South Western Railway: ನವೆಂಬರ್‌ 1ರಿಂದ ಈ ಮಾರ್ಗಗಳ ರೈಲುಗಳಿಗೆ ಹೊಸ ವೇಳಾಪಟ್ಟಿ , ಮಾಹಿತಿ, ವಿವರ ಇಲ್ಲಿದೆ

South Western Railway: ಸಾರಿಗೆ ವಿಭಾಗಗಲ್ಲಿಯೇ ಭಾರತೀಯ ರೈಲ್ವೆ ಅತೀ ದೊಡ್ಡ ಸಾರಿಗೆಯಾಗಿದ್ದು, ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿಯೇ ಪ್ರಯಾಣ ಮಾಡುತ್ತಾರೆ. ಇನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ಬದಲಾವಣೆ ಮಾಡಿ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ನವೆಂಬರ್ ತಿಂಗಳಿನಿಂದ ಈ ಮಾರ್ಗದ ರೈಲುಗಳಿಗೆ ಹೊಸ ವೇಳಪಟ್ಟಿ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಕೊಂಕಣ ರೈಲ್ವೆ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳಿಗೆ ಮಾನ್ಸೂನೇತರ ವೇಳಾಪಟ್ಟಿ ಪ್ರಕಟ ಮಾಡಿದೆ. ಅವುಗಳ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ನವೆಂಬರ್ 1, 2024ರಿಂದ ಹೊಸ ವೇಳಾಪಟ್ಟಿ ಅನ್ವಯ ಆಗಲಿದ್ದು, ಈ ರೈಲುಗಳು ಮಾನ್ಸೂನ್ ಅಲ್ಲದ ವೇಳಾಪಟ್ಟಿಯ ಅನ್ವಯ ಕಾರ್ಯನಿರ್ವಹಿಸಲಿ ಎಂದು ತಿಳಿದುಬಂದಿದೆ.

South Western Railway New time table for these routes trains from November 1 know details

ಯಾವೆಲ್ಲ ರೈಲುಗಳಿಗೆ ಹೊಸ ವೇಳಾಪಟ್ಟಿ?

1. ರೈಲು ಸಂಖ್ಯೆ 12741/42 ವಾಸ್ಕೋ ಡ ಗಾಮಾ: ಪಾಟ್ನಾ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್‌
2. ರೈಲು ಸಂಖ್ಯೆ 11097/98 ಪುಣೆ -ಎರ್ನಾಕುಲಂ -ಪುಣೆ ಪೂರ್ಣಾ ಸಾಪ್ತಾಹಿಕ ಎಕ್ಸ್‌ಪ್ರೆಸ್‌
3. ರೈಲು ಸಂಖ್ಯೆ 16595/96 KSR ಬೆಂಗಳೂರು -ಕಾರವಾರ -KSR ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್‌
4. ರೈಲು ಸಂಖ್ಯೆ 16515/16 ಯಶವಂತಪುರ - ಕಾರವಾರ - ಯಶವಂತಪುರ ಟ್ರೈ - ಸಾಪ್ತಾಹಿಕ ಎಕ್ಸ್‌ಪ್ರೆಸ್‌
5. ರೈಲು ಸಂಖ್ಯೆ 16585/86 SMVT ಬೆಂಗಳೂರು - ಮುರ್ಡೇಶ್ವರ - SMVT ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್‌

ಸಮಯಗಳ ವಿವರ ಈ ಲಿಂಕ್‌ನಲ್ಲಿದೆ: ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆರಂಭಿಸುವ ಮೊದಲು ಮಾನ್ಸೂನ್ ಅಲ್ಲದ ರೈಲು ಸಮಯವನ್ನು ಗಮನಿಸಲು ಕೊಂಕಣ ರೈಲ್ವೆ ಸಲಹೆ ನೀಡಿದೆ. ಈ ರೈಲುಗಳ ಮಾನ್ಸೂನ್ ಸಮಯದ ವಿವರಗಳಿಗಾಗಿ, https://swr.indianrailways.gov.in/view_detail.jsp?lang=0&id=0,4,268&dcd=7770&did=172415294788150B6C28150B6C2C262AEEF%20quiry.indianrail.gov.in. ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಅಲ್ಲದೆ ಪ್ರಯಾಣಿಕರು ಈ ರೈಲಿನ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಅಂತಲೂ ತಿಳಿಸಿದೆ.

ಮೆಮು ರೈಲು ಆರಂಭ: ತುಮಕೂರು ನಗರದ ರೈಲು ನಿಲ್ದಾಣದಿಂದ ಶೀಘ್ರದಲ್ಲೇ ಹೊಸದಾಗಿ ಮೆಮು ರೈಲು ಸಂಚಾರ ಶುರು ಅಗಲಿದೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ. ಮಾಹಿತಿ ಇಲ್ಲಿದೆ ತಿಳಿಯಿರಿ.

ರಾಜ್ಯದಲ್ಲಿ ಹೊಸದಾಗಿ ಮೂರು ಮೆಮು ರೈಲು ಆರಂಭ ಆಗಲಿದ್ದು, ಇದರಲ್ಲಿ ಒಂದು ತುಮಕೂರು ನಿಲ್ದಾಣದಿಂದ ಆರಂಭ ಆಗಲಿದೆ. ನಗರದಿಂದ ಬೆಳಗ್ಗೆ 9 ಗಂಟೆಗೆ ಹೊರಟು 10ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದೆ. ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಟು ಸಂಜೆ 7ಕ್ಕೆ ನಗರಕ್ಕೆ ಆಗಮಿಸಲಿದ್ದು, ಇದರಲ್ಲಿ 1,500 ಜನ ಪ್ರಯಾಣ ಮಾಡಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೈಲ್ವೆ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಬೆಂಗಳೂರು-ತುಮಕೂರು-ಅರಸಿಕೆರೆ ಮಾರ್ಗದಲ್ಲಿ 220 ಕೋಟಿ ರೂಪಾಯಿ ವೆಚ್ಚದಲ್ಲಿ ಆಟೋಮೆಟಿಕ್ ರೈಲ್ವೆ ಸಿಗ್ನಲ್ ಅಳವಡಿಕೆ ಮಾಡುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಬೆಂಗಳೂರು-ತುಮಕೂರು ಭಾಗದ ಮುಂದಿನ 30 ವರ್ಷಗಳ ಬೆಳವಣಿಗೆ ದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಇದರಿಂದ ರೈಲುಗಳ ಸಂಚಾರ ಸುಲಭ ಆಗುತ್ತದೆ ಎಂದು ಹೇಳಿದರು.

ಅಮೃತ್‌ ಭಾರತ್ ಯೋಜನೆಯಡಿ ರಾಜ್ಯದ 61 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ತುಮಕೂರಿನ ರೈಲು ನಿಲ್ದಾಣದ ಅಭಿವೃದ್ಧಿಗೆ 118 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಗುಬ್ಬಿ ನಿಲ್ದಾಣದ ಆಧುನೀಕರಣಕ್ಕೆ 7.50 ಕೋಟಿ ರೂಪಾಯಿ, ಹಾಸನದ ಶ್ರವಣಬೆಳಗೊಳ ನಿಲ್ದಾಣಕ್ಕೆ 9 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+