ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳ ಬಳಿಕ ಬೆಂಗಳೂರಿನಿಂದ ಈ ಮಾರ್ಗದಲ್ಲಿ ವಿಶೇಷ ರೈಲು ಸೇವೆ-ಮಾಹಿತಿ ತಿಳಿಯಿರಿ
ಬೆಂಗಳೂರು, ಮಾರ್ಚ್, 05: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಇನ್ನು ಇದೀಗ ಬೆಂಗಳೂರು ಹಾಗೂ ಈ ಮಾರ್ಗದ ನಡುವೆ ಇದೇ ದೇಶಕ್ಕೆ ಸ್ವಾತಂತ್ರ ಬಂದು ಬರೋಬ್ಬರಿ 76 ವರ್ಷಗಳ ಬಳಿಕ ಮೊದಲ ಬಾರಿಗೆ ವಿಶೇಷ ರೈಲು ಬಿಡಲು ನಿರ್ಧರಿಸಲಾಗಿದೆ. ಹಾಗಾದರೆ ಮಾಹಿತಿ ಇಲ್ಲಿದೆ ಗಮನಿಸಿ.
ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಕಲಬುರಗಿ ಮತ್ತು ಬೆಂಗಳೂರಿನ ಬೈಯಪ್ಪನಹಳ್ಳಿ ಸಮೀಪದ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ನಡುವೆ ಹೊಸ ಎಸ್‌ಎಂವಿಬಿ-ಕೆಎಲ್‌ಬಿಜಿ ವಾರದ ವಿಶೇಷ ರೈಲು ಸೇವೆ ಮಾರ್ಚ್ 9ರಿಂದ ಆರಂಭವಾಗಲಿದೆ ಎಂದು ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.

ದೇಶ ಸ್ವಾತಂತ್ರ್ಯಗೊಂಡ ಬರೊಬ್ಬರಿ 76 ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಗೆ ಬೆಂಗಳೂರು ಮಾರ್ಗವಾಗಿ ಮೊಟ್ಟ ಮೊದಲ ಮೀಸಲು ರೈಲು ಸೇವೆ ಆರಂಭಿಸಲಿದ್ದು, ಏಪ್ರಿಲ್ 5ರಿಂದ ವಾರದಲ್ಲಿ 3 ದಿನ ಸಂಚಾರ ನಡೆಸಲಿದೆ ಎಂದು ಉಮೇಶ್ ಜಾಧವ್ ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
At last after 76 years of India’s independence #Kalaburagi gets its first dedicated train to #Bengaluru
— Kalyana-Karnataka Railway Development (@rlyhydka) March 4, 2024
Thank you @UmeshJadhav_BJP @AshwiniVaishnaw @RailMinIndia
Request to make it daily and permanent train https://t.co/aRPd8D2Ln1
ಈ ನಿಲ್ದಾಣಗಳ ನಡುವೆ ಏಪ್ರಿಲ್ 5ರವರೆಗೆ ವಾರದಲ್ಲಿ ಒಂದು ದಿನ ಮಾತ್ರ ಎಸ್‌ಎಂವಿಬಿ-ಕೆಎಲ್‌ಬಿಜಿ ರೈಲು ಓಡಲಿದೆ. ಬಳಿಕ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಪ್ರತಿ ಶುಕ್ರವಾರ ಸರ್.ಎಂ.ವಿ ರೈಲ್ವೆ ಟರ್ಮಿನಲ್‌ನಿಂದ ರಾತ್ರಿ 11ಕ್ಕೆ ಹೊರಟ ರೈಲು, ಮಾರನೇ ದಿನ ಅಂದರೆ ಶನಿವಾರ ಬೆಳಗ್ಗೆ 9:5ಕ್ಕೆ ಕಲಬುರಗಿ ತಲುಪಲಿದೆ. ಮತ್ತೆ ಕಲಬುರಗಿಯಿಂದ ಶನಿವಾರ ಸಂಜೆ 5 ಗಂಟೆಗೆ ಹೊರಡಲಿದ್ದು, ಮರುದಿನ ಭಾನುವಾರ ಬೆಳಗ್ಗೆ 4:15ಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮಾರ್ಚ್ 9ರಿಂದ ಈ ನೂತನ ರೈಲು ಸಂಚಾರ ಆರಂಭ ಆಗಲಿದ್ದು, ಸಂಸದ ಡಾ.ಉಮೇಶ್ ಜಾಧವ್ ಕಲಬುರಗಿ ರೈಲು ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಲಬುರಗಿ-ಬೆಂಗಳೂರು ಮಧ್ಯೆ ನೂತನ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಇಲಾಖೆ ಇಂದು ಒಪ್ಪಿಗೆ ಸೂಚಿಸಿದ್ದು, ಏಪ್ರಿಲ್ 5ರವರೆಗೆ ವಾರದಲ್ಲಿ ಒಂದು ದಿನ ಮಾತ್ರ ಸಂಚರಿಸಲಿದೆ. ಬಳಿಕ ಮೂರು ದಿನ ಓಡಲಿದೆ ಎಂದು ತಿಳಿದುಬಂದಿದೆ.
ಮಾರ್ಚ್ 9ರಂದು ಕಲಬುರ್ಗಿಯಿಂದ ನೂತನ ರೈಲು ಸಂಚಾರ ಪ್ರಾರಂಭ.
— Dr. Umesh G Jadhav MP (Modi Ka Parivar) (@UmeshJadhav_BJP) March 4, 2024
ನವದೆಹಲಿಯಲ್ಲಿ ಇಂದು @RailMinIndia ಶ್ರೀ @AshwiniVaishnaw ಅವರನ್ನು ರೈಲ್ವೆ ಭವನದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಮಾರ್ಚ್ 9ರಂದು ಶನಿವಾರ ಸಾಯಂಕಾಲ 5 ಗಂಟೆಗೆ ಕಲಬುರ್ಗಿ- ಬೆಂಗಳೂರು ನೂತನ ರೈಲು ಸಂಚಾರ ಶುಭಾರಂಭಗೊಳ್ಳಲಿದೆ. pic.twitter.com/10zBiRKDGj
ಇನ್ನು ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮಾರ್ಚ್ 4ರಂದು ನವದೆಹಲಿಯಲ್ಲಿ ಮನವಿ ಸಲ್ಲಿಸಿದ್ದು, ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಏಪ್ರಿಲ್ 5ರಿಂದ ವಾರದಲ್ಲಿ ಮೂರು ದಿನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications