ಮಂತ್ರಾಲಯ ಮಠ ಸೇವೆ, ವಸತಿ ವ್ಯವಸ್ಥೆಗೆ ಸಂಪರ್ಕ ಸಂಖ್ಯೆಗಳು
ಕರ್ನಾಟಕ, ಆಂಧ್ರ ಪ್ರದೇಶ ರಾಜ್ಯದ ಗಡಿಯಲ್ಲಿರುವ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕೋಟ್ಯಾಂತರ ಭಕ್ತರಿದ್ದಾರೆ. ಎರಡೂ ರಾಜ್ಯಗಳು ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳ ಸಾಮಾನ್ಯ ಜನರು, ಗಣ್ಯರು ಮಠಕ್ಕೆ ಆಗಮಿಸುತ್ತಾರೆ. ರಜೆ ದಿನಗಳು ಬಂತೆಂದರೆ ಸಾಕು ಭಕ್ತರು ಮಠಕ್ಕೆ ಪ್ರವಾಸ ಹೋಗುತ್ತಾರೆ.
ಮಠಕ್ಕೆ ಹೋಗುವ ಭಕ್ತರು ವಿವಿಧ ಸೇವೆಗಳನ್ನು ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಾರೆ. ದರ್ಶನದ ಸಮಯ, ಸೇವೆಗಳು, ವಾಸ್ತವ್ಯ ಸೇರಿದಂತೆ ಮಠದಲ್ಲಿ ಸೇವೆಗಳನ್ನು ಪಡೆಯಲು ಸಂಪರ್ಕ ಸಂಖ್ಯೆಗಳಿವೆ. ಭಕ್ತರು ಸದಾ ಮಾಹಿತಿ ನೀಡುವಂತೆ ಕೇಳುತ್ತಿದ್ದ ಕಾರಣ ಮಠದ ವಯಿಯಿಂದಲೇ ಮಾಹಿತಿಯನ್ನು ಕೊಡಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿ ಮಠ ಭಕ್ತರ ಅನುಕೂಲಕ್ಕಾಗಿ ಮಾಹಿತಿಯನ್ನು ಶೇರ್ ಮಾಡಿದೆ. ಯಾವ ಸೇವೆಗಳನ್ನು ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂದು ಮಾಹಿತಿ ಶೇರ್ ಮಾಡಿದೆ. ಪೋನ್ ನಂಬರ್ ಜೊತೆಗೆ ಇ-ಮೇಲ್ ಐಡಿಗಳನ್ನೂ ಸಹ ನೀಡಲಾಗಿದೆ. ಮಂತ್ರಾಲಯಕ್ಕೆ ಹೊರಡುವ ಮುನ್ನ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮ.
ಮಠದ ವಿವಿಧ ವಿಭಾಗಗಳು, ಸಾಮಾನ್ಯ ಮಾಹಿತಿ, ದಾನಿಗಳ ರೂಂ ಬುಕ್ಕಿಂಗ್ ವ್ಯವಸ್ಥೆ ಸೇರಿದಂತೆ ಇತರ ಎಲ್ಲಾ ಮಾಹಿತಿ ಪಡೆಯಲು ಪೋನ್ ನಂಬರ್‌ಗಳನ್ನು ಶೇರ್ ಮಾಡಲಾಗಿದೆ. ಮಂತ್ರಾಲಯಕ್ಕೆ ಹೊರಟಿರುವ ಭಕ್ತರು ಈ ನಂಬರ್‌ಗಳನ್ನು ಉಪಯೋಗಿಸಿಕೊಂಡು ಸಹಾಯ ಪಡೆಯಬಹುದಾಗಿದೆ.

