SWR: ನವದೆಹಲಿ-ಬೆಂಗಳೂರು ನಡುವೆ ಸಾಪ್ತಾಹಿಕ ಪಾರ್ಸೆಲ್ ರೈಲು ಸೇವೆ-ದಿನಾಂಕ, ಸಮಯಗಳ ವಿವರ ತಿಳಿಯಿರಿ

ಭಾರತೀಯ ರೈಲ್ವೆಯು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಈ ಬದಲಾವಣೆಗಳನ್ನು ಪ್ರಯಾಣಿಕರ ವಿಭಾಗ ಹಾಗೂ ಗೂಡ್ಸ್‌ ವಿಭಾಗಗಳಲ್ಲೂ ಕಾಣಬಹುದಾಗಿದೆ. ಇನ್ನು ರಾಪಿಡ್ ಕಾರ್ಗೋ ಎಕ್ಸ್‌ಪ್ರೆಸ್, ಸಾಪ್ತಾಹಿಕ ಪಾರ್ಸೆಲ್ ಎಕ್ಸ್‌ಪ್ರೆಸ್ ಸೇವಾ ರೈಲು ಬೆಂಗಳೂರಿನ ಯಶವಂತಪುರ ಮತ್ತು ದೆಹಲಿಯ ತುಘಲಕಾಬಾದ್ ನಡುವೆ ಓಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಸೇವೆಯ ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.

South Western Railway: Weekly Parcel Train Service between New Delhi-Bengaluru

ನೈಋತ್ಯ ರೈಲ್ವೆ ಪ್ರಕಾರ, ತುಘಲಕಾಬಾದ್‌ನಿಂದ ಮೊದಲ ಸೇವೆಯು ಫೆಬ್ರವರಿ 27 ರಂದು 11:15ಕ್ಕೆ ಪ್ರಾರಂಭವಾಗಲಿದ್ದು, ಫೆಬ್ರವರಿ 29ರಂದು ಬೆಳಗ್ಗೆ 11:30ಕ್ಕೆ ಯಶವಂತಪುರವನ್ನು ತಲುಪುತ್ತದೆ. ಬಳಿಕ ಹಿಂತಿರುಗುವ ದಿಕ್ಕಿನಲ್ಲಿ, ಪಾರ್ಸೆಲ್ ರೈಲು ಮಾರ್ಚ್ 3ರಂದು ರಾತ್ರಿ 12:10ಕ್ಕೆ ಯಶವಂತಪುರದಿಂದ ಹೊರಟು ಮಾರ್ಚ್ 5ರಂದು ರಾತ್ರಿ 12:10ಕ್ಕೆ ತುಘಲಕಾಬಾದ್ ತಲುಪುತ್ತದೆ.

ಕಾಶ್ಮೀರ-ಕನ್ಯಾಕುಮಾರಿ ರೈಲು ಸಂಪರ್ಕ ಯಾವಾಗ?: ದೇಶದ ಪ್ರಮುಖ ನಗರಗಳಿಗೆ ರೈಲು ಸೇವೆಗಳು ಆರಂಭವಾಗುತ್ತಲೇ ಇವೆ. ಹಾಗೆಯೇ ಕಾಶ್ಮೀರ-ಕನ್ಯಾಕುಮಾರಿ ನಡುವೆ ರೈಲು ಸಂಪರ್ಕ ಕಲ್ಪಿಸುವ ದಿನ ದೂರ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಉಧಂಪುರ-ಶ್ರೀನಗರ-ಬಾರಾಮುಲ್ಲಾ (ಯುಎಸ್‌ಬಿಆರ್‌ಎಲ್‌) ನಡುವಿನ 41.8 ಕಿಲೋ ಮೀಟರ್‌ ಉದ್ದದ ರೈಲು ಸಂಪರ್ಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು 272 ಕಿಲೋ ಮೀಟರ್‌ ಉದ್ದದ ಯುಎಸ್‌ಬಿಆರ್‌ಎಲ್‌ ರೈಲು ಮಾರ್ಗ ಯೋಜನೆಯಯನ್ನು ವಿವಿಧ ಹಂತಗಳಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು 2009ರ ಅಕ್ಟೋಬರ್‌ನಲ್ಲಿ 118 ಕಿಲೀ ಮೀಟರ್‌ ಉದ್ದದ ಖಾಜಿಗುಂಡ್‌-ಬಾಲಾಮುಲ್ಲಾ ಮಾರ್ಗವನ್ನು, 2013ರ ಜೂನ್‌ನಲ್ಲಿ 18 ಕಿಲೀ ಮೀಟರ್‌ ಉದ್ದದ ಬಾರಾಮುಲ್ಲಾ-ಖಾಜಿಗುಂಡ್‌ ಮಾರ್ಗವನ್ನು ಮತ್ತು 2014ರ ಜುಲೈನಲ್ಲಿ 25 ಕಿಲೋ ಮೀಟರ್‌ ಉಧಂಪುರ-ಕತ್ರಾ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಏಕಕಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಹಿಂದೆ ದೇಶದ ಇತರೆ ಭಾಗಗಳು ಅಭಿವೃದ್ಧಿಯತ್ತ ಸಾಗುತ್ತಿದ್ದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅಭಿವೃದ್ಧಿ ಕಾಮಾಗಾರಿಗಳ ಲಾಭ ಸಿಗುತ್ತಿರಲಿಲ್ಲ ಅಥವಾ ಈ ಪ್ರದೇಶದಲ್ಲಿ ತುಂಬಾ ವಿಳಂಬವಾಗಿ ಕಾಮಗಾರಿಗಳು ನಡೆಯುತ್ತಿದ್ದವು ಎಂದು ಹೇಳಿದರು.

ಅಲ್ಲದೆ ಇದೀಗ ದೇಶದಾದ್ಯಂತ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಜಮ್ಮು ಮತ್ತು ಕಾಶ್ಮೀರವೂ ಹಿಂದೆ ಉಳಿದಿಲ್ಲ. ಇಂದು ಜಮ್ಮು ಮತ್ತು ಕಾಶ್ಮೀರ ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯ ನಡೆಯುತ್ತಿದೆ ಅಂತಲೂ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+