ರೈಲು ಹೊರಡುವ 5 ನಿಮಿಷಗಳ ಮುಂಚೆಯೂ ಟಿಕೆಟ್ ಕಾಯ್ದಿರಿಸಬಹುದು-ಹೇಗೆ ಸಾಧ್ಯ?-ಇಲ್ಲಿದೆ ಮಾಹಿತಿ
Indian Railways: ರೈಲ್ವೆ ಭಾರತದ ಅತೀ ದೊಡ್ಡ ಸಾರಿಗೆಯಾಗಿದ್ದು, ಸಾಮಾನ್ಯವಾಗಿ ದೂರದ ಊರುಗಳಿಗೆ ರೈಲುಗಳಲ್ಲಿಯೇ ಹೆಚ್ಚಿನ ಜನರು ಪ್ರಯಾಣ ಬೆಳೆಸುತ್ತಾರೆ. ಅಲ್ಲದೆ, ಕೆಲವು ರೈಲಿನಲ್ಲಿ ಪ್ರಯಾಣಿಸಲು ಬಯಸಿದರೆ, ಒಂದು ವಾರ, ಕೆಲವೊಮ್ಮೆ ತಿಂಗಳ ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸುತ್ತಾರೆ. ಆದರೆ ರೈಲು ಹೊರಡುವ 5 ನಿಮಿಷದ ಮುಂಚಿತವಾಗಿಯೂ ಕೂಡ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಇದು ಹೇಗೆ ಸಾಧ್ಯ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ರೈಲ್ವೆ ಟಿಕೆಟ್ ಅನ್ನು ತತ್ಕಾಲ್ ಅಲ್ಲೂ ಬುಕಿಂಗ್ ಮಾಡಿವ ಸೌಲಭ್ಯ ಇರುತ್ತದೆ. ನೀವು ಒಂದು ದಿನ ಮುಂಚಿತವಾಗಿ ಪ್ರಯಾಣಿಸಲು ಬಯಸಿದರೆ, ಬುಕಿಂಗ್ ಮಾಡಲು ನಿಮಗೆ ಅವಕಾಶ ಇರುವುದಿಲ್ಲ. ಅಂತಹ ಸಮಯದಲ್ಲಿ ತತ್ಕಾಲ್ ಟಿಕೆಟ್ ಕಾಯ್ದಿರಿಸಬೇಕು. ಹಾಗೆಯೇ ಕೆಲವು ಗಂಟೆಗಳ ಮುಂಚಿತವಾಗಿ ರೈಲಿನಲ್ಲಿ ಪ್ರಯಾಣಿಸಬೇಕೆಂದರೆ, ನೀವು ಟಿಕೆಟ್ ಕಾಯ್ದಿರಿಸಲು ಸಾಧ್ಯ ಆಗುವುದಿಲ್ಲ. ಅಂತಹ ವೇಲೆ, ರೈಲು ಹೊರಡುವ 5 ನಿಮಿಷಗಳ ಮೊದಲು ಟಿಕೆಟ್ ಕಾಯ್ದಿರಿಸಬಹುದಾಗಿದೆ.

ರೈಲು ಪ್ರಯಾಣಕ್ಕಾಗಿ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಮತ್ತು ಟಿಕೆಟ್ ರದ್ದುಗೊಳಿಸುವ ಅನೇಕ ಪ್ರಯಾಣಿಕರಿರುತ್ತಾರೆ. ಇಂತಹ ಸಮಯದಲ್ಲಿ, ಖಾಲಿ ಇರುವ ಟಿಕೆಟ್‌ಗಳನ್ನು ಮಾರಾಟ ಮಾಡಲು ರೈಲ್ವೆ ಈ ಸೌಲಭ್ಯವನ್ನು ಒದಗಿಸಿದೆ. ಪ್ರತಿ ರೈಲಿನ ಟಿಕೆಟ್ ಬುಕಿಂಗ್ ದೃಢೀಕರಣಕ್ಕಾಗಿ ರೈಲ್ವೆ ಎರಡು ಚಾರ್ಟ್‌ಗಳನ್ನು ಸಿದ್ಧಪಡಿಸುತ್ತದೆ. ಮೊದಲ ಚಾರ್ಟ್ ಅನ್ನು ರೈಲು ಹೊರಡುವ 4 ಗಂಟೆಗಳ ಮೊದಲು ತಯಾರಿಸಲಾಗುತ್ತದೆ.
