NWKRTC: ಪಣಜಿ-ಬೆಂಗಳೂರು ಐರಾವತ ಬಸ್, ದರ ಮತ್ತು ವೇಳಾಪಟ್ಟಿ

ಹುಬ್ಬಳ್ಳಿ, ಸೆಪ್ಟೆಂಬರ್ 01: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ವಾ.ಕ.ರ.ಸಾ.ನಿ) ಅಂತರರಾಜ್ಯ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಪ್ರವಾಸಿ ತಾಣವಾದ ಗೋವಾ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ನಿಗಮ ಐಷಾರಾಮಿ ಐರಾವತ ಕ್ಲಬ್ ಕ್ಲಾಸ್ ಬಸ್‌ ಓಡಿಸುತ್ತಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಜನರು ಬಸ್ ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ವಾ.ಕ.ರ.ಸಾ.ನಿ ಗೋವಾದ ಪಣಜಿ ಮತ್ತು ಕರ್ನಾಟಕದ ಬೆಂಗಳೂರು ನಡುವೆ ಪ್ರವಾಸಿಗರ ಅನುಕೂಲಕ್ಕಾಗಿ ಐಷಾರಾಮಿ ಐರಾವತ ಕ್ಲಬ್ ಕ್ಲಾಸ್ ಬಸ್ ಓಡಿಸುತ್ತಿದೆ. ಈ ಬಸ್‌ನ ಪ್ರಯಾಣ ದರ ಮತ್ತು ಮಾರ್ಗದ ವಿವರಗಳನ್ನು ನೀಡಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್‌ಗೆ ಸಹ ಅವಕಾಶ ನೀಡಲಾಗಿದೆ.

Panaji Bengaluru NWKRTC Airavat Club Class Bus Schedule

ಬಸ್ ದರ, ವೇಳಾಪಟ್ಟಿ: ಪಣಜಿ ಮತ್ತು ಬೆಂಗಳೂರು ನಡುವಿನ ಐರಾವತ ಕ್ಲಬ್ ಕ್ಲಾಸ್ ಬಸ್ ಪ್ರಯಾಣ ದರ 1363 ರೂ.ಗಳು. ಪಣಜಿಯಿಂದ ಹೊರಡುವ ಬಸ್ ಪೊಂಡಾ, ಧಾರವಾಡ, ಹುಬ್ಬಳ್ಳಿ ಮೂಲಕ ಬೆಂಗಳೂರು ನಗರವನ್ನು ತಲುಪಲಿದೆ ಎಂದು ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

ಐರಾವತ ಕ್ಲಬ್ ಕ್ಲಾಸ್ ಬಸ್ ಬೆಂಗಳೂರು ಬಿಡುವ ವೇಳೆ 20:30 ಮತ್ತು ಬೆಂಗಳೂರು ತಲುಪುವ ವೇಳೆ 06:00. ಈ ಬಸ್ ಪಣಜಿ ಬಿಡುವ ವೇಳೆ 19:16 ಮತ್ತು ತಲುಪುವ ವೇಳೆ 07:30 ಆಗಿದೆ.

ಪ್ರಯಾಣಿಕರು ಪಣಜಿ-ಬೆಂಗಳೂರು ಐರಾವತ ಕ್ಲಬ್ ಕ್ಲಾಸ್ ಬಸ್‌ ಸೇವೆಯ ಉಪಯೋಗ ಪಡೆದುಕೊಳ್ಳಬೇಕು. ಆನ್‌ಲೈನ್ ಟಿಕೆಟ್ ಬುಕಿಂಗ್ ಮತ್ತು ವಿವರಗಳಿಗಾಗಿ http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ರಾಮದುರ್ಗ-ಬೆಂಗಳೂರು ಪಲ್ಲಕ್ಕಿ ಬಸ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಮದುರ್ಗ-ಬೆಂಗಳೂರು ನಡುವೆ ಪಲ್ಲಕ್ಕಿ ಎಸಿ ಸ್ಲೀಪರ್ ಬಸ್‌ಗಳನ್ನು ಓಡಿಸುತ್ತಿದೆ. ಈ ಮಾರ್ಗದ ಪ್ರಯಾಣ ದರ 1070 ರೂ. ಎಂದು ನಿಗದಿ ಮಾಡಲಾಗಿದೆ.

ಈ ಬಸ್ ನರಗುಂದ, ನವಲಗುಂದ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮಾರ್ಗವಾಗಿ ಸಂಚಾರವನ್ನು ನಡೆಸಲಿದೆ. ಧಾರವಾಡ ಗ್ರಾಮಾಂತರ ವಿಭಾಗ ಈ ಬಸ್ ಸೇವೆಯನ್ನು ಆರಂಭಿಸಿದೆ. ಪ್ರಯಾಣಿಕರು ಬಸ್ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಬಸ್ ರಾಮುದುರ್ಗ ಬಿಡುವ ವೇಳೆ 20:03, ಬೆಂಗಳೂರು ತಲುಪುವ ವೇಳೆ 07:10. ಬೆಂಗಳೂರು ನಗರ ಬಿಡುವ ವೇಳೆ 21:15 ಮತ್ತು ರಾಮದುರ್ಗ ತಲುಪುವ ವೇಳೆ 07:30 ಆಗಿದೆ ಎಂದು ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

ಬೆಳಗಾವಿ-ಲಾತೂರ ನಾನ್ ಎಸಿ ಸ್ಲೀಪರ್ ಬಸ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೆಳಗಾವಿ ವಿಭಾಗ ಬೆಳಗಾವಿ-ಲಾತೂರ ನಡುವೆ ನಾನ್ ಎಸಿ ಪಲ್ಲಕ್ಕಿ ಸ್ಲೀಪರ್ ಬಸ್ ಓಡಿಸುತ್ತಿದೆ. ಈ ಬಸ್ ಲೋಕಾಪುರ, ಮುಧೋಳ, ಜಮಖಂಡಿ ಮೂಲಕ ಸಾಗುತ್ತದೆ. ಬಸ್ ಪ್ರಯಾಣ ದರ 924 ರೂ.ಗಳು ಎಂದು ಮಾಹಿತಿ ನೀಡಲಾಗಿದೆ.

ಈ ಬಸ್ ಬೆಳಗಾವಿ ಬಿಡುವ ವೇಳೆ 20:00, ಲಾತೂರ ತಲುಪುವ ವೇಳೆ 06:20. ಲಾತೂರ ಬಿಡುವ ವೇಳೆ 19:30 ಮತ್ತು ಬೆಳಗಾವಿ ತಲುಪುವ ವೇಳೆ 05:30. ಈ ಬೆಳಗಾವಿ-ಲಾತೂರ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆಯ ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್‌ಗಾಗಿ http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+