಜಲಪಾತಗಳು, ಕಾಫಿ ತೋಟಗಳು ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತದೆ.

ನಂದಿ ಬೆಟ್ಟ
ಬೆಂಗಳೂರಿನ ನಗರಕ್ಕೆ ಅತ್ಯಂತ ಸಮೀಪವಾದ ಪ್ರವಾಸಿ ತಾಣ ನಂದಿ ಬೆಟ್ಟ. ನಗರದಿಂದ ಸುಮಾರು ಒಂದು ಗಂಟೆ ಪ್ರಯಾಣದಲ್ಲಿ ನಂದಿ ಬೆಟ್ಟಕ್ಕೆ ಭೇಟಿ ನೀಡಬಹುದು. ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 4850 ಅಡಿಗಳಷ್ಟು ಎತ್ತರದಲ್ಲಿದೆ. ಚಳಿಗಾಳಿ, ಮಂಜುಗಳಿಂದ ಕೂಡಿರುವ ಈ ಪ್ರದೇಶವು ಭೂ ಲೋಕದ ಸ್ವರ್ಗದಂತೆ ಕಾಣುತ್ತದೆ. ಇಲ್ಲಿ ಸ್ಟೇ ಆಗಲು ರೆಸಾರ್ಟ್ ವ್ಯವಸ್ಥೆ ಕೂಡ ಇದ್ದು, ಒಂದು ದಿನದ ಪ್ರವಾಸ ಕೂಡ ಮಾಡಬಹುದುದಾಗಿದೆ. ನಂದಿ ಬೆಟ್ಟದಲ್ಲಿನ ಹವಾಮಾನವು ವರ್ಷದ ಎಲ್ಲ ಸಮಯದಲ್ಲೂ ಆಹ್ಲಾದಕರವಾಗಿರುತ್ತದೆ. ಸಾಹಸ ಕ್ರೀಡಾ ಪ್ರಿಯರು ಪ್ಯಾರಾಸೈಲಿಂಗ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ.

ವಯನಾಡ್
ವಯನಾಡು ಕೇರಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಬೆಂಗಳೂರಿನಿಂದ ಸುಮಾರು 278 ಕಿಲೋಮೀಟರ್ ದೂರದಲ್ಲಿದೆ. ಹಚ್ಚ ಹಸಿರಿನಿಂದ ಕೂಡಿರುವ ವಯನಾಡು ವೀಕೆಂಡ್ ಕಳೆಯರು ಸೂಕ್ತವಾದ ಸ್ಥಳ. ಚಹಾ ತೋಟ, ಝರಿ ತೊರೆಗಳಿಂದ ಕೂಡಿರುವ ಈ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುರುವಾ ದ್ವೀಪ, ಪೂಕೋಟ್ ಸರೋವರ, ಎಡಕ್ಕಲ್ ಗುಹೆಗಳು, ಪಕ್ಷಿಪಥಲಂ ಪಕ್ಷಿಧಾಮ, ಮೀನ್ಮುಟ್ಟಿ ಜಲಪಾತ, ಸೂಚಿಪರಾ ಜಲಪಾತ ಸೇರಿದಂತೆ ವಿವಿಧ ಸ್ಥಳಗಳಿಗೆ ನೀವು ವಯನಾಡ್‌ನಲ್ಲಿ ಭೇಟಿ ನೀಡಬಹುದಾಗಿದೆ. ಒಮ್ಮೆ ವಯನಾಡ್‌ಗೆ ಎಂಟ್ರಿಯಾದರೆ ಸಾಕಷ್ಟು ಪ್ರವಾಸಿ ತಾಣಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತದೆ.












Click it and Unblock the Notifications