Tirupati Airport Tickets: ತಿಮ್ಮಪ್ಪನ ಭಕ್ತರಿಗೆ ಪ್ರಮುಖ ಸೂಚನೆ, ಇನ್ಮುಂದೆ ಇಲ್ಲಿರಲ್ಲ ದರ್ಶನದ ಟಿಕೆಟ್!
ತಿರುಮಲಕ್ಕೆ ಹೋಗುವ ಶ್ರೀವಾರಿ ಭಕ್ತರಿಗೆ ಒಂದು ಪ್ರಮುಖ ಸೂಚನೆ. ವಿದೇಶದಿಂದ ತಿರುಮಲ ಶ್ರೀಗಳ ದರ್ಶನಕ್ಕೆ ಬರುವ ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ತಿರುಪತಿ ವಿಮಾನ ನಿಲ್ದಾಣದಲ್ಲಿ ಟಿಟಿಡಿ ಪ್ರತಿದಿನ 100 ಆಫ್‌ಲೈನ್ ಶ್ರೀವಾರಿ ದರ್ಶನ ಟಿಕೆಟ್‌ಗಳನ್ನು ನೀಡುತ್ತಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಶ್ರೀವಾರಿ ಟಿಕೆಟ್ ನೀಡಲು ಅನುಮತಿ ಇಲ್ಲದ ಕಾರಣ ಇಂದಿನಿಂದ (ಡಿಸೆಂಬರ್ 16ರ ಶನಿವಾರದಿಂದ) ವಿಮಾನ ನಿಲ್ದಾಣದ ಬದಲು ತಿರುಮಲ ಗೋಕುಲಂ ವಿಶ್ರಾಂತಿ ಗೃಹದಲ್ಲಿ ಟಿಕೆಟ್ ನೀಡಲಾಗುವುದು.
ಪ್ರತಿದಿನ ಬೋರ್ಡಿಂಗ್ ಪಾಸ್ ಸಲ್ಲಿಸಿದ ಭಕ್ತರಿಗೆ ಶ್ರೀವಾರಿ ದರ್ಶನಕ್ಕೆ ಎಂದಿನಂತೆ 100 ಟಿಕೆಟ್ ಗಳನ್ನು ಆಫ್ ಲೈನ್ ಟಿಕೆಟ್ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ. ಆದ್ದರಿಂದ ಭಕ್ತರು ವಿಮಾನ ನಿಲ್ದಾಣದಲ್ಲಿ ಶ್ರೀವಾರಿ ದರ್ಶನ ಟಿಕೆಟ್ ಕೌಂಟರ್ ಬದಲಾವಣೆಯ ಬಗ್ಗೆ ಗಮನದಲ್ಲಿಡಬೇಕು ಎಂದು ಟಿಟಿಡಿ ವಿನಂತಿಸಿದೆ.

ಇದರ ಬದಲಿಗೆ ತಿರುಮಲದಲ್ಲಿರುವ ಗೋಕುಲಂ ಕಚೇರಿಯಲ್ಲಿ ಶ್ರೀವಾರಿ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡಲಾಗುತ್ತದೆ. ಈ ವರ್ಷದ ಮಾರ್ಚ್‌ನಿಂದ 1000 ಶ್ರೀವಾರಿ ದರ್ಶನದ ಟಿಕೆಟ್‌ಗಳಲ್ಲಿ 500 ಆನ್‌ಲೈನ್‌ನಲ್ಲಿ, 400 ತಿರುಮಲದ ಗೋಕುಲಂ ಕಚೇರಿಯಲ್ಲಿ ಮತ್ತು 100 ತಿರುಪತಿ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಬುಕಿಂಗ್ ಅಡಿಯಲ್ಲಿ ಭಕ್ತರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಟಿಕೆಟ್ ಬಯಸುವ ಭಕ್ತರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ನೇರವಾಗಿ ಹಾಜರಾದರೆ ಮಾತ್ರ ಟಿಕೆಟ್ ನೀಡಲಾಗುತಿತ್ತು. ಇದೀಗ ಕೌಂಟರ್ ಅನ್ನು ವಿಮಾನ ನಿಲ್ದಾಣದಿಂದ ಗೋಕುಲಂಗೆ ಸ್ಥಳಾಂತರಿಸಲಾಗಿದೆ. ಅಂದರೆ ಅಲ್ಲಿಯೇ 100 ಟಿಕೆಟ್‌ಗಳನ್ನು ನೀಡಲಾಗುತ್ತದೆ.
