ತಿರುಮೇಯಾಚೂರು ದೇವಸ್ಥಾನದ ಮಹಿಮೆ: ಲಲಿತಾ ಸಹಸ್ರನಾಮದ ಪವಿತ್ರ ಜನ್ಮಸ್ಥಳ
ತಮಿಳುನಾಡಿನ ಸುಪ್ರಸಿದ್ದ ಪವಿತ್ರ ಕ್ಷೇತ್ರವಾದ ತಿರುಮೇಯಾಚೂರು ದೇವಾಲಯವು ಭಕ್ತರ ಭಕ್ತಿಗೆ ಮತ್ತು ಆಧ್ಯಾತ್ಮಕ್ಕೆ ಪ್ರತಿನಿಧಿಸುವ ವಿಶಿಷ್ಟ ಸಂಗಮವಾಗಿದೆ. ಲಲಿತಾಂಬ ದೇವಿಯ ಕೃಪೆಯಿಂದ ಪ್ರಸಿದ್ದಿಯನ್ನು ಪಡೆದ ಈ ದೇವಾಲಯ ಶ್ರೀ ಲಲಿತಾ ಸಹಸ್ರನಾಮಗಳ ಪಠಣಕ್ಕೆ ವಿಶೇಷವಾಗಿ ಮಹತ್ವವನ್ನು ನೀಡಲಾಗಿದೆ.
ಈ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಸಹಸ್ರನಾಮವನ್ನು ಪಠಿಸಿದರೆ ಇಷ್ಟಾರ್ತಗಳು ಈಡೇರುತ್ತವೆ ಮತ್ತು ರೋಗಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ.
ತಿರುಮೇಯಾಚೂರು ಎಲ್ಲಿದೆ?
ಈ ದೇವಾಲಯವು ತಮಿಳುನಾಡಿನ ಪ್ರಸಿದ್ಢ ದೇವಾಲಯಗಳಲ್ಲಿ ಇದು ಒಂದು ಪ್ರಮುಖ ದೇವಾಲಯ ಆಗಿದೆ. ಈ ದೇವಾಲಯದಲ್ಲಿ ಪರಮೇಶ್ವರನು ಮೇಘನಾಥ ಸ್ವಾಮಿ ರೂಪದಲ್ಲಿ ಪೂಜಿಸಲ್ಪಡುತ್ತಾನೆ ಮತ್ತು ಲಲಿತಾಂಬಿಕಾ ದೇವಿ ಶ್ರೀಚಕ್ರದ ಮೇಲೆ ಕಂಗೊಳಿಸುತ್ತಾಳೆ. ಚೈತ್ರ ಮಾಸದಲ್ಲಿ ಸೂರ್ಯನ ಕಿರಣಗಳು ನೇರವಾಗಿ ದೇವಾಲಯದ ಒಳಗೆ ಪ್ರವೇಶಿಸಿ ದೇವರ ಪಾದಗಳನ್ನು ಸ್ಪರ್ಶಿಸುವ ಅಪರೂಪದ ದೃಶ್ಯ ಇಲ್ಲಿ ಕಾಣಸಿಗುತ್ತದೆ.

ದೇವಸ್ಥಾನದ ಇತಿಹಾಸ:
ಸುಮಾರು ಸಾವಿರ ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಶೈವ ಕ್ಷೇತ್ರವಾಗಿದ್ದರೂ ಲಲಿತಾಂಬಾ ದೇವಿಗೆ ಇಲ್ಲಿ ವಿಶೇಷ ಸ್ಥಾನವಿದೆ. ಇಲ್ಲಿ ಸೂರ್ಯದೇವನು ತಪಸ್ಸು ಮಾಡಿ ತನ್ನ ಕಳೆದು ಹೊದ ತೇಜಸ್ಸನ್ನು ಮರಳಿ ಪಡೆದನೆಂಬುದು ಪುರಾಣಗಳು ಹೇಳುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿವರ್ಷ ಅಂದರೆ ಚೈತ್ರ ಮಾಸದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗನ ಪಾದಗಳಿಗೆ ಸ್ಫರ್ಶಿಸುತ್ತವೆ.
ಲಲಿತಾ ಸಹಸ್ರನಾಮದ ಉಗಮ:
ಪುರಾಣಗಳ ಪ್ರಕಾರ ದೇವತೆಗಳನ್ನು ಪೀಡಿಸುತ್ತಿದ್ದ ಭಂಡಾಸುರನ ಸಂಹಾರಕ್ಕಾಗಿ ಜಗನ್ಮಾತೆಯು ಲಲಿತಾಂಬಿಕೆಯಾಗಿ ಅವತರಿಸಿದಳು. ಭಂಡಾಸುರನ ಸಂಹಾರದ ನಂತರ ಉಗ್ರರೂಪದಲ್ಲಿದ ದೇವಿಯನ್ನು ಶಾಂತಗೊಳಿಸಲು ಶಿವನ ಆಜ್ಞೆಯಂತೆ ಅವಳು ಅಲ್ಲಿ ತಪಸ್ಸು ಮಾಡಿದಳು. ಆಗ ಆಕೆಯ ಸನ್ನಿಧಿಯಲ್ಲಿ ವಶೀನ್ಯಾದಿ ವಾಗ್ವದೇವತೆಗಳು ಮೊಟ್ಟಮೊದಲ ಬಾರಿಗೆ 'ಶ್ರೀ ಲಲಿತಾ ಸಹಸ್ರನಾಮ' ಸ್ತೋತ್ರವನ್ನು ಪಠಿಸಿದರು ಎಂದು ನಂಬಲಾಗಿದೆ.
