Property Price: ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇನಿಂದ ಯಾವೆಲ್ಲಾ ಜಿಲ್ಲೆಗಳಲ್ಲಿ ಭೂಮಿ ಬೆಲೆ ಏರಿಕೆ?

Bengaluru-Mangaluru Expressway: ದೇಶದ ಬಹುನಿರೀಕ್ಷತ ಹೆದ್ದಾರಿಗಳಲ್ಲಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ ವೇ ಕೂಡ ಒಂದಾಗಿದೆ. ಈಗಾಗಲೇ ಕೆಲವು ಸಂಚಾರಕ್ಕೆ ಮುಕ್ತಾವಾಗಿದ್ದು, ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಹಾಗಾದರೆ ಬೆಂಗಳೂರು-ಮಂಗಳೂರು ಹೆದ್ದಾರಿ ಕಾಮಗಾರಿ ಯಾವಾಗ ಆರಂಭವಾಗಲಿದೆ. ಹಾಗೂ ಇದು ಪೂರ್ಣಗೊಂಡರೆ ಯಾವ ಭಾಗದ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸಾಮಾನ್ಯವಾಗಿ ಹೆದ್ದಾರಿಗಳ ಪಕ್ಕದಲ್ಲಿರುವ ನಗರ, ಊರುಗಳು ಅತೀ ಬೇಗನೇ ಅಭಿವೃದ್ಧಿ ಆಗಿಬಿಡುತ್ತದೆ. ಹಾಗೆಯೇ ಇದೀಗ 2028ರಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿರುವ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ ವೇನಿಂದ ಹಲವು ನಗರಗಳ ಅಭಿವೃದ್ಧಿಗೆ ತುಂಬಾ ಸಹಾಯಕವಾಗಲಿದೆ.

Property Price will be Increasing in these parts from Bengaluru-Mangaluru Expressway

ಯಾವೆಲ್ಲಾ ನಗರಗಳಲ್ಲಿ ಹಾದುಹೋಗಲಿದೆ?: ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು, ಕುಣಿಗಲ್‌, ಹಾಸನ, ಸಕಲೇಶಪುರ, ಬಂಟ್ವಾಳ, ಮಂಗಳೂರು ಮೂಲಕ ಹಾದುಹೋಗಲಿದೆ. ಅಲ್ಲದೆ, ಈ ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಮತ್ತು ಆರ್ಥಿಕತೆಯಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಆಗಲಿದೆ. ವಿಶೇಷವಾಗಿ ಹಾಸನ ಮತ್ತು ಮಂಗಳೂರು ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಯಾಣದ ಸಮಯ ಕಡಿತ: ಪ್ರಸ್ತುತ ಇದೀಗ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣ ಮಾಎಲು ಸುಮಾರು 7ರಿಂದ 8 ಗಂಟೆಗಳು ಬೇಕಾಗುತ್ತದೆ. ಇದರ ದೂರ 416 ಕಿಲೋ ಮೀಟರ್ ಇದ್ದು, ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ದೂರವು 335 ಕಿಲೋ ಮೀಟರ್‌ಗೆ ಇಳಿಕೆಯಾಗಲಿದೆ ಮತ್ತು ಪ್ರಯಾಣದ ಸಮಯ ಕೇವಲ 3ರಿಂದ 4 ಗಂಟೆಗಳವರೆಗೆ ಕಡಿಮೆಯಾಗಲಿದೆ. ಇದರಿಂದ ಸಾರಿಗೆ ಸಂಪರ್ಕದಲ್ಲಿ ದಡ್ಡ ಅಭಿವೃದ್ಧಿಯಾದಂತಾಗಲಿದೆ.

ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ವೇ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ ಮಾಡಿದೆ. ಇದು 6 ಪಥಗಳೊಂದಿಗೆ 335 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿರಲಿದೆ. ಈ ಯೋಜನೆಯ ಕಾಮಗಾರಿಯ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದೆ.

ಇದು ಪ್ರಮುಖವಾಗಿ ಬೆಂಗಳೂರು ಮತ್ತು ಮಂಗಳೂರನ್ನು ಹಾಸನ ಮೂಲಕ ಸಂಪರ್ಕಿಸುವ ಹೊಸ ಎಕ್ಸ್‌ಪ್ರೆಸ್‌ವೇ ಆಗಿದೆ. ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ, ಬೆಂಗಳೂರು-ಮಂಗಳೂರು ನಗರಗಳ ನಡುವಿನ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಇದರಿಂದ ಸಮಯ ಉಳಿತಾಯ ಆದಂತಾಗಲಿದ್ದು, ವಾಹನ ಸವಾರರಿಗೆ ತುಂಬಾ ಸಹಕಾರಿಯಾಗಲಿದೆ.

ಕಾರಗಾರಿ ಆರಂಭ ಯಾವಾಗ?: ಬೆಂಗಳೂರು-ಮಂಗಳೂರು ನಡುವಿನ ಸಂಪರ್ಕವನ್ನು ಸುಧಾರಿಸುವ ಹಿನ್ನೆಲೆ ಈ ಹೆದ್ದಾರಿ ನಿರ್ಮಾಣ ಕಾಮಗಾರಿ 2028ರ ವೇಳೆಗೆ ಪ್ರಾರಂಭ ಆಗಲಿದೆ. ಇದರ ಡಿಪಿಆರ್‌ ಪರ್ಣಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿ ಆರಂಭ ಆಗಲಿದೆ ಎನ್ನುವ ಮಾಹಿತಿ ಇದೆ.

ಇದು ಪೂರ್ಣಗೊಂಡರೆ, ರಾಜ್ಯದ ಸಾರಿಗೆಯಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ. ಇದೀಗ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಹೆಚ್ಚಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಮಾರ್ಗವು ಭೂಕುಸಿತ ಮತ್ತು ಇತರ ಅಡಚಣೆಗಳಿಗೆ ಒಳಗಾಗುತ್ತಿದೆ. ಎಕ್ಸ್‌ಪ್ರೆಸ್ ನಿರ್ಮಾಣವಾದ್ರೆ ಈ ಎಲ್ಲಾ ಸಮಸ್ಯೆಗಳಿಗು ಮುಕ್ತಿ ಸಿಕ್ಕಂತಾಗಲಿದೆ.

ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ ವೇ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹಾದುಹೋಗಲಿದೆ. ಎಕ್ಸ್‌ಪ್ರೆಸ್‌ವೇ ಹಾಸನದ ಮೂಲಕ ಹಾದುಹೋಗಲಿರುವ ಹಿನ್ನೆಲೆ ಈ ಭಾಗದಲ್ಲಿ ಸಾರಿಗೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಿದಂತಾಗಲಿದೆ. ದಟ್ಟಣೆ ಕಡಿಮೆ ಮಾಡಲಿದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜೊತೆಗೆ ಪ್ರವಾಸೋದ್ಯ, ಉದ್ಯಮ, ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿಗೆ ತುಂಬಾ ಸಹಕಾರಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+