ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ವಾಹನ ಸವಾರರ ಗಮನಕ್ಕೆ

ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್‌ನಲ್ಲಿ 5/2/2023 ರಿಂದ 5/4/2023ರ ವಾಹನ ಸಂಚಾರ ನಿಷೇಧಿಸಲಾಗಿದೆ.

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 05; ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್‌ನಲ್ಲಿ ಕಾಂಕ್ರೀಟ್ ಪೇವ್‌ಮೆಂಟ್ ಮಾಡುವ ಹಿನ್ನಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಡಳಿತ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿವೆ. 5/2/2023 ರಿಂದ 5/4/2023ರ ತನಕ ಈ ಕೆಳಕಂಡಂತೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರ ನಡೆಸಬೇಕು ಎಂದು ಜಿಲ್ಲಾಡಳಿತ ಆದೇಶದಲ್ಲಿ ತಿಳಿಸಿವೆ.

Ejipura flyover: ರಸ್ತೆ ಇಲ್ಲ, ವೋಟು ಇಲ್ಲ; ಈಜಿಪುರ ಮೇಲ್ಸೇತುವೆಗಾಗಿ ಕೋರಮಂಗಲ ನಿವಾಸಿಗಳ ಪ್ರತಿಭಟನೆ Ejipura flyover: ರಸ್ತೆ ಇಲ್ಲ, ವೋಟು ಇಲ್ಲ; ಈಜಿಪುರ ಮೇಲ್ಸೇತುವೆಗಾಗಿ ಕೋರಮಂಗಲ ನಿವಾಸಿಗಳ ಪ್ರತಿಭಟನೆ

ವಾಹನಗಳ ಸಂಚಾರವನ್ನು ನಿಷೇಧಿಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ತಾತ್ಕಾಲಿಕ ಅಧಿಸೂಚನೆಯ ಆದೇಶವನ್ನು ಹೊರಡಿಸುವಂತೆ ಕಾರ್ಯಪಾಲಕ ಇಂಜಿನಿಯರ್, ಲೋಕಪಯೋಗಿ ಇಲಾಖೆ, ಶಿವಮೊಗ್ಗ ವಿಭಾಗ ಇವರು ಕೋರಿದ್ದರು.

ರಸ್ತೆ ದುರಸ್ತಿಗೆ ನಿರ್ಲಕ್ಷ್ಯ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರರಸ್ತೆ ದುರಸ್ತಿಗೆ ನಿರ್ಲಕ್ಷ್ಯ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

Vehicle Movement Banned

ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್‍ನ ಎರಡು ಭಾಗಗಳಲ್ಲಿ ಕಾಂಕ್ರಿಟ್ ಪೇವ್‍ಮೆಂಟ್ ನಿರ್ಮಿಸಬೇಕಿರುವುದರಿಂದ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರ ಅವಕಾಶ ನೀಡಲಾಗಿದೆ.

ಬೆಂಗಳೂರು ಬ್ರಿಗೇಡ್ ರಸ್ತೆ ಬಳಿಕ ಮಹಾಲಕ್ಷ್ಮಿ ಲೇಔಟ್ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿ, ಕಳಪೆ ಕಾಮಗಾರಿ ಆರೋಪಬೆಂಗಳೂರು ಬ್ರಿಗೇಡ್ ರಸ್ತೆ ಬಳಿಕ ಮಹಾಲಕ್ಷ್ಮಿ ಲೇಔಟ್ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿ, ಕಳಪೆ ಕಾಮಗಾರಿ ಆರೋಪ

ಕೂರ್ಮರಾವ್ ಎಂ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕರು ಉಡುಪಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ ಇವರಿಂದ ವರದಿ ಪಡೆಯಲಾದು ಈ ಆದೇಶ ಹೊರಡಿಸಿದ್ದಾರೆ.

ಸದರಿ ವರದಿಗಳನ್ವಯ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೇ ಘಾಟ್‌ನಲ್ಲಿ ಕಾಂಕ್ರೀಟ್ ಪೇವ್‌ಮೆಂಟ್ ಮಾಡುವ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧ ಹಾಗೂ ಅನುಬಂಧ ಅ ರಲ್ಲಿ ತಿಳಿಸಿರುವಂತೆ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಬಹುದಾಗಿ ವರದಿ ಸಲ್ಲಿಸಿರುತ್ತಾರೆ.

