• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಪ್ರಪ್ರಥಮವಾಗಿ ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿದ ದಂಪತಿ!

|
Google Oneindia Kannada News

ತಿರುವನಂತಪುರಂ,ಜು.6: ಪ್ರವಾಸ ಬಹುಜನರ ಹವ್ಯಾಸ. ಬಹುಜನರಿಗೆ ಅದು ಖುಷಿಯ ಕಾರಣ, ಹೊಸದನ್ನು ಕಾಣುವ ಹೊಸತನ್ನು ಕಣ್ತುಂಬಿಕೊಳ್ಳುವ ತವಕ ಜನರ ಸಕ್ರಿಯತೆಯ ಭಾಗವು ಹೌದು, ಪ್ರವಾಸವನ್ನು ನಾವು ಹಿಚ್‌ಹೈಕಿಂಗ್‌ (ದಾರಿ ಹೋಕರಿಂದ ಡ್ರಾಪ್‌ ತೆಗೆದುಕೊಳ್ಳುವುದು) ಕೂಡ ಮಾಡಬಹುದು. ವೈಯುಕ್ತಿಕ ವಾಹನಗಳನ್ನು ಬಳಸಬಹುದು. ಆದರೆ ಕೇರಳದ ದಂಪತಿ ಜೋಡಿಯೊಂದು ಈಗ ಇಡೀ ಭಾರತವನ್ನು ಕಾಲ್ನಡಿಯಲ್ಲೇ ಸುತ್ತಾಡಿ ಬಂದಿದೆ.

ಕೊಟ್ಟಾಯಂನ ಪಲ್ಲಿಕ್ಕಾಥೋಡ್‌ನಿಂದ 53 ವರ್ಷದ ಬೆನ್ನಿ ಕೊಟ್ಟಾರತಿಲ್ ಮತ್ತು ಅವರ ಪತ್ನಿ ಮೊಲ್ಲಿ ಬೆನ್ನಿ, 46, ಕಾಲ್ನಡಿಗೆಯಲ್ಲಿ ಇಡೀ ಭಾರತವನ್ನು ಸುತ್ತಾಡಿ ಈಗ ಹಿಂತಿರುಗಿದ್ದಾರೆ. ಡಿಸೆಂಬರ್ 1, 2021 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಅವರ ಕಾಲ್ನಡಿಗೆ ಯಾತ್ರೆಯು ಜುಲೈ 3, 2022 ರಂದು ಮುಕ್ತಾಯಗೊಳ್ಳಲು 216 ದಿನಗಳನ್ನು ತೆಗೆದುಕೊಂಡಿತು.

ತನ್ನಲ್ಲದ ತಪ್ಪಿಗೆ ಕೈತಪ್ಪಿದ ಪೈಲಟ್ ಹುದ್ದೆ: ಫುಡ್ ಡೆಲಿವರಿ ಬಾಯ್ ಕಥೆ ಕೇಳಿತನ್ನಲ್ಲದ ತಪ್ಪಿಗೆ ಕೈತಪ್ಪಿದ ಪೈಲಟ್ ಹುದ್ದೆ: ಫುಡ್ ಡೆಲಿವರಿ ಬಾಯ್ ಕಥೆ ಕೇಳಿ

