ಶಿವಮೊಗ್ಗ-ತಾಳಗುಪ್ಪ ಸೇರಿ ಹಲವು ರೈಲು ರದ್ದು, ಪಟ್ಟಿ
ಬೆಂಗಳೂರು, ಜುಲೈ 06; ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಿದೆ. ಕೆಲವು ರೈಲುಗಳ ಸೇವೆ ಭಾಗಶಃ ರದ್ದುಗೊಳಿಸಿದೆ. ಕೆಲವು ರೈಲಿಗೆ ಪ್ರಾಯೋಗಿಕ ನಿಲುಗಡೆಗಳನ್ನು ನೀಡಿದೆ. ಜುಲೈ 7ರಿಂದಲೇ ಈ ಆದೇಶ ಜಾರಿಗೆ ಬರಲಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ರೈಲಿನಲ್ಲಿ ಸಂಚಾರ ನಡೆಸುವ ಜನರು ಬದಲಾವಣೆಗಳ ಬಗ್ಗೆ ಮಾಹಿತಿ ಪಡೆದಿರುವುದು ಉತ್ತಮ. ಕೆಲವು ಕಾಮಗಾರಿಗಳ ಸಲುವಾಗಿ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ರೈಲು ಸಂಖ್ಯೆ 07349/ 07350 ಶಿವಮೊಗ್ಗ ಟೌನ್- ತಾಳಗುಪ್ಪ- ಶಿವಮೊಗ್ಗ ಟೌನ್ ಪ್ಯಾಸೆಂಜರ್ ರೈಲುಗಳನ್ನು ಜುಲೈ 7ರಂದು ಇಂಜಿನಿಯರಿಂಗ್ ಕಾಮಗಾರಿ ಸಲುವಾಗಿ 11.30 ರಿಂದ ಮಧ್ಯಾಹ್ನ 3.30ರವರೆಗೆ ಶಿವಮೊಗ್ಗ ಮತ್ತು ಕುಂಸಿ ವಿಭಾಗಗಳ ನಡುವೆ ರದ್ದುಗೊಳಿಸಲಾಗುತ್ತಿದೆ.
ರೈಲು ಭಾಗಶಃ ರದ್ದು; ಮಿಲವಿಲ್ಟನ್-ಟುಟಿಕೋರಿನ್ ವಿಭಾಗದ ನಡುವಿನ ಜೋಡಿ ಮಾರ್ಗದ ಕಾಮಗಾರಿಯ ಸಲುವಾಗಿ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲು ದಕ್ಷಿಣ ರೈಲ್ವೆಯು ಸೂಚನೆ ನೀಡಿದೆ. ಆ ರೈಲುಗಳ ಪಟ್ಟಿ ಹೀಗಿದೆ.
ಜುಲೈ 10ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16236 ಮೈಸೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ ರೈಲನ್ನು ವಂಚಿ ಮಣಿಯಾಚಿ- ಟುಟಿಕೋರಿನ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಜುಲೈ 11ರಂದು ಟುಟಿಕೋರಿನ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16235 ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಟುಟಿಕೋರಿನ್-ವಂಚಿ ಮಣಿಯಾಚಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಪ್ರಾಯೋಗಿಕ ನಿಲುಗಡೆ; ರೈಲ್ವೆ ಇಲಾಖೆಯು ಪ್ರಾಯೋಗಿಕ ಆಧಾರದ ಮೇಲೆ ಈ ಕೆಳಗಿನ ರೈಲು ನಿಲ್ದಾಣಗಳಿಗೆ ನಿಲುಗಡೆ ಮಾಡಲು ದಕ್ಷಿಣ ಮಧ್ಯ ರೈಲ್ವೆಯು ಸೂಚನೆ ನೀಡಿದೆ. ರೈಲುಗಳ ಪಟ್ಟಿ ಇಲ್ಲಿದೆ.
* ಜುಲೈ 5 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12295 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ದಾನಪುರ ಸಂಘಮಿತ್ರ ಎಕ್ಸ್‌ಪ್ರೆಸ್ ರೈಲು ರಾಮಗುಂಡಂ ನಿಲ್ದಾಣಕ್ಕೆ(2.9/ 2.10AM) ಆಗಮಿಸಿ, ನಿರ್ಗಮಿಸಲಿದೆ.