ತಿರುಮಲದಲ್ಲಿ ಆಹ್ಲಾದಕರ ವಾತಾವರಣ
ತಿರುಮಲದಲ್ಲಿ ಹವಾಮಾನ ಆಹ್ಲಾದಕರವಾಗಿದೆ. ಏಳು ಬೆಟ್ಟಗಳು ಹಿಮದ ಹೊದಿಕೆಯಿಂದ ಆವೃತವಾಗಿವೆ. ಶ್ರೀವಾರಿಯ ಏಳು ಬೆಟ್ಟಗಳನ್ನು ಮೋಡಗಳು ಆವರಿಸಿವೆ. ಎಲ್ಲೆಡೆ ಮಂಜು ತುಂಬಿ ಪ್ರಕೃತಿ ರಮಣೀಯವಾಗಿದೆ. ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಮರುಳಲು ಮನಸ್ಸಾಗದ ವಾತಾವರಣವಿದೆ.
ತಿರುಮಲಕ್ಕೆ ಹೋಗುವ ಭಕ್ತರಿಗೆ ಎಚ್ಚರಿಕೆ.. ಈ ಸ್ಥಳಗಳಿಗೆ ಅನುಮತಿ ಇಲ್ಲ
ದಟ್ಟ ಮಂಜು, ಮಳೆಯಿಂದಾಗಿ ಪಾಪವಿನಾಶನ ಮತ್ತು ಶ್ರೀವಾರಿ ಪಾಡಿ ಮಾರ್ಗವನ್ನು ಟಿಟಿಡಿ ಮುಚ್ಚಿದೆ. ಶುಕ್ರವಾರ ಸಂಜೆಯಿಂದ ಟಿಟಿಡಿ ಆ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಶುಕ್ರವಾರ ದಟ್ಟ ಮಂಜು ಕವಿದಿದ್ದರಿಂದ ರಸ್ತೆ ಸರಿಯಾಗಿ ಗೋಚರಿಸದೆ ವಾಹನ ಸವಾರರು ಪರದಾಡಿದ್ದಾರೆ. ಇದರಿಂದ ದೇವಸ್ಥಾನದ ಬಳಿ ಇರುವ ಭಕ್ತರು ಹಾಗೂ ಘಾಟ್ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಮುಂಜಾನೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಮೇಲಾಗಿ ಅಲಿಪಿರಿ ಮಾರ್ಗವಾಗಿ ಹೋಗುವ ವಾಹನ ಸವಾರರಿಗೆ ಟಿಟಿಡಿ ಸಿಬ್ಬಂದಿ ಎಚ್ಚರಿಕೆ ರವಾನಿಸುತ್ತಿದ್ದಾರೆ.
ತಿರುಮಲದಲ್ಲಿ ರಾತ್ರಿ ಮತ್ತು ಮುಂಜಾನೆ ಮಂಜು ಹೆಚ್ಚಾಗುತ್ತಿದೆ. ಚಳಿಯ ವಾತಾವರಣವಿದೆ. ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ. ಮಂಜು ಬೀಳುತ್ತಿರುವುದರಿಂದ ಘಾಟ್ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಟಿಟಿಡಿ ಸೂಚಿಸಿದೆ. ಮುಂದೆ ಹೋಗುವ ವಾಹನಗಳ ಮೇಲೆ ನಿಗಾ ಇರಿಸಿ ನಿಧಾನವಾಗಿ ಪ್ರಯಾಣ ಮುಂದುವರಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಇರಲಿದೆ ಎನ್ನಲಾಗಿದ್ದು ವಾಹನ ಸವಾರರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.












Click it and Unblock the Notifications