Rajdhani Express Train: ಯಾದಗಿರಿಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅವಕಾಶ: ಸಮಯಗಳ ವಿವರ ತಿಳಿಯಿರಿ
Rajdhani Express Train: ಭಾರತೀಯ ರೈಲ್ವೆಯು ಪ್ರಯಾಣಿಕೆ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಹೊಸದಿಲ್ಲಿ-ಬೆಂಗಳೂರು-ಬೆಂಗಳೂರು-ದಿಲ್ಲಿಗೆ ನಿತ್ಯ ಸಂಚಾರ ಮಾಡುವ ರಾಜಧಾನಿ ಎಕ್ಸಪ್ರೆಸ್ ರೈಲಿಗೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ಯಾವಾಗಿನಿಂದ ಹಾಗೂ ಸಮಯಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೇ ಜನವರಿ 27, 2025ರಿಂದ ಯಾದಗಿರಿಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ತುಂಬಾ ದಿನಗಳ ಮತ್ತೊಂದು ಬೇಡಿಕೆ ಈಡೇರಿದಂಯೆ ಆಗಿದೆ. ಇದರಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಯಾದಗಿರಿಯಿಂದ ರೈಲು ಸಂಪರ್ಕ ಕಲ್ಪಿಸಿದಂತಾಗಿದೆ.

* ನವದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ರೈಲು ನಿಲ್ದಾಣಕ್ಕೆ ಸಂಚರಿಸುವ 22692 ಸಂಖ್ಯೆಯ ರಾಜಧಾನಿ ಎಕ್ಸಪ್ರೆಸ್ ರೈಲು ಜನವರಿ 27ರಿಂದ ರಾತ್ರಿ 8:38ಕ್ಕೆ ಆಗಮಿಸಲಿದ್ದು, 8.40ಕ್ಕೆ ನಿರ್ಹಮಿಸಲಿದೆ.
* ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ನವದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಸಂಚರಿಸುವ 22691 ಸಂಖ್ಯೆಯ ರಾಜಧಾನಿ ಎಕ್ಸಪ್ರೆಸ್ ರೈಲು ಜಜನವರಿ 28ರಿಂದ ನಸುಕಿನ 3:03ಕ್ಕೆ ಆಗಮಿಸಲಿದ್ದು, 3.05ಕ್ಕೆ ಹೊರಡಲಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ವಲಯದ ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾ ಕೇಂದ್ರವಾದ ಯಾದಗಿರಿ ರೈಲು ನಿಲ್ದಾಣದಲ್ಲಿ ರಾಜಧಾನಿ ಎಕ್ಸಪ್ರೆಸ್ ಸೇರಿ ತುಂಬಾ ರೈಲುಗಳು ನಿಲುಗಡೆ ಆಗುತ್ತಿರಲಿಲ್ಲ. ಆದ್ದರಿಂದ ಜಿಲ್ಲೆಯ ಜನ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಸಂಚರಿಸುವ ದೂರದ ಊರಿನ ರೈಲುಗಳ ಸಂಚಾರದಿಂದ ವಂಚಿತರಾಗಿದ್ದರು. ಆದರೆ, ಇದೀಗ ಹೋರಾಟದ ಫಲವಾಗಿ ವಂದೇ ಭಾರತ್ ಹಾಗೂ ರಾಜಧಾನಿ ಎಕ್ಸಪ್ರೆಸ್ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಹೋರಾಟದ ಫಲವಾಗಿ ಕಳೆದ ಆಗಸ್ಟ್ 3ರಂದು ಯಾದಗಿರಿಯಲ್ಲಿ ವಂದೇ ಭಾರತ ಎಕ್ಸಪ್ರೆಸ್ ರೈಲು ನಿಲುಗಡೆಗೆ ಗ್ರೀನ್ ಸಿಗ್ನಲ್ ತೋರಲಾಗಿತ್ತು. ಇದೀಗ ಜನವರಿ 27ರಿಂದ ರಾಜಧಾನಿ ಎಕ್ಸಪ್ರೆಸ್ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ಮುಂದೆ ರಾಷ್ಟ್ರ ರಾಜಧಾನಿ ನವದೆಹಲಿದೆ ಪಕ್ಕದ ಜಿಲ್ಲೆಯ ರೈಲು ನಿಲ್ದಾಣಗಳಿಂದ ಹೋಗುವುದು ತಪ್ಪಿದಂತಾಗಲಿದೆ.
ಇನ್ಮುಂದೆ ನೇರವಾಗಿ ಯಾದಗಿರಿ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಬಹುದಾಗಿದೆ. ಗುಂತಕಲ್ ರೈಲ್ವೆ ವಿಭಾಗದಲ್ಲಿ ತಿರುಪತಿ ಹೊರತುಪಡಿಸಿ ಯಾದಗಿರಿ ರೈಲು ನಿಲ್ದಾಣದಿಂದ ಅತೀ ಹೆಚ್ಚು ಆದಾಯ ಬರುತ್ತಿದೆ ಎಂದು ತಿಳಿದುಬಂದಿದೆ. ಈ ರೈಲು ನಿಲ್ದಾಣದ ದಿನದ ಆದಾಯ 6 ಲಕ್ಷ ರೂಪಾಯಿ ಆಗಿದ್ದು, ಪ್ರತಿ ನಿತ್ಯ ಸರಿ ಸುಮಾರು 10,000 ಪ್ರಯಾಣಿಕರು ಈ ನಿಲ್ದಾಣದಿಂದ ಪ್ರಯಾಣಿಸುತ್ತಾರೆ
ಕಳೆದ ಆಗಸ್ಟ್ 3ರಂದು ಯಾದಗಿರಿಯಲ್ಲಿ ವಂದೇ ಭಾರತ ಎಕ್ಸಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು, ನಿತ್ಯವೂ ಸಂಚರಿಸುವ ರಾಜಧಾನಿ ಎಕ್ಸಪ್ರೆಸ್ ರೈಲಿಗೆ ಯಾದಗಿರಿಯಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿಕೊಂಡಿದ್ದರು. ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ಸಚಿವ ವಿ.ಸೋಮಣ್ಣ ಮಾತನಾಡಿ, ರಾಜಧಾನಿ ಎಕ್ಸಪ್ರೆಸ್ ರೈಲು ಯಾದಗಿರಿಯಲ್ಲಿ ನಿಲುಗಡೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಇದೀಗ ಆ ಭರವಸೆ ಈಡೇರಿದೆ.











Click it and Unblock the Notifications