Rani Chennamma Express: ರೈಲಿನಲ್ಲಿ ರೈಲ್ವೆ ಅಧಿಕಾರಿಯದ್ದೇ ದಾಖಲೆಗಳ ಕಳವು, ಪ್ರಯಾಣಿಕರು ಹೇಳೋದೇನು?
ಬೆಂಗಳೂರು, ಫೆಬ್ರವರಿ, 02: ರೈಲುಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಷ್ಟು ದಿನ ಪ್ರಯಾಣಕರ ಲಗೇಜ್, ವಸ್ತಗಳು ಕಳ್ಳತನ ಆಗಿರುವ ಬಗ್ಗೆ ವರದಿ ಆಗುತ್ತಿದ್ದವು. ಆದರೆ ಇದೀಗ ರೈಲ್ವೇ ಅಧಿಕಾರಿಯದ್ದೇ ಲಗೇಟ್ ಕಳವು ಆದ ಘಟನೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಇದಕ್ಕೆ ಪ್ರಯಾಣಿಕರ ಪ್ರತಿಕ್ರಿಯೆಗಳು ಹೇಗಿವೆ ಎಂದು ಇಲ್ಲಿ ತಿಳಿಯಿರಿ.
ಅಪರಿಚಿತ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರು ವಿಭಾಗದ ಮಹಿಳಾ ಉನ್ನತ ರೈಲ್ವೆ ಅಧಿಕಾರಿ ಮತ್ತು ಅವರ ಸಹ ಪ್ರಯಾಣಿಕರ ಲಗೇಜ್ ಅನ್ನು ಕಳವು ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೇ ಈ ಪರಿಸ್ಥಿತಿ ಉಂಟಾದರೆ ಸಾಮಾನ್ಯ ಪ್ರಯಾಣಿಕರ ಗತಿಯೇನು ಎನ್ನುವ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಎಸಿ ಫಸ್ಟ್ ಕ್ಲಾಸ್ ಕಂಪಾರ್ಟ್‌ಮೆಂಟ್‌ನ ಕ್ಯಾಬಿನ್‌ನಲ್ಲಿ ಮಹಿಳಾ ಅಧಿಕಾರಿ ಪ್ರಯಾಣ ಮಾಡುತ್ತಿದ್ದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಅವರ ಕಳವಾದ ಲಗೇಜ್‌ನಲ್ಲಿ ಇಲಾಖೆಯ ಕಡತಗಳೂ ಇವೆ ಎಂದು ಮೂಲಗಳಿಂದ ತಿಳಿದುಬಂದಿದೆ.
2023ರ ಜನವರಿ 24ರಂದು ರಾತ್ರಿ 11 ಗಂಟೆಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರೈಲಿಗೆ ಹತ್ತಿದ್ದರು. ಅವರ ಸೀಟುಗಳು ಹೆಚ್ 1 ಕೋಚ್‌ನಲ್ಲಿ ನಾಲ್ಕು ಬರ್ತ್‌ಗಳಿರುವ ಕ್ಯಾಬಿನ್‌ನಲ್ಲಿದ್ದವು. ಮರುದಿನ ಬೆಳಗ್ಗೆ 5:20ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಲು ಮುಂದಾದಾಗ ತಮ್ಮ ಸಾಮಾನು ನಾಪತ್ತೆ ಆಗಿರುವುದು ಗೊತ್ತಾಗಿದೆ. ಹುಬ್ಬಳ್ಳಿಯ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 379 ಅಡಿಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.
ಆ ಬೋಗಿಯಲ್ಲಿದ್ದ ನಾಲ್ವರು ಪ್ರಯಾಣಿಕರಲ್ಲಿ ಇಬ್ಬರ ವಸ್ತುಗಳನ್ನು ಮಾತ್ರ ಕಳವು ಮಾಡಲಾಗಿದೆ. ರೈಲ್ವೇ ಕಡತಗಳನ್ನು ಒಳಗೊಂಡ ಎಡಿಎಂಆರ್‌ನ ಅಲೆನ್ ಸೋಲಿ ಟ್ರಾಲಿ ಸೂಟ್ ಕೇಸ್ ಅನ್ನು ಕಳವು ಮಾಡಲಾಗಿದೆ. ಅಲ್ಲದೆ ಅಧಿಕಾರಿಯ ಹೈಡಿಸೈನ್ ಕೈಚೀಲ ಮತ್ತು 4 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳನ್ನು ಕೂಡ ಕಳವು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾದ್ದರೆ ಎಂದು ತಿಳಿದುಬಂದಿದೆ.
ರೈಲ್ವೆಯ ಸೌಂಡ್ ಗುತ್ತಿಗೆದಾರ ರಾಜೇಶ್ ಕುಮಾರ್ ಮತ್ತೊಬ್ಬರ ವಸ್ತುಗಳು ಕಳುವಾಗಿವೆ. ಸುಮಾರು 60,000 ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಹೊಂದಿದ್ದ ತನ್ನ ಲೂಯಿ ವಿಟಾನ್ ಬ್ಯಾಗ್ ಅನ್ನು ಕಳೆದುಕೊಂಡಿರುವುದಾಗಿ ಹೇಳಿದರು. ರೈಲ್ವೇ ಕನ್‌ಸ್ಟ್ರಕ್ಷನ್ ಅಧಿಕಾರಿಯೊಬ್ಬರ ಪತ್ನಿ ಲಲಿತಾ ರಾಮಗೋಪಾಲ್ ಕೋಚ್‌ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ ನಾಪತ್ತೆಯಾಗಿ ನಂತರ ರೈಲಿನ ವಾಶ್‌ರೂಮ್‌ನಲ್ಲಿ ಪತ್ತೆ ಆಗಿದೆ. ಅವರ ಚಾರ್ಜರ್ ಮಾತ್ರ ಕದ್ದಿದ್ದಾರೆ. ಆದರೆ ದೂರು ನೀಡಲಿಲ್ಲ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಎಸ್‌ಡಬ್ಲ್ಯೂಆರ್, ಮಂಜುನಾಥ್ ಪ್ರಸಾದ್ ಅಪರಾಧಿ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ವ್ಯಕ್ತಿಯನ್ನು ಪತ್ತೆ ಹಚ್ಚುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ ಅಂತಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ ಅಂತಾ ಕನ್ನಡಪ್ರಭ ವರದಿ ಮಾಡಿದೆ.












Click it and Unblock the Notifications