ಕಾರ್ಯಪಾಲಕ ಇಂಜಿನಿಯರ್, ಲೋಕಪಯೋಗಿ ಇಲಾಖೆ, ಶಿವಮೊಗ್ಗ ವಿಭಾಗ ಪೊಲೀಸ್ ಅಧೀಕ್ಷಕರು ಉಡುಪಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ ರವರು ಸಲ್ಲಿಸಿರುವ ವರದಿಯನ್ನು ಪರಿಗಣಿಸಿ ಉಡುಪಿ ಜಿಲ್ಲಾಧಿಕಾರಿ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ 116 ರನ್ವಯ ಹಾಗೂ ಸಾರ್ವಜನಿಕ ಹಿತ ದೃಷ್ಠಿಯಿಂದ ಈ ಆದೇಶ ಹೊರಡಿಸಿರುತ್ತಾರೆ.

ದಿನಾಂಕ 5/2/2023 ರಿಂದ 5/4/2023 ರವರೆಗೆ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್‌ನಲ್ಲಿ ಕಾಂಕ್ರೀಟ್ ಪೇವ್‌ಮೆಂಟ್ ಮಾಡುವ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ ಹಾಗೂ ಈ ಕೆಳಕಂಡ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಮಾಡಿ ಆದೇಶಿಸಲಾಗಿದೆ.

road

ಬದಲಿ ಮಾರ್ಗಗಳು

* ರಾಜ್ಯ ಹೆದ್ದಾರಿ-52 ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು
(ಎ) ತೀರ್ಥಹಳ್ಳಿ-ಹಾಲಾಡಿ-ಬಸ್ರೂರು-ಕುಂದಾಪುರ ರಸ್ತೆ
(ಬಿ) ತೀರ್ಥಹಳ್ಳಿ-ಹೆಬ್ರಿ-ಉಡುಪಿ-ಕುಂದಾಪುರ ರಸ್ತೆ

* ರಾಜ್ಯ ಹೆದ್ದಾರಿ-52ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ-ಕಾನುಗೋಡು-ನಗರ-ಕೊಲ್ಲೂರು ಕುಂದಾಪುರ (Multi axle, A/V ಯನ್ನು ಹೊರತುಪಡಿಸಿ.

* ತೀರ್ಥಹಳ್ಳಿ-ಯಡೂರು-ಹುಲಿಕಲ್‌-ಕುಂದಾಪುರ ಕಡೆ ಹೋಗುವ ಲಘು/ ಭಾರೀ ವಾಹನಗಳು ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ನಗರ-ಕೊಲ್ಲೂರು-ಕುಂದಾಪುರ (RLW 16200 KG ವರೆಗೆ ಭಾರೀ ಸರಕು ವಾಹನಗಳ ಸಂಚಾರಕ್ಕೆ ಮಾತ್ರ)

* ಹೊಸನಗರ-ಕೊಲ್ಲೂರು-ಕುಂದಾಪುರ ರಸ್ತೆ ಭಾರೀ ವಾಹನ (Multi axle, A/V ಯನ್ನು ಹೊರತುಪಡಿಸಿ) ಲಘು ಸರಕು ವಾಹನಗಳ ಸಂಚಾರಕ್ಕೆ ಮಾತ್ರ.

* ಶಿವಮೊಗ್ಗ/ ಸಾಗರ ಕಡೆಯಿಂದ ಹೊಸನಗರ ಮೂಲಕ ಕುಂದಾಪುರ ಕಡೆ ಹೋಗುವ ಲಘು/ ಭಾರೀ ವಾಹನಗಳು ಹೊಸನಗರ-ನಗರ-ಕೊಲ್ಲೂರು ರಸ್ತೆ ಮೂಲಕ ಸಂಚರಿಸಬೇಕು.

English summary
Vehicle movement banned in Thirthahalli to Kundapura state highway 52 due to concrete pavement work at Balebare ghat from February 5th. Here are the details of alternative route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X