* ಜುಲೈ 7 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12578 ಮೈಸೂರು ದರ್ಭಾಂಗ ಭಾಗಮತ್ ಎಕ್ಸ್‌ಪ್ರೆಸ್ ರೈಲು ರಾಮಗುಂಡಂ ನಿಲ್ದಾಣಕ್ಕೆ (6.44/ 6.45AM) ಆಗಮಿಸಿ/ ನಿರ್ಗಮಿಸಲಿದೆ.
* ಜುಲೈ 6 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17212 ಯಶವಂತಪುರ-ಮಚಿಲಿಪಟ್ಟಣಂ ಎಕ್ಸ್‌ಪ್ರೆಸ್ ರೈಲು ಕುಂಬಮ್ ನಿಲ್ದಾಣಕ್ಕೆ (4/5AM) ಆಗಮಿಸಿ/ ನಿರ್ಗಮಿಸಲಿದೆ.
* ಜುಲೈ 7 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16569 ಯಶವಂತಪುರ-ಕಾಚಿಗುಡಾ ಎಕ್ಸ್‌ಪ್ರೆಸ್ ರೈಲು ಶ್ರೀರಾಮನಗರ, ಜಡ್ಡರ್ಲಾ ಮತ್ತು ಶಾದ್‌ನಗರ ನಿಲ್ದಾಣಗಳಿಗೆ ಕ್ರಮವಾಗಿ (11.44/ 11.46PM, 01.17/ 1.18AM ಮತ್ತು 1.43/ 1/44 AM) ಆಗಮಿಸಿ/ ನಿರ್ಗಮಿಸಲಿದೆ.
* ಜುಲೈ 5 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17604 ಯಶವಂತಪುರ - ಕಾಚಿಗುಡಾ ಎಕ್ಸ್‌ಪ್ರೆಸ್ ರೈಲು ಶಾದ್‌ನಗರ ನಿಲ್ದಾಣಕ್ಕೆ (3.25/ 3.26 AM) ಆಗಮಿಸಿ/ ನಿರ್ಗಮಿಸಲಿದೆ.
ವಿಶೇಷ ರೈಲುಗಳ ಸೇವೆ ವಿಸ್ತರಣೆ; ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಕೆಲವು ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿ ನೈರುತ್ಯ ರೈಲ್ವೆ ವಲಯ ಆದೇಶಿಸಿದೆ. ಈ ರೈಲುಗಳ ಸಮಯ, ಬೋಗಿಗಳ ಸಂಯೋಜನೆ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರತಿ ಶನಿವಾರ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06547 ಕೆ.ಎಸ್.ಆರ್ ಬೆಂಗಳೂರು-ವೇಲಂಕಣಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ಮೊದಲು ಜುಲೈ 8ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ರೈಲಿನ ಸೇವೆಯನ್ನು ಜುಲೈ 15 ರಿಂದ ಸೆಪ್ಟೆಂಬರ್ 30 ರವರೆಗೆ (12 ಟ್ರಿಪ್) ವಿಸ್ತರಿಸಲಾಗುತ್ತಿದೆ.
ಪ್ರತಿ ಶನಿವಾರ ವೇಲಂಕಣಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06548 ವೇಲಂಕಣಿ - ಕೆ.ಎಸ್.ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ಮೊದಲು ಜುಲೈ 8 ರವರೆಗೆ ಓಡಿಸಲು ತೀರ್ಮಾನಿಸಲಾಗಿತ್ತು. ಈಗ ರೈಲಿನ ಸೇವೆಯನ್ನು ಜುಲೈ 15 ರಿಂದ ಸೆಪ್ಟೆಂಬರ್ 30 ರವರೆಗೆ (12 ಟ್ರಿಪ್) ವಿಸ್ತರಿಸಿ ಆದೇಶಿಸಲಾಗಿದೆ.












Click it and Unblock the Notifications