ಕೊಳ್ಳೇಗಾಲ: ವೀಕೆಂಡ್ ಖುಷಿಯಲ್ಲಿದ್ದವರಿಗೆ ಕಾವೇರಿ ನದಿಯಲ್ಲಿ ಯಮ ದರ್ಶನ-ಮುಂದೇನಾಯ್ತು? ಇಲ್ಲಿದೆ ಮಾಹಿತಿ
ಚಾಮರಾಜನಗರ, ಆಗಸ್ಟ್, 24: ವೀಕೆಂಡ್ ಖುಷಿಯಲ್ಲಿದ್ದ ಪ್ರವಾಸಿಗರು ಅರ್ಧ ತಾಸು ಯಮ ದರ್ಶನ ಕಂಡು ಬಳಿಕ ಬದುಕಿದ ಬಡಜೀವ ಎಂಬಂತೆ ಪಾರಾದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಕಾವೇರಿ ನದಿಯಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನ ಜೆ.ಪಿ.ನಗರ ಮೂಲದ ಒಂದು ಮಗು ಸೇರಿ ಐವರು ಭರಚುಕ್ಕಿ ಜಲಪಾತಕ್ಕೆ ಬಂದಿದ್ದರು. ಅದಾದ ಬಳಿಕ, ಶಿವನಸಮುದ್ರ ಮಧ್ಯರಂಗನಾಥ ದೇವಸ್ಥಾನದ ಹಿಂಭಾಗದ ವಿದ್ಯುತ್ ಉತ್ಪಾದನೆ ಕೇಂದ್ರಕ್ಕೆ ನೀರು ಒದಗಿಸುವ ಸ್ಥಳದಲ್ಲಿ ಕುಳಿತಿದ್ದಾಗ ಯಮ ದರ್ಶನವನ್ನೇ ಕಂಡು ಪಾರಾಗಿ ಬಂದಿದ್ದಾರೆ.

ನೀರಿನಲ್ಲಿ ಆಟವಾಡಲು ಕುಟುಂಬ ಸಮೇತ ಜೀರೋ ಪಾಯಿಂಟ್‌ನ ನೀರು ಹರಿಯುವ ಬಂಡೆಗಳ ಮೇಲೆ ಹೋಗಿದ್ದಾರೆ. ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಶೇಖರಿಸಿದ್ದ ನೀರನ್ನು ದಿಢೀರನೇ ನದಿಗೆ ಬಿಟ್ಟ ಪರಿಣಾಮ ದಡಕ್ಕೆ ಬರಲಾಗದೇ ಬಂಡೆಗಳ ನಡುವೆ ಸಿಲುಕಿದ್ದಾರೆ.
ಅಪಾಯದ ಮುನ್ಸೂಚನೆ ಅರಿತ ತೆಪ್ಪ ನಡೆಸುವವರಾದ ಶಾಂತರಾಜು, ಭೈರನಾಯಕ, ಗೋವಿಂದನಾಯ್ಕ ಇತರರರು ತೆಪ್ಪ ಸಮೇತ ಧಾವಿಸಿ ನಡುನೀರಿನಲ್ಲಿ ಇದ್ದವರನ್ನು ದಡಕ್ಕೆ ಕರೆತಂದು ಪಾರು ಮಾಡಿದ್ದಾರೆ.
ಜಲಾಶಯದ ನೀರಿನ ಮಟ್ಟ ಎಷ್ಟಿದೆ?: ಈ ಬಾರಿ ಮುಂಗಾರು ಮಳೆ ಅಬ್ಬರಿಸಿ ಬೊಬ್ಬೆರೆದ ಹಿನ್ನೆಲೆ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಈಗಾಗಲೇ ಕೆಲವು ಜಲಾಶಯಗಳಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಲಾಗಿದೆ. ಇತ್ತ ಚಿತ್ರದುರ್ಗ ಜಿಲ್ಲೆಯ ಏಕೈಕ ರೈತರ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ನಿಧಾನವಾಗಿ 120 ಅಡಿ ಮುಟ್ಟುಹ ಹಂತ ತಲುಪಿದೆ.
ಇಂದಿನ ವರದಿಯಲ್ಲಿ ವಾಣಿ ವಿಲಾಸ ಜಲಾಶಯಕ್ಕೆ 2,195 ಕ್ಯೂಸೆಕ್ ಒಳಹರಿವು ನೀರು ಹರಿದುಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 117.70 ಅಡಿ ತಲುಪಿದೆ. ಡ್ಯಾಂನಿಂದ ಯಾವುದೇ ಹೊರಹರಿವು ಇಲ್ಲ. ಮತ್ತೊಂದು ಕಡೆ ಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಸುಮಾರು ಪ್ರತಿದಿನ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಡ್ಯಾಂ 120 ಅಡಿಯತ್ತ ತಲುಪಲಿದೆ.
ಮತ್ತೊಂದು ಕಡೆ ಎತ್ತಿನಹೊಳೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದೆ. ಎತ್ತಿನಹೊಳೆ, ಭದ್ರಾ ನೀರಿನ ಜೊತೆಗೆ ಹೆಚ್ಚು ಮಳೆ ನೀರು ಬಂದರೆ ಪ್ರಸಕ್ತ ಸಾಲಿನಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. 135 ಅಡಿ ಎತ್ತರ ಇರುವ ಡ್ಯಾಂ ಒಟ್ಟು 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ.
89 ವರ್ಷಗಳ ಬಳಿಕ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದು ನಿರ್ಮಿಸಿತ್ತು. ಸುಮಾರು ಒಂದು ತಿಂಗಳ ಕಾಲ ವೇದಾವತಿ ನದಿ ಹರಿದಿತ್ತು. ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿತ್ತು. 2023ರಲ್ಲಿ ಡ್ಯಾಂಗೆ ಯಾವುದೇ ಹೇಳಿಕೊಳ್ಳುವಂತಹ ನೀರು ಹರಿದು ಬಂದಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಇದೇ ರೀತಿ ಇನ್ನೂ ಒಂದೆರಡು ತಿಂಗಳಲ್ಲಿ ಹೆಚ್ಚು ಮಳೆ ಬಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದರೆ, ಜಲಾಶಯ ಈ ಬಾರಿ ಕೋಡಿ ಬೀಳುವ ಸಾಧ್ಯತೆ ಇರುತ್ತದೆ. ಸುಮಾರು 12 ಅಡಿ ನೀರು ಜಲಾಶಯಕ್ಕೆ ಹರಿದು ಬಂದರೇ ಜಲಾಶಯದ ಕೋಡಿ ಬೀಳುವುದು ಬಹುತೇಕ ನಿಶ್ಚಿತವಾಗಿದೆ.












Click it and Unblock the Notifications