10 ರೈಲುಗಳ ಸೇವೆ ವಿಸ್ತರಿಸಿದ ನೈಋತ್ಯ ರೈಲ್ವೆ, ಪಟ್ಟಿ

10 ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.

ಬೆಂಗಳೂರು, ಮಾರ್ಚ್ 08; ಪ್ರಯಾಣಿಕರಿಂದ ಭಾರೀ ಬೇಡಿಕೆ ಇರುವ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ 10 ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು, ಹುಬ್ಬಳ್ಳಿ, ವಿಜಯಪುರ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಈ ರೈಲುಗಳು ಸಂಚಾರ ನಡೆಸುತ್ತವೆ. ರೈಲುಗಳ ಸೇವೆ ವಿಸ್ತರಣೆಯಿಂದಾಗಿ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ 10 ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ. ಆದರೆ ಈ ಮೇಲಿನ ರೈಲುಗಳ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ. ರೈಲು ಪ್ರಯಾಣ ಮಾಡುವ ಜನರು ಯಾವ-ಯಾವ ರೈಲುಗಳ ಸೇವೆ ವಿಸ್ತರಣೆಯಾಗಿದೆ ಎಂಬ ಮಾಹಿತಿ ಇದೆ.

South Western Railway Extends 10 Special Express Train Services List

ರೈಲು ಸಂಖ್ಯೆ 06243 ಕೆ. ಎಸ್. ಆರ್. ಬೆಂಗಳೂರು-ಹೊಸಪೇಟೆ ಪ್ರತಿದಿನದ ಪ್ಯಾಸೆಂಜರ್ ವಿಶೇಷ ರೈಲು ಕೆ. ಎಸ್. ಆರ್ ಬೆಂಗಳೂರಿನಿಂದ ಮಾರ್ಚ್ 12, 2023 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಸೆಪ್ಟೆಂಬರ್ 13, 2023 ರವರೆಗೆ ವಿಸ್ತರಿಸಲಾಗಿದೆ. ರೈಲು ಸಂಖ್ಯೆ 06244 ಹೊಸಪೇಟೆ-ಕೆ. ಎಸ್. ಆರ್. ಬೆಂಗಳೂರು ಪ್ರತಿದಿನದ ಪ್ಯಾಸೆಂಜರ್ ವಿಶೇಷ ರೈಲು ಹೊಸಪೇಟೆ ನಿಲ್ದಾಣದಿಂದ ಮಾರ್ಚ್ 13, 2023 ರವರೆಗೆ ಓಡಿಸಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಸೆಪ್ಟೆಂಬರ್ 14, 2023 ರವರೆಗೆ ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 06563 ಯಶವಂತಪುರ-ಮುರ್ಡೇಶ್ವರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಯಶವಂತಪುರ ನಿಲ್ದಾಣದಿಂದ ಮಾರ್ಚ್ 25, 2023 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು. ಈ ರೈಲು ಸೇವೆಯನ್ನು ಏಪ್ರಿಲ್ 1 ರಿಂದ ಜೂನ್ 24, 2023 ರವರೆಗೆ 13 ಟ್ರಿಪ್‌ಗಳಿಗೆ ವಿಸ್ತರಿಸಲಾಗುತ್ತಿದೆ. ರೈಲು ಸಂಖ್ಯೆ 06564 ಮುರ್ಡೇಶ್ವರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಮುರ್ಡೇಶ್ವರದಿಂದ ಮಾರ್ಚ್ 26, 2023ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಏಪ್ರಿಲ್ 2 ರಿಂದ ಜೂನ್ 25, 2023 ರವರೆಗೆ 13 ಟ್ರಿಪ್‌ಗಳಿಗೆ ವಿಸ್ತರಿಸಲಾಗುತ್ತದೆ.

ರೈಲು ಸಂಖ್ಯೆ 07355 ಎಸ್. ಎಸ್. ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್. ಎಸ್. ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಮಾರ್ಚ್ 25, 2023ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಏಪ್ರಿಲ್ 1, 2023 ರಿಂದ ಜೂನ್ 24, 2023 ರವರೆಗೆ 13 ಟ್ರಿಪ್‌ಗಳಿಗೆ ವಿಸ್ತರಿಸಲಾಗುತ್ತದೆ. ರೈಲು ಸಂಖ್ಯೆ 07356 ರಾಮೇಶ್ವರಂ ಎಸ್. ಎಸ್. ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ರಾಮೇಶ್ವರಂನಿಂದ ಮಾರ್ಚ್ 26, 2023 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಏಪ್ರಿಲ್ 2, 2023 ರಿಂದ ಜೂನ್ 25, 2023 ರವರೆಗೆ 12 ಟ್ರಿಪ್‌ಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ.

ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಪ್ರತಿದಿನದ ಎಕ್ಸ್‌ಪ್ರೆಸ್ ವಿಶೇಷ ರೈಲು ಯಶವಂತಪುರ ನಿಲ್ದಾಣದಿಂದ ಮಾರ್ಚ್ 31, 2023 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು. ಈ ರೈಲು ಸೇವೆಯನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ. ರೈಲು ಸಂಖ್ಯೆ 06546 ವಿಜಯಪುರ-ಯಶವಂತಪುರ ಪ್ರತಿದಿನದ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರ ನಿಲ್ದಾಣದಿಂದ ಏಪ್ರಿಲ್ 1, 2023 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಜುಲೈ 1, 2023ರ ತನಕ ವಿಸ್ತರಣೆ ಮಾಡಲಾಗಿದೆ.

rail

ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರ ನಿಲ್ದಾಣದಿಂದ ಮಾರ್ಚ್ 31, 2023 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು, ಈ ರೈಲು ಸೇವೆಯನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗುತ್ತದೆ. ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಪ್ರತಿದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಏಪ್ರಿಲ್ 1, 2023 ರವರೆಗೆ ಓಡಿಸಲು ಈ ಮೊದಲು ತಿಳಿಸಲಾಗಿತ್ತು. ಈ ರೈಲು ಸೇವೆಯನ್ನು ಜುಲೈ 1, 2023 ರವರೆಗೆ ವಿಸ್ತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+