ಮಂತ್ರಾಲಯ ಮಠದ ಸಂಪರ್ಕ ಸಂಖ್ಯೆಗಳು
ಮಂತ್ರಾಲಯ ಮಠದ NSRS ಕಚೇರಿ, ಮ್ಯಾನೇಜರ್, ಆಡಳಿತ ಕಚೇರಿ, ಪಿಆರ್‌ಒ, ಭದ್ರತಾ ವಿಭಾಗ, ಸಂಸ್ಕೃತ ವಿದ್ಯಾಪೀಠ, ಶ್ರೀ ಗುರು ಸಾರ್ವಭೌಮ ಮ್ಯಾಗ್‌ಜಿನ್, ಶ್ರೀ ಸುಜಯೇಂದ್ರ ಆರೋಗ್ಯ ಶಾಲಾ ಆಸ್ಪತ್ರೆ, ಗೋ ಶಾಲೆ, ಬುಕ್ ಸ್ಟಾಲ್‌ಗಳ ಸಂಪರ್ಕಕ್ಕೆ ಸಂಖ್ಯೆಗಳು.
ಸಾಮಾನ್ಯ ಮಾಹಿತಿ & ಖಾತೆ ಮಾಹಿತಿಗಾಗಿ 9493938563 ಸಂಖ್ಯೆಗೆ ಕರೆ ಮಾಡಬಹುದು. ಸಮಯ 9 ರಿಂದ 2 ಗಂಟೆ, 4 ರಿಂದ 8 ಗಂಟೆಗಳು.

ಸಾಮಾನ್ಯ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ
ಮಂತ್ರಾಲಯಕ್ಕೆ ಆಗಮಿಸುವ ಭಕ್ತರು ಆನ್‌ಲೈನ್ ರೂಂ ಬುಕ್ಕಿಂಗ್, ಆನ್‌ಲೈನ್ ಸೇವಾ ಬುಕ್ಕಿಂಗ್, ಆನ್‌ಲೈನ್ ಮೂಲಕ ದೇಣಿಗೆ ನೀಡಲು ಈ ವೆಬ್‌ಸೈಟ್‌ಗಳನ್ನು ಬಳಸಬಹುದಾಗಿದೆ.
ದೇವೆ ಮತ್ತು ದೇಣಿಗೆಯನ್ನು ಆನ್‌ಲೈನ್ ಮತ್ತು ಖುದ್ದಾಗಿ ಬುಕ್ ಮಾಡಬಹುದುದಾಗಿದೆ. ಸೇವಾ ಕೌಂಟರ್‌ಗಳಲ್ಲಿ ಸೇವೆಯ ಬುಕ್ಕಿಂಗ್ ತಕ್ಷಣ ಮಾಡಬಹುದಾಗಿದೆ ಎಂದು ಮಠ ಮಾಹಿತಿ ನೀಡಿದೆ.

ಸೇವೆ, ದೇಣಿಗೆ ಬುಕ್ಕಿಂಗ್ ಮಾಹಿತಿ
ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಆನ್‌ಲೈನ್ ಮೂಲಕ ದೇಣಿಗೆ ನೀಡಬಹುದು. ಸೇವೆ ಬುಕ್ ಮಾಡಬಹುದು. ಆದರೆ ಬುಕ್ಕಿಂಗ್ ಬಳಿಕ ಟ್ರಾನ್‌ಜೆಕ್ಷನ್ ಮಾಹಿತಿ, ಅಂಚೆ ವಿಳಾಸವನ್ನು ಫೋನ್ ನಂಬರ್ ಸಮೇತವಾಗಿ [email protected] ಗೆ ಕಳಿಸಬೇಕು ಅಥವ 9493938563 ನಂಬರ್‌ಗೆ ವಾಟ್ಸಪ್ ಮಾಡಬಹುದಾಗಿದೆ.

ವಾಟ್ಸಪ್ ಮೂಲಕ ಡೋನರ್ ರೂಂ ಬುಕ್ಕಿಂಗ್
ಸಿಆರ್‌ಒ 'ಎ' ವಿಂಗ್ 8904386590, ಸಿಆರ್‌ಒ 'ಬಿ' ವಿಂಗ್ 8951874590, ಸಿಆರ್‌ಒ 'ಸಿ' ವಿಂಗ್ 8660802864, ಆನ್‌ಲೈನ್ ಮಾಹಿತಿಗಾಗಿ 6361602944 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ರೂಂಗಳು ಆನ್‌ಲೈನ್ 325, ಆಫ್‌ಲೈನ್ 625. ರೂಂ ಬುಕ್ ಮಾಡುವ ಮುನ್ನ ಲಭ್ಯವಿದೆಯೇ ಎಂದು ತಿಳಿಯಲು ಚೆಕ್‌ಲಿಸ್ಟ್ ಡಿಸ್‌ಪ್ಲೇ ನೋಡಿ ಎಂದು ಮನವಿ ಮಾಡಲಾಗಿದೆ.












Click it and Unblock the Notifications