ರೈಲು ಪ್ರಾರಂಭವಾಗುವ ಮೊದಲು ಎರಡನೇ ಚಾರ್ಟ್ ಅನ್ನು ತಯಾರಿಸಲಾಗುತ್ತದೆ. ಈ ಮೊದಲು ಅರ್ಧ ಗಂಟೆ ಮುಂಚಿತವಾಗಿ ಮಾತ್ರ ಟಿಕೆಟ್ ಬುಕಿಂಗ್‌ಗೆ ಅವಕಾಶ ಇತ್ತು. ಇದೀಗ ರೈಲು ಹೊರಡುವ 5 ನಿಮಿಷಗಳ ಮೊದಲು ಟಿಕೆಟ್ ಕಾಯ್ದಿರಿಸುವಿಕೆಯ ಸೌಲಭ್ಯವನ್ನು ರೈಲ್ವೆ ಒದಗಿಸಿದೆ. ಅದು ರೈಲು ಹೊರಡುವ 5 ನಿಮಿಷಗಳ ಮೊದಲು ಲಭ್ಯವಿದ್ದರೆ ಆನ್‌ಲೈನ್ ಅಥವಾ ಆಪ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ರೈಲ್ವೆ ಒದಗಿಸಿದೆ.
ಇದನ್ನು ಬೋರ್ಡಿಂಗ್ ನಿಲ್ದಾಣದಿಂದ ಮಾತ್ರ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಅಗತ್ಯ ಇದ್ದರೆ ಮಧ್ಯ ನಿಲ್ದಾಣದಿಂದ ಯಾವುದೇ ಅನುಮತಿ ಇಲ್ಲ. ನೀವು ಮಧ್ಯ ನಿಲ್ದಾಣದಿಂದ ಟಿಕೆಟ್ ಬಯಸಿದರೆ, ನೀವು ಟಿಟಿಇಯನ್ನು ಸಂಪರ್ಕ ಮಾಡಬೇಕಾಗುತ್ತದೆ.
ರೈಲು ನಿರ್ಗಮಿಸಲು ಕೊನೆಯ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸಲು, ರೈಲಿನಲ್ಲಿ ಆಸನಗಳು ಖಾಲಿ ಇವೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬೇಕಾಗುತ್ತದೆ. ರೈಲ್ವೆ ಅಧಿಕಾರಿಗಳು ಸಿದ್ಧಪಡಿಸಿದ ಆನ್‌ಲೈನ್ ಚಾರ್ಟ್ ಮೂಲಕ ನೀವು ಇದನ್ನು ಕಂಡುಹಿಡಿಯಬಹುದು. ಇದಕ್ಕಾಗಿ, ನೀವು ಮೊದಲು ಐಆರ್‌ಟಿಸಿ ಅಪ್ಲಿಕೇಶನ್ ತೆರೆಯಬೇಕು ಮತ್ತು ರೈಲು ಚಿಹ್ನೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಚಾರ್ಟ್ ಖಾಲಿ ಸೌಲಭ್ಯವು ಕಾಣಿಸಿಕೊಳ್ಳುತ್ತದೆ. ಅಥವಾ ನೀವು ನೇರವಾಗಿ ಆನ್‌ಲೈನ್ ಚಾರ್ಟ್ಸ್ ವೆಬ್‌ಸೈಟ್‌ಗೆ ಪರಿಶೀಲನೇ ಮಾಡಬಹುದು.
ರೈಲಿನ ಹೆಸರು ಅಥವಾ ಸಂಖ್ಯೆ, ದಿನಾಂಕ ಮತ್ತು ಹತ್ತಬೇಕಾದ ನಿಲ್ದಾಣದ ವಿವರಗಳನ್ನು ನಮೂದಿಸಬೇಕಾಗುತ್ತದೆ. ನಂತರ ಗೆಟ್ ಟ್ರೈನ್ ಚಾರ್ಟ್ ಕ್ಲಿಕ್ ಮಾಡಿ. ನಂತರ ತಕ್ಷಣವೇ ನೀವು ವರ್ಗವಾರು ಖಾಲಿ ಇರುವ ಸೀಟುಗಳ ವಿವರಗಳನ್ನು ನೋಡುತ್ತೀರಿ. ಖಾಲಿ ಸೀಟ್ ಇದ್ದರೆ, ಟಿಕೆಟ್ ಕಾಯ್ದಿರಿಸಬಹುದು. ಒಂದು ಸೀಟುಗಳು ಇಲ್ಲದಿದ್ದರೆ ಶೂನ್ಯ ಇರುತ್ತದೆ. ರೈಲು ಪ್ರಾರಂಭವಾಗುವ ನಿಲ್ದಾಣಗಳನ್ನು ಹತ್ತುವವರಿಗೆ ಮಾತ್ರ ಈ ಆಯ್ಕೆ ಉಪಯುಕ್ತವಾಗಲಿದೆ.
ಒಟ್ಟಿನಲ್ಲಿ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ರೈಲು ಹೊರಡುವ 5 ನಿಮಿಷದ ಮುಂಚೆಯೂ ನಿಯಮದ ಪ್ರಕಾರ, ಸೀಟ್ ಖಾಲಿಯಿದ್ದರೆ, ಟಿಕೆಟ್ ಕಾಯ್ದಿರಿಸುವ ಆಯ್ಕೆಯನ್ನು ಸಹ ನೀಡಿದೆ.











Click it and Unblock the Notifications