Southern Railway: ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೈಸ್ಪೀಡ್‌ ರೈಲು, ಯಾವಾಗ-ಮಾಹಿತಿ ಇಲ್ಲಿದೆ

ಬೆಂಗಳೂರು, ಫೆಬ್ರವರಿ, 02: ದಕ್ಷಿಣ ರೈಲ್ವೆಯು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಗಂಟೆಗೆ 200 ಕಿಲೋ ಮೀಟರ್‌ ವೇಗದಲ್ಲಿ ಚಲಿಸುವ ಹೈಸ್ಪೀಡ್‌ ರೈಲುಗಳನ್ನು ಓಡಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಜನರಲ್ ಮ್ಯಾನೇಜರ್ ಆರ್‌ಎನ್ ಸಿಂಗ್ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, "ನಾವು ಈ ಮಾರ್ಗದಲ್ಲಿ ಸೆಮಿ-ಹೈಸ್ಪೀಡ್ ರೈಲುಗಳನ್ನು ನೋಡುತ್ತಿದ್ದೇವೆ. ಅವು ಗಂಟೆಗೆ 200 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತವೆ. ಇನ್ನು ಹೈಸ್ಪೀಡ್ ಲೈನ್ ಅನ್ನು ರೈಲ್ವೆಗೆ ಜೋಡಿಸಲು ಸಮೀಕ್ಷೆ ನಡೆಯುತ್ತಿದೆ," ಎಂದು ಅವರು ಹೇಳಿದರು .

Southern Railway: High speed train on Chennai-Bengaluru-Mysore route, when?, know details

ಇದೇ ಜೋಡಣೆಯನ್ನು ಟ್ರ್ಯಾಕ್‌ಗಳನ್ನು ಬಲಪಡಿಸುವ ಮೂಲಕ ಬಳಸಬಹುದು. ಕೆಲವು ಸ್ಟ್ರೆಚ್‌ಗಳಲ್ಲಿ ನಾವು ಹೊಸ ಟ್ರ್ಯಾಕ್‌ಗಳನ್ನು ಹಾಕಬೇಕಾಗಬಹುದು. ಈ ಬಗ್ಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಮಾರ್ಚ್‌ನೊಳಗೆ ಇದು ಸಿದ್ಧವಾಗಲಿದೆ ಎಂದು ಹೇಳಿದರು.

ಈ ಮಾರ್ಗದಲ್ಲಿ ಹೈಸ್ಪೀಡ್ ಲೈನ್ ಓಡಿಸಲು ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಇದರಿಂದ ರೈಲುಗಳು ಗಂಟೆಗೆ 250 ಕಿಲೋ ಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಆದರೆ ಅದಕ್ಕೂ ಮೊದಲು, ಅಸ್ತಿತ್ವದಲ್ಲಿರುವ ಅಲೈನ್‌ಮೆಂಟ್‌ನಲ್ಲಿ ಸೆಮಿ-ಹೈಸ್ಪೀಡ್ ರೈಲುಗಳನ್ನು ಈ ಮಾರ್ಗದಲ್ಲಿ ಪರಿಚಯಿಸಲು ರೈಲ್ವೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ರೈಲ್ವೆ ಅಧಿಕಾರಿಯದ್ದೇ ದಾಖಲೆಗಳ ಕಳವು: ರೈಲುಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಷ್ಟು ದಿನ ಪ್ರಯಾಣಕರ ಲಗೇಜ್‌, ವಸ್ತಗಳು ಕಳ್ಳತನ ಆಗಿರುವ ಬಗ್ಗೆ ವರದಿ ಆಗುತ್ತಿದ್ದವು. ಆದರೆ ಇದೀಗ ರೈಲ್ವೇ ಅಧಿಕಾರಿಯದ್ದೇ ಲಗೇಟ್‌ ಕಳವು ಆದ ಘಟನೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ. ಇದಕ್ಕೆ ಪ್ರಯಾಣಿಕರ ಪ್ರತಿಕ್ರಿಯೆಗಳು ಹೇಗಿವೆ ಎಂದು ಇಲ್ಲಿ ತಿಳಿಯಿರಿ.

ಅಪರಿಚಿತ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರು ವಿಭಾಗದ ಮಹಿಳಾ ಉನ್ನತ ರೈಲ್ವೆ ಅಧಿಕಾರಿ ಮತ್ತು ಅವರ ಸಹ ಪ್ರಯಾಣಿಕರ ಲಗೇಜ್ ಅನ್ನು ಕಳವು ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೇ ಈ ಪರಿಸ್ಥಿತಿ ಉಂಟಾದರೆ ಸಾಮಾನ್ಯ ಪ್ರಯಾಣಿಕರ ಗತಿಯೇನು ಎನ್ನುವ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಎಸಿ ಫಸ್ಟ್ ಕ್ಲಾಸ್ ಕಂಪಾರ್ಟ್‌ಮೆಂಟ್‌ನ ಕ್ಯಾಬಿನ್‌ನಲ್ಲಿ ಮಹಿಳಾ ಅಧಿಕಾರಿ ಪ್ರಯಾಣ ಮಾಡುತ್ತಿದ್ದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ಅವರ ಕಳವಾದ ಲಗೇಜ್‌ನಲ್ಲಿ ಇಲಾಖೆಯ ಕಡತಗಳೂ ಇವೆ ಎಂದು ಮೂಲಗಳಿಂದ ತಿಳಿದುಬಂದಿದೆ.

2023ರ ಜನವರಿ 24ರಂದು ರಾತ್ರಿ 11 ಗಂಟೆಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರೈಲಿಗೆ ಹತ್ತಿದ್ದರು. ಅವರ ಸೀಟುಗಳು ಹೆಚ್ 1 ಕೋಚ್‌ನಲ್ಲಿ ನಾಲ್ಕು ಬರ್ತ್‌ಗಳಿರುವ ಕ್ಯಾಬಿನ್‌ನಲ್ಲಿದ್ದವು. ಮರುದಿನ ಬೆಳಗ್ಗೆ 5:20ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಲು ಮುಂದಾದಾಗ ತಮ್ಮ ಸಾಮಾನು ನಾಪತ್ತೆ ಆಗಿರುವುದು ಗೊತ್ತಾಗಿದೆ. ಹುಬ್ಬಳ್ಳಿಯ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 379 ಅಡಿಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.

ಆ ಬೋಗಿಯಲ್ಲಿದ್ದ ನಾಲ್ವರು ಪ್ರಯಾಣಿಕರಲ್ಲಿ ಇಬ್ಬರ ವಸ್ತುಗಳನ್ನು ಮಾತ್ರ ಕಳವು ಮಾಡಲಾಗಿದೆ. ರೈಲ್ವೇ ಕಡತಗಳನ್ನು ಒಳಗೊಂಡ ಎಡಿಎಂಆರ್‌ನ ಅಲೆನ್ ಸೋಲಿ ಟ್ರಾಲಿ ಸೂಟ್‌ ಕೇಸ್ ಅನ್ನು ಕಳವು ಮಾಡಲಾಗಿದೆ. ಅಲ್ಲದೆ ಅಧಿಕಾರಿಯ ಹೈಡಿಸೈನ್ ಕೈಚೀಲ ಮತ್ತು 4 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳನ್ನು ಕೂಡ ಕಳವು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾದ್ದರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+