ಮಕ್ಕಳಿಲ್ಲದ ದಂಪತಿಗೆ ಸ್ಪೂರ್ತಿ

ಮಕ್ಕಳಿಲ್ಲದ ದಂಪತಿಗೆ ಸ್ಪೂರ್ತಿ

ನಡಿಗೆಯನ್ನು ಉತ್ತೇಜಿಸಲು ಮತ್ತು ಮಕ್ಕಳಿಲ್ಲದ ದಂಪತಿಗೆ ಒಟ್ಟಿಗೆ ಪ್ರಯಾಣಿಸುವುದು ಹೊಸ ಜಾಗೃತಿಯನ್ನು ತರುತ್ತದೆ ಎಂಬ ಸಂದೇಶವನ್ನು ನೀಡಲು ನಾವು ಈ ಯಾತ್ರೆಯನ್ನು ಪ್ರಾರಂಭಿಸಿದ್ದೆವು ಎಂದು ಬೆನ್ನಿ ಹೇಳಿದ್ದಾರೆ. 15 ವರ್ಷಗಳಿಗೂ ಹೆಚ್ಚು ಕಾಲ ಆಂಧ್ರಪ್ರದೇಶದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಅವರು ಕೋವಿಡ್‌ನಿಂದ ಮನೆಗೆ ಮರಳಬೇಕಾಯಿತು. ಆಗ ಬೆನ್ನಿ ಮತ್ತು ಮೊಲ್ಲಿ ದೇಶಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದರು. ಆದಾಗ್ಯೂ, ಪ್ರಯಾಣದ ವೆಚ್ಚವನ್ನು ಪೂರೈಸಲು ಅವರು ಪತ್ನಿಯ ಚಿನ್ನವನ್ನು ಅಡಮಾನವಿಟ್ಟು ಸ್ನೇಹಿತರು ಮತ್ತು ಕುಟುಂಬದಿಂದ ಹಣವನ್ನು ಸಾಲವನ್ನು ಪಡೆದರು.

ಅಲ್ಲದೆ ತಮ್ಮ ಪ್ರಯಾಣದುದ್ದಕ್ಕೂ ದಂಪತಿ ಹಲವಾರು ಸವಾಲುಗಳನ್ನು ಅನುಭವಿಸಿದರು. ಒಮ್ಮೆ ನಾವು ತಮಿಳುನಾಡಿನ ವಿಲ್ಲುಪುರಂನ ದೇವಸ್ಥಾನದಲ್ಲಿ ತಂಗಿದ್ದಾಗ ಕಳ್ಳನೊಬ್ಬ ದೇವಸ್ಥಾನವನ್ನು ದರೋಡೆ ಮಾಡಲು ರಾತ್ರಿ 2 ಗಂಟೆಗೆ ಬಂದನು. ನಮ್ಮೊಂದಿಗಿದ್ದ ನಾಯಿ ಬೊಗಳುತ್ತಾ ಕಳ್ಳನನ್ನು ಹೆದರಿಸಿ ಓಡಿಸಿತು ಎಂದು ಬೆನ್ನಿ ಹೇಳಿದರು.

ಮೊದಲ ಬಾರಿಗೆ ಗುರುವಾಯೂರು ದೇವಾಲಯದ ಆನೆ ಶಿಬಿರಕ್ಕೆ ಮಹಿಳಾ ಮ್ಯಾನೇಜರ್ಮೊದಲ ಬಾರಿಗೆ ಗುರುವಾಯೂರು ದೇವಾಲಯದ ಆನೆ ಶಿಬಿರಕ್ಕೆ ಮಹಿಳಾ ಮ್ಯಾನೇಜರ್

ಬಿಹಾರದಲ್ಲಿದ್ದಾಗ ಯಾವುದೇ ವಸತಿ ಸಿಗಲಿಲ್ಲ

ಬಿಹಾರದಲ್ಲಿದ್ದಾಗ ಯಾವುದೇ ವಸತಿ ಸಿಗಲಿಲ್ಲ

ಅವರು ಕಾಶ್ಮೀರದ ಬನಿಹಾಲ್ ಪಾಸ್ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ತಮ್ಮ ಕಡೆಗೆ ವೇಗವಾಗಿ ಬಂದ ಲಾರಿಯಿಂದ ಪಾರಾದಾಗ ಸಾವಿನ ಸಮೀಪ ಅನುಭವವನ್ನು ಬೆನ್ನಿ ನೆನಪಿಸಿಕೊಂಡರು. ಒಂದು ದಿನ, ನಾವು ಬಿಹಾರದಲ್ಲಿದ್ದಾಗ ನಮಗೆ ಯಾವುದೇ ವಸತಿ ಸಿಗಲಿಲ್ಲ. ನಾವು ರಾತ್ರಿಯನ್ನು ಸ್ಮಶಾನದಲ್ಲಿ ಕಳೆಯಬೇಕಾಯಿತು ಎಂದು ಬೆನ್ನಿ ಪತ್ನಿ ಮೊಲ್ಲಿ ಹೇಳಿದರು. ಅವರು ರೆಸ್ಟೋರೆಂಟ್‌ಗಳು ಮತ್ತು ದಾಬಾಗಳಲ್ಲಿ ವಿವಿಧ ಆಹಾರಗಳನ್ನು ಆನಂದಿಸಿ ತಿಂದು ಆಂಧ್ರಪ್ರದೇಶದ ಆಂಧ್ರ ಭೋಜನಂನಲ್ಲಿ ಅವರು ರುಚಿ ನೋಡಿದ್ದು ದಂಪತಿ ನೆಚ್ಚಿನ ಆಯ್ಕೆಯಾಗಿದೆ ಎಂದರು.

ಗೋಲ್ಡನ್ ಟೆಂಪಲ್ ಅವರ ನೆಚ್ಚಿನ ಸ್ಥಳ

ಗೋಲ್ಡನ್ ಟೆಂಪಲ್ ಅವರ ನೆಚ್ಚಿನ ಸ್ಥಳ

ಮೋಲಿ ಮತ್ತು ಬೆನ್ನಿ ಅವರು 'ವಿಕ್ಕಿಸ್ ವಂಡರ್ ವರ್ಲ್ಡ್' ಎಂಬ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಚೆನ್ನೈನಲ್ಲಿರುವ ಅವರ ವಿದ್ಯಾರ್ಥಿಯು ಅವರಿಗೆ ಉಡುಗೊರೆಯಾಗಿ ನಾಯಿ ಮರಿ ನೀಡಿದ್ದರು. ಇದಕ್ಕೆ ಹೆಸರನ್ನು ಇಡಲಾಗಿದೆ. ಅವರು ತಮ್ಮ ದಂಡಯಾತ್ರೆಯನ್ನು ತಮ್ಮ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಭೇಟಿ ನೀಡಿದ ಎಲ್ಲಾ ಸ್ಥಳಗಳಲ್ಲಿ, ಪಂಜಾಬ್‌ನಲ್ಲಿರುವ ಗೋಲ್ಡನ್ ಟೆಂಪಲ್ ಅವರ ನೆಚ್ಚಿನದು ಎಂದು ಹೇಳಿದರು.

ಈಗ ಕೆಲಸ ಹುಡುಕಬೇಕಾಗಿದೆ

ಈಗ ಕೆಲಸ ಹುಡುಕಬೇಕಾಗಿದೆ

ಬೆನ್ನಿ ಆರು ಭಾಷೆಗಳನ್ನು ಮಾತನಾಡುತ್ತಾರೆ. ಅದು ಅವರ ಪ್ರಯಾಣವನ್ನು ಸುಲಭಗೊಳಿಸಿತು. ಮನೆಗೆ ಹಿಂತಿರುಗಿದ ದಂಪತಿ ಈಗ ಸಾಕಷ್ಟು ನೋಡಿ ಬಂದಿದ್ದಾರೆ. ನಾನು ಕೆಲಸವನ್ನು ಹುಡುಕಬೇಕಾಗಿದೆ ಮತ್ತು ನನ್ನ ಮನೆಯನ್ನು ಮರುನಿರ್ಮಾಣ ಮಾಡಬೇಕಾಗಿದೆ. ಅದು ಈಗ ಕೆಟ್ಟ ಸ್ಥಿತಿಯಲ್ಲಿದೆ ಎಂದು ಬೆನ್ನಿ ಹೇಳಿದರು. ಆರ್ಥಿಕವಾಗಿ ಬೆಂಬಲಿಸಲು ಸಿದ್ಧರಿರುವ ಪ್ರಾಯೋಜಕರು ಸಿಕ್ಕರೆ ಅವರು ಮತ್ತೆ ಪ್ರಯಾಣಿಸಲು ಸಿದ್ಧರಾಗಿದ್ದಾರೆ ಎಂದರು.

ಯುನಿವರ್ಸಲ್ ರೆಕಾರ್ಡ್ಸ್ ಫೋರಮ್ ಏಳು ತಿಂಗಳು ಮತ್ತು ಮೂರು ದಿನಗಳಲ್ಲಿ 17 ರಾಜ್ಯಗಳನ್ನು ಆವರಿಸಿದ್ದಕ್ಕಾಗಿ ಬೆನ್ನಿ ಮತ್ತು ಮೊಲ್ಲಿ ಅವರಿಗೆ ಭಾರತದಾದ್ಯಂತ ನಡೆದ ಮೊದಲ ಜೋಡಿಗಾಗಿ 2022ರ ರಾಷ್ಟ್ರೀಯ ದಾಖಲೆಯನ್ನು ನೀಡಿದೆ.

English summary
Benny Kottarathil, 53, and his wife Molly Benny, 46, from Pallikkathod, Kottayam, Kerala, have just returned from a trek across India on foot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X