ಹಯಗ್ರೀವ ಮತ್ತು ಅಗಸ್ತ್ಯರ ಕಥೆ:
ವಿಷ್ಣುವಿನ ಅವತಾರವಾದ ಹಯಗ್ರೀವನು ಅಗಸ್ತ್ಯ ಮಹರ್ಷಿಗಳಿಗೆ ಲಲಿತಾ ಸಹಸ್ರನಾಮದ ಮಹತ್ವವನ್ನು ಇಲ್ಲಿ ಬೋಧಿಸಿದ್ದಾನೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. "ವಿಶ್ವದಲ್ಲೇ ಲಲಿತಾ ಸಹಸ್ರನಾಮ ಪಠಿಸಲು ಅತ್ಯಂತ ಶ್ರೇಷ್ಠ ಸ್ಥಳ ಯಾವುದು?" ಎಂಬ ಅಗಸ್ತ್ಯರ ಪ್ರಶ್ನೆಗೆ ಹಯಗ್ರೀವರು "ತಿರುಮೇಯಾಚೂರು" ಎಂದೇ ಉತ್ತರಿಸಿದ್ದರು. ಈ ಕಾರಣದಿಂದ ಈ ಸ್ಥಳದಲ್ಲಿ ಸಹಸ್ರನಾಮ ಪಠಣ ಅತ್ಯಂತ ಫಲಪ್ರದ ಎಂದು ಭಕ್ತರು ನಂಬುತ್ತಾರೆ.
ಕ್ಷೇತ್ರದ ವಿಶೇಷತೆಗಳು:
ಶ್ರೀಚಕ್ರ ಕಂಬ: ಅಮ್ಮನವರ ಗರ್ಭಗುಡಿ ಹೊರಭಾಗದಲ್ಲಿ ಒಂದು ವಿಶೇಷವಾದ ಕಂಬವಿದೆ. ಇದರ ಬಳಿ ಕುಳಿತು ಒಮ್ಮೆ ಸಹಸ್ರನಾಮ ಪಠಿಸಿದರೆ, ಅದು ಒಂದು ಕೋಟಿ ಬಾರಿ ಪಠಿಸಿದ ಪುಣ್ಯಕ್ಕೆ ಸಮಾನವಂತೆ!
ಶುಖ ಬ್ರಹ್ಮದುರ್ಗೆ: ಇಲ್ಲಿರುವ ದುರ್ಗಾ ದೇವಿಯ ಕೈಯಲ್ಲಿ ಗಿಳಿಯಿದೆ (ಸಂಸ್ಕೃತದಲ್ಲಿ ಶುಖ ಎಂದರೆ ಗಿಳಿ). ಇದು ಶಾಂತಿಯ ಸಂಕೇತವಾಗಿದ್ದು, ಆಕೆಯನ್ನು 'ಶುಖ ಬ್ರಹ್ಮದೇವಿ' ಎಂದು ಪೂಜಿಸಲಾಗುತ್ತದೆ.
ಪ್ರಸಾದ: ಈ ಕ್ಷೇತ್ರದಲ್ಲಿ ಅನ್ನಪ್ರಸಾದಕ್ಕೆ ವಿಶೇಷ ಮಹತ್ವವಿದೆ. ಇಲ್ಲಿ ದೇವರಿಗೆ ಅರ್ಪಿಸಿದ ಅನ್ನಪ್ರಸಾದವನ್ನು ಸೇವಿಸಿದರೆ ದೀರ್ಘಕಾಲದ ಕಾಯಿಲೆಗಳು ಗುಣವಾಗುತ್ತವೆ ಎಂಬುದು ಭಕ್ತರ ಅಚಲ ನಂಬಿಕೆ.
ಆಯುಷ್ಯ ವೃದ್ಧಿ: ಇಲ್ಲಿ 60 ಅಥವಾ 80ನೇ ವರ್ಷದ ಹುಟ್ಟುಹಬ್ಬ (ಷಷ್ಠಿಪೂರ್ತಿ) ಆಚರಿಸಿಕೊಂಡರೆ ಆಯುಷ್ಯ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
ತಲುಪುವುದು ಹೇಗೆ?
ಚೆನೈನಿಂದ ಕಾರೈಕಲ್ ಮಾರ್ಗವಾಗಿ ರೈಲಿನಲ್ಲಿ ಪ್ರಯಾಣಿಸಿ 'ಪೆರಲಂ' ನಿಲ್ದಾಣದಲ್ಲಿ ಇಳಿಯಬೇಕು. ಅಲ್ಲಿಂದ ಖಾಸಗಿ ವಾಹನಗಳ ಮೂಲಕ ಸುಲಭವಾಗಿ ದೇವಸ್ಥಾನವನ್ನು ತಲುಪಬಹುದು. ಲಲಿತಾ ಸಹಸ್ರನಾಮವನ್ನು ನಿತ್ಯ ಪಠಿಸುವವರು ಮತ್ತು ಆದ್ಯಾತ್ಮಿಕ ಆಸಕ್ತಿ ಇರುವವರು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಅದ್ಭುತ ಕ್ಷೇತ್ರವಿದು.














Click it and Unblock the Notifications