Indian Railway: ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಶಾಕ್‌.!

Indian Railway: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ನಿಯಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಆದರೆ, ಇದೀಗ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ. ಇಲ್ಲಿಯವರೆಗೂ 120 ದಿನಗಳ ಮುಂಚೆಯೇ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಿತ್ತು. ಆದರೆ ಇದೀಗ ಈ ಅವಧಿಯನ್ನು ಕಡಿಮೆ ಮಾಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.

120 ದಿನಗಳಿಗೂ ಮುಂಚಿತವಾಗಿ ರೈಲು ಸೀಟು ಕಾಯ್ದಿರಿಸಲು ಇದೀಗ ಇರುವ ನಿಯಮವನ್ನು ಇದೇ ನವೆಂಬರ್‌ 1ರಿಂದ 60 ದಿನಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಮಂಡಳಿ ಇಂದು (ಅಕ್ಟೋಬರ್ 17) ಪ್ರಕಟ ಮಾಡಿದೆ.

Railway Department Shocking news to Passengers know details

ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಅವಧಿ ನಿಯಮದಂತೆ ಅಕ್ಟೋಬರ್ 31ರ ವರೆಗೆ ಕಾಯ್ದಿರಿಸಿದ ಎಲ್ಲಾ ಟಿಕೆಟ್‌ಗಳಿಗೆ 120 ದಿನಗಳ ಅವಕಾಶ ಇರುತ್ತದೆ. ಆದರೆ ಟಿಕೆಟ್‌ ಕಾಯ್ದಿರಿಸುವುಕೆಯ ಅವಧಿ ಕಡಿತಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರೆಬೇಕಿದೆ.

ಆದರೆ ವಿದೇಶಿ ಪ್ರವಾಸಿಗರಿಗೆ ಕಲ್ಪಿಸಲಾಗಿರುವ 365 ದಿನಗಳ ಅವಕಾಶದಲ್ಲಿ ಯಾವುದೇ ಬದಲಾವಣೆಯಿಲ್ಲ. ರೈಲ್ವೆ ಇಲಾಖೆಯು, ಎಪಿಆರ್‌ ಮಿತಿಯನ್ನು 2015ರ ಮಾರ್ಚ್‌ 25ರಂದು 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಿತ್ತು. ಆದರೆ ಇದೀಗ ಮತ್ತೆ ಕಡಿತಕ್ಕೆ ಮುಂದಾಗಿದೆ.

ದೀಪಾವಳಿ ವಿಶೇಷ ರೈಲುಗಳ ಪಟ್ಟಿ: ದೀಪಾವಳಿ ಹಿನ್ನೆಲೆ ಬೆಂಗಳೂರಿನಿಂದ ಈ ಮಾರ್ಗಗಳಿಗೆ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ನೀಡಲು ಮುಂದಾಗಿದೆ.

ಅಕ್ಟೋಬರ್ 17ರಿಂದ ನವೆಂಬರ್ 7ರ ವರೆಗೆ ಈ ವಿಶೇಷ ರೈಲುಗಳು ಸೇವೆ ಒದಗಿಸಲಿದ್ದು, ಪ್ರಮುಖವಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಡುವ ವಿಶೇಷ ರೈಲು ಸೇವೆ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರಿನಿಂದ ಜೋಧಪುರದ ಭಗತ್ ರೈಲ್ವೇ ನಿಲ್ದಾಣಕ್ಕೆ, ಹುಬ್ಬಳ್ಳಿಯಿಂದ ಉತ್ತರಖಂಡದ ರಿಷಿಕೇಷ್‌ಗೂ ವಿಶೇಷ ರೈಲು ಸೇವೆ ಒದಗಿಸಲಿದೆ. ಅಲ್ಲದೆ, ಶೀಘ್ರದಲ್ಲೇ ಬೆಂಗಳೂರಿನಿಂದ ಕರ್ನಾಟಕದ ವಿವಿಧ ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ವಿಶೇಷ ರೈಲು ವೇಳಾಪಟ್ಟಿ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

* ರೈಲು ಸಂಖ್ಯೆ 07363/07364 ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರಾರಿ ರಿಷಿಕೇಷ್ ಮಾರ್ಗದಲ್ಲಿ ವಾರದಲ್ಲಿ ವಿಶೇಷ ನಾಲ್ಕು ಟ್ರಿಪ್ ಒಡಲಿದೆ. 07363 ರೈಲು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾತ್ರಿ 8:30ಕ್ಕೆ ಹೊರಡಲಿದೆ. ಅಕ್ಟೋಬರ್ 14ರಿಂದ ನವೆಂಬರ್ 4ರ ವರೆಗೆ ಈ ವಿಶೇಷ ರೈಲು ಸೇವೆ ಒದಗಿಸಲಿದೆ. ಇನ್ನು ಇದೇ ರಿಷಿಕೇಶ್‌ದಿಂದ ಮರಳಿ ಹುಬ್ಬಳ್ಳಿಗೆ ಬರುವ ರೈಲು ಸಂಖ್ಯೆ 07364, ರಿಷಿಕೇಶ್‌ದಿಂದ ಬೆಳಗ್ಗೆ 6:15ಕ್ಕೆ ಹೊರಡಲಿದ್ದು, ಇದು ಅಕ್ಟೋಬರ್ 17ರಿಂದ ನವೆಂಬರ್ 7ರ ವರೆಗೆ ಸೇವೆ ಒದಗಿಸಲಿದೆ.

ಹುಬ್ಬಳ್ಳಿಯಿಂದ ಹೊರಡುವ ಈ ರೈಲು ಧಾರವಾಡ-ಲೊಂಡಾ-ಬೆಳಗಾವಿ-ಪುಣೆ-ಗ್ವಾಲಿಯರ್-ಮಥುರಾ-ಹಜ್ರತ್, ನಿಜಾಮುದ್ದೀನ್-ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಆಗಲಿದೆ. ಬಳಿಕ ರಿಷಿಕೇಶ್ ತಲುಪಲಿದ್ದು, ರಿಷಿಕೇಶ್‌ದಿಂದ ವಾಪಾಸ್‌ ಬರುವ ರೈಲು ಕೂಡ ಇದೇ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ತಿಳಿಸಿದೆ.

ರೈಲು ಸಂಖ್ಯೆ 06587/06588 ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಜೋಧಪುರದ ಭಗತ್ ಕೊಥಿ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ಈ ರೈಲು ಬೆಂಗಳೂರಿನಿಂದ ಸಂಜೆ 5:45ಕ್ಕೆ ಹೊರಡಲಿದೆ. ಇನ್ನು ಭಗತ್ ಕೊಥಿ ರೈಲು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗ ಈ ರೈಲು ಬೆಂಗಳೂರಿನತ್ತ ವಾಪಾಸ್‌ ಆಗಲಿದೆ. ಈ ರೈಲು ಬೆಂಗಳೂರಿನ ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಟು ಬಾಣಸವಾಡಿ-ತುಮಕೂರು-ದಾವಣಗೆರೆ-ಪುಣೆ-ಸೂರತ್-ವಡೋದರ ಹಾಗೂ ಅಬು ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+